ಇತರ ಸಣ್ಣ ದೇಶಗಳನ್ನು ಸಾಲ ನೀಡಿ ವಶೀಕರಿಸಿಕೊಂಡಂತೆ ಭಾರತವನ್ನು ವಸಾಹತು ಮಾಡಿಕೊಳ್ಳಲು ಸಾಧ್ಯವಾಗದು ಎಂದು ಅರಿತಿರುವ ಚೀನಾ, ಗಡಿ ತಂಟೆಗಳ ಮೂಲಕ ಭಾರತವನ್ನು ಆಗಾಗ ಬೆದರಿಸಲು ಹಾಗೂ ವಶದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತದೆ. ಕಳೆದ ತಿಂಗಳು ಲೇಹ್ ಸಮೀಪದ ಗಲ್ವಾನ್ ಕಣಿವೆಯಲ್ಲಿ ನಡೆದದ್ದು ಚೀನಾದ ಇಂತದೇ ಒಂದು ಪ್ರಯತ್ನ. ಚೀನಾ ಸೈನಿಕರೊಂದಿಗಿನ ಘರ್ಷಣೆಯಲ್ಲಿ 20 ಯೋಧರನ್ನು ಕಳೆದುಕೊಂಡ ಭಾರತ, ಅದಕ್ಕೆ ತಕ್ಕನಾದ ಪ್ರತಿಕ್ರಿಯೆಯನ್ನು ತೋರಿತು. ಉಲ್ಬಣಿಸಿದ ಸನ್ನಿವೇಶವನ್ನು ಸರಿಪಡಿಸಲು ಉಭಯ ಕಡೆಗಳ ಕಮಾಂಡರ್ ಮಟ್ಟದ ಹಾಗೂ ರಾಜತಾಂತ್ರಿಕ ಪ್ರತಿನಿಧಿಗಳ ಮಟ್ಟದ […]