ಕೋಟ್ಯಂತರ ಭಾರತೀಯರ ಶ್ರದ್ಧೆ- ನಂಬಿಕೆಗಳ ನೆಲೆಯಾಗಿ, ಆಸ್ತಿಕತೆಯ ಅಸ್ತಿಭಾರವಾಗಿ ರೂಪುಗೊಳ್ಳಲಿರುವ ಅಯೋಧ್ಯೆಯ ಶ್ರೀ ರಾಮಜನ್ಮಭೂಮಿ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸದ ಕಾರ್ಯಕ್ರಮ ಇಂದು ನಡೆಯುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಕಳೆದ ವರ್ಷ ಸುಪ್ರೀಂ ಕೋರ್ಟ್ ತೀರ್ಪು ಬರುವವರೆಗೂ ಈ ಜಾಗ ದಾಖಲೆಗಳಲ್ಲಿ ವಿವಾದಿತವಾಗಿಯೇ ಉಳಿದಿತ್ತು; ಆದರೆ ಭಾರತೀಯರ ಭಾವಕೋಶದಲ್ಲಿ ಅದು ಯಾವತ್ತಿಗೂ ಶ್ರೀ ರಾಮಚಂದ್ರನಿಗೆ ಸೇರಿದ್ದಾಗಿತ್ತು. ಪುರಾತತ್ವ ಇಲಾಖೆಯ ಉತ್ಖನನ ಸಾಕ್ಷ್ಯಗಳು, ಸುಪ್ರೀಂ ಕೋರ್ಟ್‌ನ ತೀರ್ಪು ನಿಸ್ಸಂಶಯವಾಗಿ ಅದನ್ನು ದೃಢಪಡಿಸಿದವು. ಈಗ ಭವ್ಯ […]