– ಎಸ್ಸೆಸ್ಸೆಲ್ಸಿ 71.80% ರಿಸಲ್ಟ್ | ಆರು ಮಂದಿಗೆ 625/625 ಅಂಕ
– ಗ್ರೇಡಿಂಗ್ ಪದ್ಧತಿ ಜಾರಿ: 10 ಜಿಲ್ಲೆಗಳಿಗೆ ‘ಎ’ಶ್ರೇಣಿ | ಮತ್ತೆ ಬಾಲಕಿಯರೇ ಮೇಲುಗೈ
ವಿಕ ಸುದ್ದಿಲೋಕ ಬೆಂಗಳೂರು.
ಕೊರೊನಾ ಆಂತಕದ ನಡುವೆಯೂ ರಾಜ್ಯದಲ್ಲಿ ನಡೆದ ಎಸ್ಸೆಸ್ಸೆಲ್ಸಿ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಈ ಬಾರಿ ಒಟ್ಟು 6 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಕೊರೊನಾ ಸೋಂಕಿನ ಭೀತಿ ನಡುವೆ ಪರೀಕ್ಷೆ ನಡೆದಿದ್ದು ಒಂದು ಸಾಧನೆಯಾದರೆ, ದಿಟ್ಟತನದಿಂದ ಪರೀಕ್ಷೆ ಎದುರಿಸಿ ವಿದ್ಯಾರ್ಥಿಗಳು ಹಳೆಯ ದಾಖಲೆ ಪುಡಿಗಟ್ಟಿರುವುದು ಮತ್ತೊಂದು ಸಾಧನೆ.
ಹನ್ನೊಂದು ಮಂದಿ 624 ಅಂಕ ಗಳಿಸಿದ್ದಾರೆ. 43 ವಿದ್ಯಾರ್ಥಿಗಳು 623 ಅಂಕ ಪಡೆದಿದ್ದಾರೆ. 56 ವಿದ್ಯಾರ್ಥಿಧಿಗಳು 622 ಅಂಕ ಗಳಿಸಿದ್ದಾರೆ. 68 ಮಂದಿ 621 ಹಾಗೂ 117 ವಿದ್ಯಾರ್ಥಿಗಳು 620 ಅಂಕಗಳನ್ನು ಗಳಿಸಿದ್ದಾರೆ.
ಕನ್ನಡ ಮಾಧ್ಯಮದ ಮಿಂಚು
ದಾವಣಗೆರೆಯ ಹರಿಹರ ತಾಲೂಕಿನ ಎಂಕೆಟಿಕೆ ಪ್ರೌಢಶಾಲೆಯ ಅಭಿಷೇಕ್ ಎಂ, ಚಿಕ್ಕೋಡಿಯ ಎಂ.ಕೆ. ಕವಟಗಿ ಮಠ ಪ್ರೌಢ ಶಾಲೆಯ ಸಹನಾ ಶಂಕರ್ ಕಾಮಗೌಡರ್, ಗೋಕಾಲ ತಾಲೂಕಿನ ಕೆ.ಆರ್. ಹುಕ್ಕೇರಿ ಪ್ರೌಢ ಶಾಲೆಯ ಶ್ರುತಿ ಬಸವನ ಗೌಡ ಪಾಟೀಲ್ 623 ಅಂಕಗಳೊಂದಿಗೆ ಕನ್ನಡ ಮಾಧ್ಯಮದಲ್ಲಿ ಅಗ್ರಗಣಿಗಳಾಗಿ ಮಿಂಚಿದ್ದಾರೆ. 625, 624 ಅಂಕ ಪಡೆದವರೆಲ್ಲರೂ ಇಂಗ್ಲಿಷ್ ಮಾಧ್ಯಮದವರು.
ಶೇ.71.80ರಷ್ಟು ವಿದ್ಯಾರ್ಥಿಗಳು ತೇರ್ಗಡೆ
ಈ ವರ್ಷ ಫಲಿತಾಂಶ 1.9% ಕುಸಿತ
ನಗರಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳೇ ಶೈನಿಂಗ್
1,550 ಶಾಲೆಗಳಿಗೆ 100% ರಿಸಲ್ಟ್,
62 ಶಾಲೆಗಳಿಗೆ ಶೂನ್ಯ ಫಲಿತಾಂಶ
ಪರೀಕ್ಷೆ ಬರೆದವರು -8,11,050
ಪಾಸಾದವರು -5,82,316
ಗ್ರಾಮೀಣ -77.18%
ನಗರ – 73.4%
ಬಾಲಕಿಯರು – 77.74%
ಬಾಲಕರು – 66.41%
ಆಗಸ್ಟ್ 24 – ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು
ಕಡೇ ದಿನ
ಆಗಸ್ಟ್ 20 – ಉತ್ತರ ಪತ್ರಿಕೆ ಸ್ಕ್ಯಾನಿಂಗ್ ಗೆ ಅರ್ಜಿ ಸಲ್ಲಿಸಲು ಕೊನೆಯ ದಿನ
ಕೋವಿಡ್-19ನಂತಹ ಸಂಕಷ್ಟದಲ್ಲೂ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಿ ಉತ್ತಮ ಫಲಿತಾಂಶ ನೀಡಿದ್ದಾರೆ. ಆದರೆ, ಈ ಪರೀಕ್ಷೆಯೇ ಜೀವನದ ಅಂತಿಮ ಗುರಿಯಲ್ಲ. ನಪಾಸಾದ ವಿದ್ಯಾರ್ಥಿಗಳು ಅಧೀರರಾಗಬಾರದು.
– ಎಸ್.ಸುರೇಶ್ಕುಮಾರ್, ಶಿಕ್ಷಣ ಸಚಿವ
ಸೆಪ್ಟೆಂಬರ್ನಲ್ಲಿ ಪೂರಕ ಪರೀಕ್ಷೆ
ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಯನ್ನು ಸೆಪ್ಟೆಂಬರ್ ತಿಂಗಳಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಒಂದೆರಡು ದಿನಗಳಲ್ಲಿ ದಿನಾಂಕ ಪ್ರಕಟಗೊಳ್ಳಲಿದೆ.