ಸಂಗಮೇಶ ಟಿ. ಚೂರಿ, ವಿಜಯಪುರ. ಫ್ರಾನ್ಸ್ ನಿರ್ಮಿತ 5 ರಫೇಲ್ ಫೈಟರ್ ಜೆಟ್ ವಿಮಾನಗಳ ವಿಂಗ್ ಕಮಾಂಡರ್ ಆಗಿರುವ ಇಲ್ಲಿನ ಸೈನಿಕ ಶಾಲೆಯ ಹಳೆ ವಿದ್ಯಾರ್ಥಿ ಅರುಣಕುಮಾರ ಬುಧವಾರ ಹರಿಯಾಣ ರಾಜ್ಯದ ಅಂಬಾಲಾ ವಾಯುಪಡೆ ವಿಮಾನ ನಿಲ್ದಾಣಕ್ಕೆ ರಫೇಲ್ ಯುದ್ಧ ವಿಮಾನ ಇಳಿಸಿದ್ದು, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುಮ್ಮಟನಗರಿಗೆ ಮತ್ತೊಂದು ಗರಿ ಮೂಡಿದಂತಾಗಿದೆ. ಫ್ರಾನ್ಸ್‌ನಿಂದ ಭಾರತ ಸೇನೆಗೆ ಸೇರ್ಪಡೆಯಾದ ರಫೇಲ್ ಜೆಟ್‌ಗೆ ದೇಶದ ವಿವಿಧ ಸೈನಿಕ ಶಾಲೆಯ ನಾಲ್ವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದರೆ, ಈ ಪೈಕಿ ಇಲ್ಲಿನ […]