ಈಗ ಎಲ್ಲರ ಮನದಲ್ಲಿ ಇರೋ ಪ್ರಶ್ನೆ ಎರಡೇ- ಮುಂದೇನು? ಈಗ ಯಾಕೆ ಈ ಸಂಘರ್ಷ ನಡೆಯಿತು? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನು ವಿದೇಶಾಂಗ ತಜ್ಞರು ಮಾಡುತ್ತಿದ್ದಾರೆ. ಅಣ್ವಸ್ತ್ರ ಹೊಂದಿರುವ ಎರಡು ಪ್ರಬಲ ರಾಷ್ಟ್ರಗಳು ಹೀಗೆ ಅನಪೇಕ್ಷಿತ ಸಂದರ್ಭದಲ್ಲಿ ಕಾದಾಟಕ್ಕಿಳಿದಿರುವುದು ದಿಗಿಲಿಗೆ ಕಾರಣವಾಗಿದೆ. ಆದರೆ, ಚೀನಾದಲ್ಲಿ ಕೋವಿಡ್ 19 ವೈರಸ್ ಪತ್ತೆಯಾದ ನಂತರ ಚೀನಾದ ನಡವಳಿಕೆಯನ್ನು ವಿಶ್ಲೇಷಿಸಿದರೆ ನಮ್ಮೆಲ್ಲ ಅನುಮಾನಗಳಿಗೆ ಪರಿಹಾರ ದೊರೆಯಬಹುದು. ಕಳೆದ ಕೆಲವು ತಿಂಗಳಿಂದ ಅನೇಕ ಆಕ್ರಮಣಕಾರಿ ನಡೆಗಳನ್ನು ಚೀನಾ ಪ್ರದರ್ಶಿಸಿದೆ. ಹಾಂಕಾಂಗ್‌ನಲ್ಲಿ ಅಸ್ತಿತ್ವದಲ್ಲಿದ್ದ […]