ಹೈಡ್ರಾಕ್ಸಿಕ್ಲೋರೋಕ್ವಿನ್‌ಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಸಾರ್ವಜನಿಕ ವಲಯದ ದೇಶದ ಏಕೈಕ ಡ್ರಗ್ಸ್ ಕಂಪನಿ ‘ಬೆಂಗಾಲ್ ಕೆಮಿಕಲ್ಸ್ ಆ್ಯಂಡ್ ಫಾರ್ಮಾಸ್ಯುಟಿಕಲ್ಸ್ ಲಿ.(ಬಿಸಿಪಿಎಲ್) ಹಾಗೂ ಅದರ ಸ್ಥಾಪಕ ಆಚಾರ್ಯ ಪ್ರಫುಲ್ಲಚಂದ್ರ ರೇ ಅವರು ಮುನ್ನಲೆಗೆ ಬಂದಿದ್ದಾರೆ. ಈ ಕಂಪನಿಯು ಆ್ಯಂಟಿ ಮಲೇರಿಯಾ ಔಷಧ, ಆ್ಯಂಟಿ ಸ್ನೇಕ್ ವೆನಮ್ ಸೀರಮ್ ಉತ್ಪಾದಿಸುತ್ತಿದೆ. ಸಂಸ್ಥಾಪಕ ರೇ ಅವರ ಬಗ್ಗೆ ಇಲ್ಲಿದೆ ಮಾಹಿತಿ. ಇಡೀ ಜಗತ್ತಿಗೆ ಕಂಟವಾಗಿರುವ ಕೊರೊನಾ ವೈರಸ್‌ಗೆ ಭಾರತ ಸಮೃದ್ಧವಾಗಿ ಉತ್ಪಾದಿಸುವ ಆ್ಯಂಟಿ ಮಲೇರಿಯಾ ಡ್ರಗ್ಸ್ ರಾಮಬಾಣ ಎಂದು ಗೊತ್ತಾಗುತ್ತಿದ್ದಂತೆ ಎಲ್ಲದೇಶಗಳು ಭಾರತಕ್ಕೆ […]