ಕಣ್ಣಿಗೆ ಕಾಣದ ಶತ್ರುವಿನ ಮುಂದೆ ಸಂಘಟಿತ ಭಾರತೀಯ ಎಲ್ಲರಿಗಿಂತ ಮೊದಲು ಎಚ್ಚೆತ್ತುಕೊಂಡ ಭಾರತದ ಲಾಕ್‌ಡೌನ್ ನಿರ್ಧಾರ ಮೆಚ್ಚುಗೆ ಪಡೆದಿದೆ ಕೊರೊನಾ ಎಂಬ ಮಾರಕ ಸೋಂಕು ಜನರ ಜೀವವನ್ನೇ ಹಿಂಡಿ ಹಿಪ್ಪೆ ಮಾಡುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಈಗ ನಾವು ಪಾಲಿಸುತ್ತಿರುವ ಸಾಮಾಜಿಕ ಅಂತರ, ಸ್ವಚ್ಛತೆಯ ಶಿಸ್ತು, ಅನಿವಾರ್ಯ ಮನೆವಾಸ, ಏಕಾಂಗಿತನ (ಕ್ವಾರಂಟೈನ್)- ಈ ಎಲ್ಲವೂ ನಿಶ್ಚಿತವಾಗಿ ನಮಗೊಂದು ದೊಡ್ಡ ಪಾಠವಾಗಲಿದೆ. ಇದು ನಮ್ಮ ಜೀವನ ಕ್ರಮ ಮತ್ತು ಆಲೋಚನಾ ವಿಧಾನದಲ್ಲಿ ಅಗಾಧ ಬದಲಾವಣೆ ತರಬೇಕಿದೆ. ಆಗ ಮಾತ್ರ […]