ಮೋದಿಯವರ ಅಷ್ಟೊಂದು ವಿದೇಶ ಪ್ರವಾಸಗಳ ಪರಿಣಾಮ ಈಗ ತಿಳಿಯತೊಡಗಿದೆ – ರಮೇಶ್ ಕುಮಾರ್ ನಾಯಕ್. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸದಾ ವಿದೇಶ ಪ್ರವಾಸದ ಶೋಕಿ. ಬೆನ್ನುಬೆನ್ನಿಗೆ ಫಾರಿನ್ ಟೂರ್ ಮಾಡುವ ಮೂಲಕ ಖಜಾನೆಯ ದುಡ್ಡಿನ ದುಂದು ವೆಚ್ಚ ಮಾಡುತ್ತಿದ್ದಾರೆ. ದೇಶದ ಕೋಟ್ಯಂತರ ಜನ ಒಂದು ಹೊತ್ತಿನ ಊಟಕ್ಕೆ ಪರದಾಡುತ್ತಿರುವಾಗ ಈ ಪ್ರಧಾನಿ ದಿನ ಬೆಳಗಾದರೆ ವಿಶೇಷ ವಿಮಾನ ಏರಿ ದೇಶ ಸುತ್ತುವುದೇಕೆ? ಆಗಾಗ ಅಮೆರಿಕ, ರಷ್ಯಾ, ಜಪಾನ್, ಜರ್ಮನಿ, ಫ್ರಾನ್ಸ್, ಭೂತಾನ್ ಎಂದೆಲ್ಲ ರಾಜತಾಂತ್ರಿಕ ಭೇಟಿ […]
Read More
ಹದಿನೈದು ದಿನಗಳ ಹಿಂದೆ ಕಾಳಗಕ್ಕೆ ಸಜ್ಜಾದಂತೆ ಹೂಂಕರಿಸುತ್ತಿದ್ದ, ‘ಗಲ್ವಾನ್ ಪ್ರಾಂತ್ಯ ನಮ್ಮದೇ’ ಎಂದಿದ್ದ ಚೀನಾ ಇದ್ದಕ್ಕಿದ್ದಂತೆ ತಣ್ಣಗಾಗಿ, ಘರ್ಷಣೆ ನಡೆದ ಜಾಗದಿಂದ ಎರಡು ಕಿಲೋಮೀಟರ್ ಹಿಂದೆ ಸರಿದಿದ್ದೇಕೆ? ಇದರ ಹಿಂದಿದ್ದ ಭಾರತದ ಒತ್ತಡ ತಂತ್ರಗಳ್ಯಾವುವು? ಗಲ್ವಾನ್ ನದಿಯ ತೀರವನ್ನು ಪೂರ್ತಿಯಾಗಿ ಕಬಳಿಸುವ ಯೋಜನೆಯೇ ಚೀನಾಕ್ಕೆ ಇತ್ತು. ಆದರೆ ಘರ್ಷಣೆ ಪಡೆದುಕೊಂಡ ಸ್ವರೂಪ, ಭಾರತ ಪ್ರಯೋಗಿಸಿದ ಒತ್ತಡ ತಂತ್ರಗಳು, ಅಂತಾರಾಷ್ಟ್ರೀಯವಾಗಿ ಈ ನಡೆ ತನಗೆ ರಿವರ್ಸ್ ಹೊಡೆಯಬಹುದಾದ ಸಾಧ್ಯತೆ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಚೀನಾ ಈಗ ಎರಡು ಕಿಲೋಮೀಟರ್‌ನಷ್ಟು ಹಿಂದೆ […]
Read More
ವಿಶ್ವದ ತಂತ್ರಜ್ಞಾನ ವಲಯದ ಕಿಂಗ್ ಅನಿಸಿಕೊಳ್ಳುವ ಚಿಂತನೆ ಚೀನಾದ್ದಾಗಿತ್ತು. ಆದರೆ 59 ಆ್ಯಪ್‌ಗಳನ್ನು ನಿಷೇಧ ಮಾಡುವ ಮೂಲಕ ಭಾರತ ಚೀನಾವನ್ನು ಮಣಿಸುವ ಕ್ರಿಯೆಗಳ ಸರಪಟಾಕಿಗೆ ಬೆಂಕಿ ಹಚ್ಚಿದೆ. ಇದು ಚೀನಾದ ಕನಸಿಗೆ ಕೊಳ್ಳಿ ಇಡುವ ಕಾರ್ಯದ ಆರಂಭ ಅಷ್ಟೇ. ಕಳಪೆ ಮಾಲುಗಳ ಕಿಂಗ್ 1980 ಹಾಗೂ 90ರ ದಶಕದಲ್ಲಿ ಅಮೆರಿಕ, ಜಗತ್ತಿನ ಟೆಕ್ನಾಲಜಿ ಕಿಂಗ್ ಎನಿಸಿಕೊಂಡಿತ್ತು. ನಂತರದ ದಶಕಗಳಲ್ಲಿ ಚೀನಾ ಆ ಸ್ಥಾನಕ್ಕೆ ಲಗ್ಗೆ ಹಾಕಿತು. ಅಮೆರಿಕ ಮುಂತಾದ ಮುಂದುವರಿದ ದೇಶಗಳಿಂದ ತಂತ್ರಜ್ಞಾನವನ್ನು ಅಪಹರಿಸಿ ಅಥವಾ ಅನುಕರಿಸಿ […]
Read More
ಏಜೆನ್ಸೀಸ್ ಹೊಸದಿಲ್ಲಿ/ಬೆಂಗಳೂರು ಮುಕೇಶ್ ಅಂಬಾನಿಯವರ ರಿಲಯನ್ಸ್ ಜಿಯೊದ ಶೇ.10ರಷ್ಟು ಷೇರುಗಳನ್ನು ಜುಕರ್‌ಬರ್ಗ್ ಒಡೆತನದ ಫೇಸ್‌ಬುಕ್ ಖರೀದಿಸುವುದು ಕೇವಲ 43,574 ಕೋಟಿ ರೂ.ಗಳ ಡೀಲ್ ಆಗಿ ಉಳಿದಿಲ್ಲ. ಷೇರುಗಳ ಮಾರಾಟ ಮಾತ್ರ ಇದಲ್ಲ, ಇದಕ್ಕೂ ಆಚೆ ಸಾರ್ವಜನಿಕರ ಅಮೂಲ್ಯ ಡೇಟಾದ ಸಂಗತಿ ಈಗ ಮುಂಚೂಣಿಗೆ ಬಂದಿದೆ. ಉಭಯ ಕಂಪನಿಗಳು ಕೋಟ್ಯಂತರ ಗ್ರಾಹಕರು ಅಥವಾ ಬಳಕೆದಾರರ ಖಾಸಗಿ ವಿವರಗಳನ್ನು (ಡೇಟಾ) ಒಳಗೊಂಡಿವೆ. ಮುಂಬರುವ ದಿನಗಳಲ್ಲಿ ಇನ್ನೂ ಕೋಟ್ಯಂತರ ಗ್ರಾಹಕರ ಮಾಹಿತಿಗಳು ಉಭಯ ಕಂಪನಿಗಳ ಕೈಸೇರುವ ನಿರೀಕ್ಷೆ ಇದೆ. ವಿಶ್ವಾದ್ಯಂತ ನಾನಾ […]
Read More