ಕೊರೊನಾ ವೈರಸ್ ವಿರುದ್ಧ ಹೋರಾಡಲು ಇಡೀ ದೇಶವನ್ನು ಲಾಕ್‌ಡೌನ್ ಮಾಡಿದ ನಂತರ ಸ್ಥಳೀಯವಾಗಿ ಹಲವು ಬೆಳವಣಿಗೆಗಳು ಆಗುತ್ತಿವೆ. ಉದಾಹರಣೆಗೆ, ಕರ್ನಾಟಕದಲ್ಲಿ ಲಾಕ್‌ಡೌನ್ ಅನ್ನು ಪೊಲೀಸರು ನಿರ್ವಹಿಸಿದ ರೀತಿ ಸರಿಯಾಗಲಿಲ್ಲ ಎಂಬ ಆಕ್ಷೇಪ ಕೇಳಿಬಂತು. ಕೆಲವೆಡೆ ಬೀದಿಗಿಳಿದ ಜನರ ಮೇಲೆ ಪೊಲೀಸರು ಲಾಠಿ ಬೀಸಿದ ಸುದ್ದಿ, ದೃಶ್ಯಗಳು ಇದಕ್ಕೆ ಪೂರಕವಾಗಿ ಕಂಡುಬಂದವು. ವಿರೋಧ ಕಂಡುಬಂದ ಹಿನ್ನೆಲೆಯಲ್ಲಿ, ಪೊಲೀಸರು ಲಾಠಿ ಎತ್ತದೆ ಕಾರ್ಯ ನಿರ್ವಹಿಸುವಂತೆಯೂ ಪೊಲೀಸ್ ಮುಖ್ಯಸ್ಥರು ನಿರ್ದೇಶನ ನೀಡಿದ್ದಾರೆ. ಇನ್ನೊಂದು ಬೆಳವಣಿಗೆಯೆಂದರೆ, ಕೋವಿಡ್-19 ಸಂಬಂಧಿತ ನಾನಾ ಬಗೆಯ ವದಂತಿಗಳಿಗೆ […]