– ಕೋವಿಡ್ ಆತಂಕದ ನಡುವೆಯೂ ಶೇ.90ರಷ್ಟು ವಿದ್ಯಾರ್ಥಿಗಳು ಹಾಜರು. ವಿಕ ಸುದ್ದಿಲೋಕ ಬೆಂಗಳೂರು. ಕೋವಿಡ್-19ನಿಂದಾಗಿ ತೀವ್ರ ಆತಂಕದೊಂದಿಗೆ ಜೂ.25ರಿಂದ ಆರಂಭವಾಗಿದ್ದ 2019-20ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಯಾವುದೇ ಅಹಿತಕರ ಘಟನೆಗಳಿಲ್ಲದೆ ಪೂರ್ಣಗೊಂಡಿತು. ಶುಕ್ರವಾರ ನಡೆದ ತೃತೀಯ ಭಾಷಾ ವಿಷಯಗಳ ಪರೀಕ್ಷೆಗೆ ಶೇ.98.10ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದರು. ‘‘ಕೊರೊನಾ ವೈರಸ್ ವ್ಯಾಪಿಸುತ್ತಿರುವ ಸಂದರ್ಭದಲ್ಲಿ ಪರೀಕ್ಷೆ ನಡೆಸುವುದು ಸವಾಲಾಗಿತ್ತು. ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಪುದುಚೆರಿ, ಮಹಾರಾಷ್ಟ್ರಗಳಲ್ಲಿ ಅಲ್ಲಿನ ಸರಕಾರಗಳು ಪರೀಕ್ಷೆ ಮುಂದೂಡಿವೆ. ಆದರೆ, ಮಕ್ಕಳ ಭವಿಷ್ಯದ ದೃಷ್ಟಿಯಿಂದ ನಾವು ನಡೆಸಿದ ಪ್ರಯತ್ನ […]