ಯಾವಾಗಲೂ ಕಿರಿಕಿರಿಯುಂಟು ಮಾಡುವ ನೆರೆಮನೆಯವನ ರೀತಿಯಲ್ಲಿವರ್ತಿಸುವ ಚೀನಾ ಭಾರತವೂ ಸೇರಿದಂತೆ ತನ್ನ ನೆರೆಯ ಬಹುತೇಕ ರಾಷ್ಟ್ರಗಳ ಜೊತೆಗೆ ಗಡಿ ಸಂಘರ್ಷವನ್ನು ಕಾಯ್ದುಕೊಂಡು ಬಂದಿದೆ. ಇದೀಗ ಭಾರತದ ಲಡಾಖ್ ಪ್ರದೇಶದಲ್ಲಿನ ಗ್ಯಾಲ್ವನ್ ನದಿ ಕಣಿವೆ, ಗಡಿ ನಿಯಂತ್ರಣ ರೇಖೆಯ ಪಾಂಗೊಂಗ್ ತ್ಸೋ ಗಡಿಗೆ ಸಂಬಂಧಿಸಿದಂತೆ ಭಾರತದ ಜೊತೆ ತಿಕ್ಕಾಟಕ್ಕೆ ಇಳಿದಿದೆ. ಕೊರೊನಾ ವೈರಸ್ಗೆ ಸಂಬಂಧಿಸಿದ ಮಾಹಿತಿ ಮುಚ್ಚಿಟ್ಟಿದ್ದಕ್ಕಾಗಿ ಜಗತ್ತಿನ ಬಹುತೇಕ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿರುವ ಚೀನಾ ಇದೀಗ ಭಾರತದ ಜತೆಗೆ ಗಡಿ ಕ್ಯಾತೆ ತೆಗೆದಿದೆ. ಈ ಚೀನಾದ ಗಡಿ […]
Read More
– ಉಭಯ ಸೇನಾ ನಿಯೋಜನೆ ಹೆಚ್ಚಳ | ಪ್ರಧಾನಿ, ಗೃಹ ಸಚಿವರ ತುರ್ತು ಸಭೆ – ಆಕ್ರಮಣಕಾರಿ ನಡೆಗೆ ಭಾರತ ತಿರುಗೇಟು | ಸೇನೆ ಹಿಂಪಡೆಯದಿರಲು ನಿರ್ಧಾರ ಹೊಸದಿಲ್ಲಿ: ವಿಶ್ವಾದ್ಯಂತ ಕೊರೊನಾ ಮರಣಮೃದಂಗದ ನಡುವೆಯೇ ಭಾರತ-ಚೀನಾ ಗಡಿ ಬಿಕ್ಕಟ್ಟು ಉಲ್ಬಣಗೊಂಡಿದೆ. ಉಭಯ ದೇಶಗಳೂ ಲಡಾಖ್‌ನ ಅಂತಾರಾಷ್ಟ್ರೀಯ ಗಡಿಯಲ್ಲಿ ಸೇನೆ ನಿಯೋಜನೆ ಹೆಚ್ಚಿಸುವುದರೊಂದಿಗೆ ಪರಿಸ್ಥಿತಿ ಉದ್ವಿಗ್ನತೆಗೆ ತಿರುಗಿದೆ. ಪ್ರಧಾನಿ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಸೇನಾ ಮುಖಂಡರೊಂದಿಗೆ ಪ್ರತ್ಯೇಕ ತುರ್ತು ಸಭೆಗಳನ್ನು ನಡೆಸಿರುವುದು ಪರಿಸ್ಥಿತಿಯ […]
Read More