ಇದು ವಿಜಯ ಕರ್ನಾಟಕ ಹೇಳಿದ್ದಲ್ಲ, ಕೇಂದ್ರ‌ ಸರಕಾರ‌ ಬಿಡುಗಡೆ ಮಾಡಿದ ಮಾಹಿತಿ…

ದೇಶದ 30% ಸೋಂಕಿಗೆ ತಬ್ಲಿಘಿ ಸಮಾವೇಶ ಲಿಂಕ್‌

– ದೇಶಾದ್ಯಂತ ಪತ್ತೆಯಾದ ಒಟ್ಟು ಕೊರೊನಾ ಪ್ರಕರಣಗಳು 14,378
– ತಬ್ಲಿಘಿ ಜಮಾತ್‌ ಸಮಾವೇಶದ ನಂಟಿರುವ ಸೋಂಕಿತರು 4,291
– ಕೇಂದ್ರ ಆರೋಗ್ಯ ಸಚಿವಾಲಯದಿಂದ ಅಧಿಕೃತ ಮಾಹಿತಿ

ಏಜೆನ್ಸೀಸ್‌ ಹೊಸದಿಲ್ಲಿ
ದೇಶದಲ್ಲಿ ದಾಖಲಾದ ಕೊರೊನಾ ಸೋಂಕು ಪ್ರಕರಣಗಳಲ್ಲಿ ಶೇಕಡಾ 30ಕ್ಕೆ ತಬ್ಲಿಕ್‌ ಜಮಾತ್‌ ಸಮಾವೇಶದ ನಂಟು ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
‘‘ದೇಶಾದ್ಯಂತ ಶನಿವಾರ ಮಧ್ಯಾಹ್ನದವರೆಗಿನ ವರದಿ ಪ್ರಕಾರ ಒಟ್ಟು 14,378 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 4,291 ಪ್ರಕರಣಗಳು ( 29.8%) ಒಂದೇ ಮೂಲದಿಂದ ಹುಟ್ಟಿಕೊಂಡಿವೆ. ದಿಲ್ಲಿಯ ತಬ್ಲಿಘಿ ಜಮಾತ್‌ ಧಾರ್ಮಿಕ ಸಮಾವೇಶದ ಜತೆ ನಂಟು ಹೊಂದಿವೆ,’’ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್‌ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ದೇಶದ 23 ರಾಜ್ಯಗಳಲ್ಲಿ ಸೋಂಕು ಉಲ್ಬಣಕ್ಕೆ ಇದೇ ಕಾರಣ ಎಂದಿರುವ ಲವ ಅಗರ್ವಾಲ್‌, ಯಾವ ರಾಜ್ಯಗಳಲ್ಲಿ ಎಷ್ಟು ಕೊರೊನಾ ಪ್ರಕರಣಗಳಿಗೆ ನಿಜಾಮುದ್ದೀನ್‌ ನಂಟಿದೆ ಎಂಬ ಬಗ್ಗೆಯೂ ಮಾಹಿತಿ ನೀಡಿದ್ದಾರೆ.
‘‘ಸಮಾವೇಶ ನಡೆದ ದಿಲ್ಲಿಯಲ್ಲಿ 1,707 ಪ್ರಕರಣಗಳ ಪೈಕಿ 63% ಸೋಂಕಿತರು ಈ ಧಾರ್ಮಿಕ ಕಾರ್ಯಕ್ರಮದೊಂದಿಗೆ ನಂಟು ಹೊಂದಿದ್ದಾರೆ. ಉತ್ತರ ಪ್ರದೇಶದ ಒಟ್ಟು 849 ಪ್ರಕರಣಗಳಲ್ಲಿ 59% ತಬ್ಲಿಘಿ ಜಮಾತ್‌ ಸಮಾವೇಶದಿಂದ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸೋಂಕು ತಗುಲಿದವರು. ಅಸ್ಸಾಂನ 34 ಪ್ರಕರಣಗಳಲ್ಲಿ ಇಂಥವರ ಪ್ರಮಾಣ ಶೇ. 91ರಷ್ಟಿದೆ,’’ ಎಂದು ಅಗರ್ವಾಲ್‌ ತಿಳಿಸಿದ್ದಾರೆ.

ರಾಜ್ಯದಲ್ಲಿ 101 ಕೇಸಿಗೆ ಲಿಂಕ್‌
ರಾಜ್ಯದಲ್ಲಿ ದಾಖಲಾದ 384 ಪ್ರಕರಣಗಳಲ್ಲಿ 101 ತಬ್ಲಿಘಿಗಳಿಗೆ ಸಂಬಂಧಿಸಿದ್ದು ಎಂದು ರಾಜ್ಯ ಸರಕಾರ ಅಧಿಕೃತವಾಗಿ ಪ್ರಕಟಿಸಿದೆ. ದಿಲ್ಲಿಯ ಸಮಾವೇಶದಲ್ಲಿ ಭಾಗವಹಿಸಿ ರಾಜ್ಯಕ್ಕೆ ಮರಳಿದ್ದ 46 ಮಂದಿಯಿಂದ 55 ಸಂಪರ್ಕಿತರಿಗೆ ಸೋಂಕು ತಗುಲಿದೆ. ಇದರೊಂದಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ರಾಜ್ಯದಲ್ಲಿ 101 ಸೋಂಕು ತಗುಲಿದಂತಾಗಿದೆ. ಈ ನಡುವೆ ನಂಜನಗೂಡಿನ ಜ್ಯುಬಿಲಿಯೆಂಟ್‌ ಕೇಸಿಗೂ ತಬ್ಲಿಘಿ ಲಿಂಕ್‌ ಇದೆ ಎಂದು ಹೇಳಲಾಗಿದೆ. ಬೆಳಗಾವಿಯ ಎಲ್ಲಾ 41 ಪ್ರಕರಣಗಳಿಗೂ ದಿಲ್ಲಿ ನಂಟಿದೆ.

ತಬ್ಲಿಘಿಗಳು ಪರೀಕ್ಷೆಗೆ ಸಹಕರಿಸುತ್ತಿಲ್ಲ. ಆದ್ದರಿಂದಲೇ ಕೊರೊನಾ ಪಾಸಿಟಿವ್‌ ಪ್ರಕರಣ ಹೆಚ್ಚಾಗುತ್ತಿವೆ. ನಂಜನಗೂಡಿನ ಜ್ಯುಬಿಲಿಯೆಂಟ್‌ ಕಾರ್ಖಾನೆಯಲ್ಲೂ ಇದೇ ಆಗಿದೆ.
– ಬಿ.ಸಿ.ಪಾಟೀಲ್‌ ಕೃಷಿ ಸಚಿವ

ನಿಜಾಮುದ್ದೀನ್‌ ನಂಟು
ಅಸ್ಸಾಂ: 34ರಲ್ಲಿ 91%
ಉ.ಪ್ರದೇಶ: 849ರಲ್ಲಿ 59%
ದಿಲ್ಲಿ: 1,707ರಲ್ಲಿ 63%
ತ.ನಾಡು: 1372ರಲ್ಲಿ 84%
ತೆಲಂಗಾಣ: 766ರಲ್ಲಿ 79%
ಆಂಧ್ರ: 603ರಲ್ಲಿ 61%

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top