
– ಹರೀಶ್ ಕೇರ. ರಾವಣನಿಂದ ಅಪಹೃತಗೊಂಡ ಸೀತೆಯ ಶೋಧಕ್ಕಾಗಿ ಹನುಮಂತ ಸಮುದ್ರವನ್ನೇ ಹಾರುತ್ತಾನೆ. ಅಲ್ಲಿ ಸೀತೆಯನ್ನು ಕಂಡು, ಆಕೆಯಿಂದ ಚೂಡಾಮಣಿಯನ್ನು ಪಡೆದು, ಮರಳಿ ಸಮುದ್ರದ ಮೇಲೆ ಹಾರಿ ಬರುತ್ತಿರುವಾಗ ಚೂಡಾಮಣಿ ಕೈಜಾರಿ ಸಮುದ್ರದೊಳಗೆ ಬಿತ್ತು. ಕೂಡಲೇ ಆಂಜನೇಯ ಸಮುದ್ರಕ್ಕೆ ಧುಮುಕಿ, ಉಂಗುರವನ್ನು ಹುಡುಕುತ್ತ ನೇರವಾಗಿ ಪಾತಾಳಕ್ಕೆ ಹೋದ. ಅಲ್ಲಿ ಬಲಿ ಚಕ್ರವರ್ತಿಯಿದ್ದ. ಅವನ ಬಳಿ ಹೋಗಿ ಮಾರುತಿ, ಚೂಡಾಮಣಿಯ ಬಗ್ಗೆ ಕೇಳಿದ. ಬಲಿಯೇಂದ್ರ ನೂರಾರು ಚೂಡಾಮಣಿಗಳಿದ್ದ ತಟ್ಟೆಯೊಂದನ್ನು ಹನುಮನ ಮುಂದಿರಿಸಿ, ‘‘ಇದರಲ್ಲಿ ನಿನ್ನ ಚೂಡಾಮಣಿ ಯಾವುದು ತೆಗೆದುಕೋ,’’ […]