ಪರಿಸರ ಪ್ರಾಣಿಗಳಿಗೆ ಸ್ವಾತಂತ್ರ್ಯ ತಂದುಕೊಟ್ಟ ಲಾಕ್ ಡೌನ್!!

ಲಾಕ್‌ಡೌನ್‌ನ ಸಾಧಕ ಬಾಧಕಗಳ ವಾಗ್ವಾದ ಏನೇ ಇರಲಿ. ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ಎಲ್ಲವೂ ಬಂದ್‌ ಆಗಿದ್ದರಿಂದ ವಾತಾವರಣ ಪರಿಶುದ್ಧವಾಗಿದೆ. ನದಿ, ಹೊಳೆಗಳು ಪರಿಶುಭ್ರವಾಗಿವೆ. ವನ್ಯಜೀವಿಗಳಿಗೆ ಹೊಸ ಬಗೆಯ ಸ್ವಾತಂತ್ರ್ಯ ಸಿಕ್ಕಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕಾಡಿನ ಸೋಂಕೇ ಇಲ್ಲದ ನಗರಗಳಲ್ಲೂ ಚಿರತೆ, ಜಿಂಕೆ, ಕಾಡುಕೋಣ, ನವಿಲುಗಳು ಮುಕ್ತವಾಗಿ ಸಂಚರಿಸುತ್ತಿವೆ. ರಸ್ತೆಗಳನ್ನೇ ತಮ್ಮ ವಾಸಸ್ಥಾನದ ‘ವಿಸ್ತರಣೆ’ಯಾಗಿಸಿಕೊಂಡಿವೆ. ರಾಜ್ಯಾದ್ಯಂತ ನಾಗರಿಕ ವಲಯಕ್ಕೆ ಲಗ್ಗೆ ಹಾಕಿದ ಹೊಸ ಅತಿಥಿಗಳ ನೋಟ ಇಲ್ಲಿದೆ.

ಬಂದನಾ ಹುಲಿರಾಯ
ಮೈಸೂರು: ಕೊಡಗಿನ ದಕ್ಷಿಣ ಭಾಗದಲ್ಲಿ ಆಗಾಗ ಹುಲಿ ದರ್ಶನ ಕೊಡುತ್ತಿದೆ. ಲಾಕ್‌ಡೌನ್‌ ನಂತರ ಇವುಗಳ ಭೇಟಿ ಹೆಚ್ಚಿದೆ. ಮೇ 3ರಂದು ಹಗಲಿನಲ್ಲೇ ಗೋಣಿಕೊಪ್ಪಲು ಸಮೀಪದ ದೇವನೂರು ಗ್ರಾಮದಲ್ಲಿ ವ್ಯಾಘ್ರವೊಂದು ಸಂಚಾರ ಮಾಡುತ್ತಿತ್ತು ಇದನ್ನು ಸಹನಾ ಎಂಬುವವರು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಕಳೆದ ತಿಂಗಳು 28ರಂದು ಗೋಣಿಕೊಪ್ಪಲಿನಲ್ಲಿ ಮೊಬೈಲ್‌ ನೋಡಿಕೊಂಡು ಬೆಳಗ್ಗೆ ವಾಕಿಂಗ್‌ ಮಾಡುತ್ತಿದ್ದ ವ್ಯಕ್ತಿಯೊಬ್ಬರು ರಸ್ತೆಯಲ್ಲಿ ನಿಂತಿದ್ದ ಕಾಡಾನಾಗೆ ಡಿಕ್ಕಿ ಹೊಡೆದ ನಂತರ ಸೊಂಡಿಲಿನಲ್ಲಿ ಅಪ್ಪಳಿಸಿದರೂ ಪವಾಡ ಸದೃಶವಾಗಿ ಪಾರಾಗಿದ್ದರು. ಉತ್ತರ ಕೊಡಗಿನ ಹೆಬ್ಬಾಲೆ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಲ್ಲಿ ನವಿಲುಗಳ ಸಂಖ್ಯೆ ವಿಪರೀತವಾಗಿದೆ.

ವನ್ಯಜೀವಿಗಳಿಗೆ ನಿರಾಳ
ಮಂಗಳೂರು: ಕರಾವಳಿ ಭೂಭಾಗವು ಪಶ್ಚಿಮ ಘಟ್ಟಗಳಿಂದಾವೃತವಾಗಿದ್ದು, ಈ ಪ್ರದೇಶದಲ್ಲಿ ವನ್ಯ ಜೀವಿಗಳ ಸಂಖ್ಯೆ ಹೆಚ್ಚಿದೆ. ಲಾಕ್‌ಡೌನ್‌ನಿಂದ ಇದ್ದಕ್ಕಿದ್ದಂತೆ ಜನ ಮತ್ತು ವಾಹನ ಸಂಚಾರ ಮಾಯವಾಗಿದ್ದನ್ನು ಕಂಡ ವನ್ಯಜೀವಿಗಳು ರಾಜಾರೋಷವಾಗಿ ರಸ್ತೆಗೆ ಇಳಿದಿದ್ದು ಕಂಡು ಬಂತು. ಅಸೋಡು ಎಂಬಲ್ಲಿ ಜಿಂಕೆಯೊಂದು ಕಾಲಿಗೆ ಗಾಯ ಮಾಡಿಕೊಂಡಿದ್ದ ಸಂದರ್ಭ ಸ್ಥಳೀಯರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಪ್ರಥಮ ಚಿಕಿತ್ಸೆ ನೀಡಿದರು.

ಜಳಕ ಪುಳಕ
ಕಿಂಗ್‌ ಬಾತ್‌: ಬೆಂಗಳೂರಿನ ಆರ್‌ಆರ್‌ನಗರದ ಮನಾಯೊಂದರಲ್ಲಿ ಇಟ್ಟಿರುವ ನೀರಿನ ಬೋಗುಣಿ ಬಳಿ ಪ್ರತಿದಿನ ಮೂರು ಬಾರಿ ಭೇಟಿ ಕೊಡುವ ಕಿಂಗ್‌ಫಿಶರ್‌ ಮನಸ್ಸಿಗೆ ಬಂದಷ್ಟು ಹೊತ್ತು ಜಳಕ ಮಾಡುತ್ತದೆ. ಆನಂತರ ಅಲ್ಲಿರುವ ನುಗ್ಗೆಮರದಲ್ಲಿ ಆಶ್ರಯ ಪಡೆಯುತ್ತದೆ. ಈ ಅಪರೂಪದ ದೃಶ್ಯವನ್ನು ವನ್ಯಜೀವಿ ಕಾರ್ಯಕರ್ತ ಜೋಸೆಫ್‌ ಹೂವರ್‌ ಸೆರೆ ಹಿಡಿದಿದ್ದಾರೆ.

ಪೊಲೀಸರಿಂದ ನವಿಲು ಜಪ್ತಿ
ಚಿಕ್ಕಬಳ್ಳಾಪುರ: ನಗರದ ಜೆಜೆ ಕಾಲೊನಿಯ ನಿವಾಸಿ ನಾಗೇಂದ್ರಕುಮಾರ್‌ ಎಂಬುವರ ಮನಾಯ ಸಮೀಪದಲ್ಲಿ ಮನುಷ್ಯರು ಮತ್ತು ನಾಯಿಗಳನ್ನು ಕಂಡು ಬೆದರಿ ನಿಂತಿದ್ದ ನವಿಲನ್ನು ಹಿಡಿದು ಪೊಲೀಸರಿಗೆ ಕೊಟ್ಟರು. ಅವರು ಅರಣ್ಯ ಇಲಾಖೆಗೆ ಹಸ್ತಾಂತರಿಸಿದರು. ಇದೀಗ ಅದು ಕೈವಾರ ಪಾರ್ಕ್‌ ಸೇರಿದೆ.

ಗೇಟ್‌ ತೆಗೀರಿ…
ಮಂಗಳೂರು: ಕಳೆದ ಮಂಗಳವಾರ ಕಾಡು ಕೋಣವೊಂದು ಮಂಗಳೂರಿಗೆ ಭೇಟಿ ಕೊಟ್ಟಿತ್ತು. ಜನ ನಿಬಿಡ ರಸ್ತೆಗಳಲ್ಲಿ ಕೋಣ ಸವಾರಿ ಕಂಡು ಜನ ಚಕಿತರಾದರು. ಅದನ್ನು ನೋಡಲು ದೊಡ್ಡ ಜಾತ್ರೆಯೇ ಸೇರಿತು. ಆತಂಕಗೊಂಡ ಕೋಣ ಸಿಕ್ಕ ಸಿಕ್ಕ ಎಡೆಗಳಲ್ಲಿ ನುಗ್ಗಿತು. ಕೊನಾಗೆ ಅರಣ್ಯ ಸಿಬ್ಬಂದಿ 5 ಗಂಟೆ ಕಾರ್ಯಾಚರಣೆ ನಡೆಸಿ ಅದನ್ನು ಹಿಡಿಯುವಲ್ಲಿ ಯಶಸ್ವಿಯಾದರು.

ಸಕ್ಕರೆ ನಗರಿ ಅಂದ್ರೆ ಚಿರತೆಗೆ ಅಕ್ಕರೆಯಂತೆ!
ಮಂಡ್ಯ: ಕಳೆದ ಒಂದುವರೆ ತಿಂಗಳಿನ ಲಾಕ್‌ಡೌನ್‌ ಅವಧಿಯಲ್ಲಿ ಚಿರತೆಗಳು ಕಾಣಿಸಿವೆ. ಮಂಡ್ಯ ತಾಲೂಕು ಗರುಡನಹಳ್ಳಿ, ಬಸರಾಳು, ಪಾಂಡವಪುರ ತಾಲೂಕು ಕೊಡಗಹಳ್ಳಿ, ಕ್ಯಾತನಹಳ್ಳಿ, ಕೆ.ಆರ್‌.ಪೇಟೆ ತಾಲೂಕು ಕಿಕ್ಕೇರಿ, ಅಕ್ಕಿಹೆಬ್ಬಾಳು ಸೇರಿದಂತೆ ಹಲವೆಡೆ ಚಿರತೆಗಳು ನುಗ್ಗಿ ನಾಯಿ, ಕುರಿ-ಮೇಕೆಗಳನ್ನು ಸ್ವಾಹಾ ಮಾಡಿವೆ. 15 ದಿನಗಳ ಹಿಂದಷ್ಟೇ ಮಳವಳ್ಳಿಯ ಹಳ್ಳಿಯೊಂದರ ರೇಷ್ಮೆ ಸಾಕಣೆ ಮನಾಗೆ ಚಿರತೆ ನುಗ್ಗಿತ್ತು.

ಜಿಂಕೆ ಜಂಪ್‌
ಕೊಪ್ಪಳ: ಯಲಬುರ್ಗಾ, ಕುಕನೂರು ಹಾಗೂ ಕೊಪ್ಪಳ ತಾಲೂಕುಗಳಲ್ಲಿ ಜಿಂಕೆಗಳ ಜಿಗಿತ ಕಂಡುಬರುತ್ತಿದೆ. ಲಾಕ್‌ಡೌನ್‌ ಜಾರಿಯಾದ ಮೇಲೆ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಲ್ಲಿ ತಮ್ಮದೇ ರಸ್ತೆ ಎನ್ನುವಂತೆ ಮೈ ಮರೆತು ಜಿಗಿದಾಡುತ್ತಿವೆ. ಯಲಬುರ್ಗಾದಲ್ಲಿ ಜಿಂಕೆ ಮರಿಯೊಂದು ತಪ್ಪಿಸಿಕೊಂಡ ಹಿನಾ್ನಲೆಯಲ್ಲಿ ಪ್ರಾಣಿಪ್ರಿಯರು ಅದನ್ನು ಆರೈಕೆಮಾಡಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.

ಶಿವಮೊಗ್ಗವೀಗ ಕಾಡುಕೋಣಗಳ ನೆಲೆವೀಡು
ಶಿವಮೊಗ್ಗ: ಕೊರೊನಾ ಭೀತಿಯಲ್ಲಿ ಜನರು ಹೆಚ್ಚಾಗಿ ಮನಾಯಲ್ಲೇ ಇರುವ ಸಂದರ್ಭದಲ್ಲಿ ಜಿಲ್ಲೆಯ ಸಾಗರ ತಾಲೂಕಿನ ಕೆಲ ಗ್ರಾಮೀಣ ಭಾಗದಲ್ಲಿ ಕಾಡೆಮ್ಮೆ, ಕಾಡುಕೋಣಗಳ ಹಾವಳಿ ವಿಪರೀತವಾಗಿದೆ. ಗದ್ದೆ, ತೋಟದ ಬೆಳೆ, ರೈತಾಪಿ ಸಲಕರಣೆಗಳನ್ನು ಧ್ವಂಸ ಮಾಡುತ್ತಿವೆ. ಹಗಲಿನಲ್ಲೂ ಕಾಡೆಮ್ಮೆ, ಕಾಡುಕೋಣಗಳು ಹಿಂಡುಹಿಂಡಾಗಿ ರಾಜಾರೋಷವಾಗಿ ತಿರುಗಾಡತೊಡಗಿವೆ.

ಹೊಸೂರು, ಗೊರಮನಾ, ಭೀಮನಕೋಣೆ, ಮಂಕಳಲೆ, ಚಿಪ್ಲಿಲಿಂಗದಹಳ್ಳಿ, ಕಲ್ಮನಾ, ಮಾವಿನಸರ, ಗೀಜಗಾರು, ಹಿಂಡೂಮನಾ, ಹಂಸಗಾರು, ಕರ್ಕಿಕೊಪ್ಪ, ಎಡಜಿಗಳಮನಾ, ವರದಹಳ್ಳಿ ಹೀಗೆ ಹಲವು ಗ್ರಾಮಗಳಲ್ಲಿ ಕಾಡು ಕೋಣಗಳು ಬೀಡುಬಿಟ್ಟಿವೆ

ಸಲಗ ಓಡಿಸಿದ ಪಟಾಕಿ
ಚಿಕ್ಕಮಗಳೂರು: ಲಾಕ್‌ ಡೌನ್‌ನಿಂದಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರ ವಿರಳವಾಗಿದ್ದು, ಚಾರ್ಮಾಡಿ ಘಾಟ್‌ನ ಬಾಂಜಾರು ಸಮೀಪ ಸಲಗವೊಂದು ರಸ್ತೆ ಬದಿಯಲ್ಲಿ ಕಾಣಿಸಿಕೊಂಡಿತು. ಕೊನಗೆ ಅರಣ್ಯ ಇಲಾಖೆ ಪಟಾಕಿ ಸಿಡಿಸಿ ಇದನ್ನು ಕಾಡಿಗೆ ಓಡಿಸಿತು.

ಮಾಗಡಿಯಲ್ಲಿ ಮನಾಗೇ ನುಗ್ಗಿದ ಚಿರತೆ
ರಾಮನಗರ: ಕಾಡು ಪ್ರಾಣಿಗಳ ಹಾವಳಿಯಿಂದ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ಮಗುವೊಂದು ಶನಿವಾರವಷ್ಟೇ ಬಲಿಯಾದ ಘಟನಾ ನಡೆದಿದೆ. ಮಾಗಡಿ ತಾಲೂಕಿನ ಬೆಳಗುಂಬ ಗ್ರಾಪಂ ವ್ಯಾಪ್ತಿಯ ಕದರಯ್ಯನಪಾಳ್ಯದಲ್ಲಿ ಚಿರತೆಯೊಂದು ಮೂರು ವರ್ಷದ ಮಗುವನ್ನು ಎಳೆದೊಯ್ದು ಬರ್ಬರವಾಗಿ ಕೊಂದು ಹಾಕಿದೆ. ಕಾಡಿನ ಜೀವಿಯೊಂದು ಮನಾಗೆ ನುಗ್ಗಿದ ಯಾವ ಪೂರ್ವ ನಿದರ್ಶನವೂ ರಾಮನಗರದಲ್ಲಿಲ್ಲ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top