‘ಬಿಟ್ಟುಕೊಡುವೆʼ ಎನ್ನುವವರು ʼನನಗೂ ಬೇಕುʼ ಎನ್ನುವಂತೆ ಮಾಡಿದ್ದು ರಾಜಕಾರಣಿಗಳು : ವಿಸ್ತಾರ ಅಂಕಣ

“ನಾನು ದೇಶಕ್ಕೆ ಈ ವಿಶ್ವಾಸ ನೀಡಲು ಬಯಸುತ್ತೇನೆ, ಮೂರನೇ ಅವಧಿಯಲ್ಲಿ ವಿಶ್ವದ ಪ್ರಥಮ ಮೂರು ಆರ್ಥಿಕತೆಯಲ್ಲಿ ಭಾರತ ಇರಲಿದೆ. ಹೆಮ್ಮೆಯಿಂದ ನಾವು ಮೂರರಲ್ಲಿ ಸ್ಥಾನ ಪಡೆಯುತ್ತೇವೆ ಎನ್ನುವುದು ನಾನು ನೀಡುವ ಗ್ಯಾರಂಟಿ. 2024ರ ನಂತರ ಅಂದರೆ ನಮ್ಮ ಮೂರನೇ ಅವಧಿಯಲ್ಲಿ ದೇಶದ ವಿಕಾಸ ಯಾತ್ರೆ ಮತ್ತಷ್ಟು ವೇಗದಲ್ಲಿ ಸಾಗಲಿದೆ”. ನವದೆಹಲಿಯ ಪ್ರಗತಿ ಮೈದಾನದಲ್ಲಿ ನಿರ್ಮಿಸಲಾಗಿರುವ, ದೇಶದ ಅತಿ ದೊಡ್ಡ ವಸ್ತು ಪ್ರದರ್ಶನ ಮತ್ತು ಕನ್ವೆನ್ಷನ್ ಸೆಂಟರ್ ʼಭಾರತ ಮಂಟಪಂʼ ಉದ್ಘಾ ಟನಾ ಕಾರ್ಯಕ್ರಮದಲ್ಲಿ ಜುಲೈ 26ರಂದು ಪ್ರಧಾನಿ […]

Read More

ಮುಸ್ಲಿಂ ಮಹಿಳೆಯರನ್ನು ಒಳಗೊಳ್ಳದೆ ಸಮಾನ ನಾಗರಿಕ ಸಂಹಿತೆಯ ಚರ್ಚೆ ಅಪೂರ್ಣ : ವಿಸ್ತಾರ ಅಂಕಣ

ಸಂಪ್ರದಾಯಗಳ ಆಚರಣೆ ತಪ್ಪಲ್ಲ. ನಮ್ಮ ಸಂವಿಧಾನವೇ ಅದಕ್ಕೆ ಅವಕಾಶ ನೀಡಿದೆ. ಆದರೆ, ಪ್ರಶ್ನೆ ಇರುವುದು ಮನುಷ್ಯನ ಒಳಿತಿಗೆ ಕೇಡು ಬಗೆಯುವ, ಕಾಲಕ್ಕೆ ತಕ್ಕಂತೆ ಬದಲಾವಣೆ ಬಯಸದ, ಮನುಷ್ಯನ ವೈಯಕ್ತಿಕ ವ್ಯವಹಾರ ನಡಾವಳಿಗೆ ಸಂಬಂಧಿಸಿದ ಕಾನೂನುಗಳು ಒಂದೇ ರೀತಿ ಇರಬೇಕು ಎಂಬುದಷ್ಟೇ! ……………… ಕಳೆದ ಶನಿವಾರ ಅಂದರೆ ಜುಲೈ 15ರಂದು ಕೇರಳದ ಕೋಯಿಕ್ಕೋಡ್ ನಗರದಲ್ಲಿ ಒಂದು ಸೆಮಿನಾರ್ ನಡೆಯಿತು. ಇದನ್ನು ಆಯೋಜನೆ ಮಾಡಿದ್ದು ಆಡಳಿತಾರೂಢ ಸಿಪಿಐ-ಎಂ. ವಿಷಯ ಏನು ಎಂದರೆ ಸಮಾನ ನಾಗರಿಕ ಸಂಹಿತೆ. ಸಿಪಿಐಎಂ ಪ್ರಧಾನ ಕಾರ್ಯದರ್ಶಿ […]

Read More

ದೇಶದ ಒಳಿತಿಗಿಂತ ವೈಯಕ್ತಿಕ ನಂಬಿಕೆಯೇ ಮುಖ್ಯ ಎನ್ನುವವನು ನಾಗರಿಕನೇ ಅಲ್ಲ : ವಿಸ್ತಾರ ಅಂಕಣ

ಸರ್ಕಾರ ನಡೆಸುವವರಿಗಾದರೂ, ಸಾಮಾನ್ಯ ಜನರಿಗೂ ʼದೇಶ ಮೊದಲುʼ ಎನ್ನುವುದರಲ್ಲಿ ಯಾವುದೇ ಬದಲಾವಣೆ ಇರಕೂಡದು ಅಲ್ಲವೇ? ಹಾಗೇನಾದರೂ ದೇಶಕ್ಕಿಂತಲೂ ತನ್ನ ನಂಬಿಕೆಯೇ ಮೊದಲು ಎಂದು ಯಾರಾದರೂ ವಾದಿಸಿದರೆ ಅದನ್ನು ಸಿವಿಲ್ ಕಾನೂನಿನ (civil law) ಬದಲಿಗೆ ಕ್ರಿಮಿನಲ್ ಕಾನೂನಿನ (criminal law) ವ್ಯಾಪ್ತಿಯಲ್ಲಿ ಚರ್ಚಿಸುವುದು ಸೂಕ್ತ. ಭಾರತಕ್ಕೆ ಸಮಾನ ನಾಗರಿಕ ಸಂಹಿತೆ (Uniform civil Code) ಬೇಕೆ? ಬೇಡವೇ? ಇದು ಈಗಿನ ಜ್ವಲಂತ ಪ್ರಶ್ನೆ. ಭಾರತ ಎನ್ನುವುದು ಅತ್ಯಂತ ವೈವಿಧ್ಯತೆಯಿಂದ ಕೂಡಿರುವ ದೇಶ. ಇಲ್ಲಿನ ಭಾಷೆ, ವೇಷ, ಆಹಾರ, […]

Read More

ಕಾಂಗ್ರೆಸ್ಸಿನ ಅಪೂರ್ಣ ಕಾರ್ಯವನ್ನು ಪೂರ್ಣಗೊಳಿಸುವುದೇ ಸಮಾನ ನಾಗರಿಕ ಸಂಹಿತೆ ಜಾರಿಯ ಗುರಿ! : ವಿಸ್ತಾರ ಅಂಕಣ

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಪ್ರದೇಶದ ಭೋಪಾಲಿನಿಂದ ಬಿಜೆಪಿ ಕಾರ್ಯಕರ್ತರೊಂದಿಗೆ ವರ್ಚುವಲ್ ಸಂವಾದ ನಡೆಸಿದರು. ಈ ಸಂವಾದದಲ್ಲಿ ನರೇಂದ್ರ ಮೋದಿಯವರು ಪ್ರಸ್ತಾಪಿಸಿದ ಒಂದು ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅದೆಂದರೆ ಸಮಾನ ನಾಗರಿಕ ಸಂಹಿತೆ (Uniform Civil Code – UCC) ಜಾರಿ ಮಾಡಬೇಕಾದ ಅವಶ್ಯಕತೆ. ದೇಶ ಮೊದಲು ಎಂದು ಬಂದಾಗ ಹಿಂದುವಾದರೇನು? ಮುಸ್ಲಿಮನಾದರೇನು? ಕ್ರೈಸ್ತನಾದರೇನು? ಏಕರೂಪ ನಾಗರಿಕ ಸಂಹಿತೆಯ ಈ ಅಪೂರ್ಣ ಕೆಲಸವನ್ನು ಪೂರ್ಣಗೊಳಿಸಲು ಇನ್ನೆಷ್ಟು ವರ್ಷ ಕಾಯಬೇಕು? ಇದೇ ಸರಿಯಾದ ಸಮಯ. ********************************************* ಸ್ವತಂತ್ರ […]

Read More

ರಾಜಕೀಯ ಕಲಿಸಲು ಶಾಲೆಯಲ್ಲ, ಬೇಕಿರುವುದು ಶಾಲಾ ದಿನಗಳಿಂದಲೇ ರಾಜಕೀಯ : ವಿಸ್ತಾರ ಅಂಕಣ

ವಿದ್ಯಾರ್ಥಿ ನಾಯಕತ್ವ, ಯುವ ನಾಯಕತ್ವ ಹಾಗೂ ಸಾಮಾಜಿಕ ನಾಯಕತ್ವವನ್ನು ಮೆಟ್ಟಿ ನಿಂತು, ರಾಜಕಾರಣಕ್ಕೆ ಯೋಗ್ಯರು ಆಗಮಿಸುತ್ತಿಲ್ಲ ಎಂದು ಆಳುವುದರಲ್ಲಿ ಅರ್ಥವಿಲ್ಲ. ವಿದ್ಯಾರ್ಥಿ ಚುನಾವಣೆ, ಸಾಮಾಜಿಕ ಆಂದೋಲನಗಳನ್ನು ಹತ್ತಿಕ್ಕುವ ಬದಲು ಪ್ರಜಾತಾಂತ್ರಿಕ ವ್ಯವಸ್ಥೆಗೆ ಅನುಗುಣವಾಗಿ ಸಂವಾದ, ಚರ್ಚೆಗಳನ್ನು ನಡೆಸುವುದನ್ನು ರೂಢಿಸಿಕೊಂಡರೆ ಕರ್ನಾಟಕದಲ್ಲಿ ನಾಯಕತ್ವಕ್ಕೆ ಕೊರತೆ ಆಗುವುದಿಲ್ಲ. ************************************************************ ಕರ್ನಾಟಕ ವಿಧಾನಸಭೆಗೆ (Karnataka assembly) ಈ ಬಾರಿ ಹೊಸದಾಗಿ 70 ಶಾಸಕರು ಆಯ್ಕೆಯಾಗಿದ್ದಾರೆ. 224 ಜನರ ವಿಧಾನಸಭೆಯಲ್ಲಿ 70 ಹೊಸ ಶಾಸಕರು ಎಂದರೆ ಮೂರನೇ ಒಂದು ಭಾಗದಷ್ಟು ಹೊಸ ನೀರು […]

Read More

ಮನಮೋಹನ್‌ ಸಿಂಗ್‌ ಮಾದರಿ ಅಥವಾ ನರೇಂದ್ರ ಮೋದಿ ಮಾದರಿ: ಮುಸ್ಲಿಂ ಕಲ್ಯಾಣಕ್ಕೆ ಯಾವುದು ಸರಿ? : ವಿಸ್ತಾರ ಅಂಕಣ

ಎಷ್ಟೇ ಕಾಲವಾಗಲಿ, ಎಷ್ಟೇ ಚುನಾವಣೆ ಬರಲಿ, ಮುಸ್ಲಿಮರ ಕುರಿತು ಕಾಂಗ್ರೆಸ್ ಆಲೋಚನೆ ಬದಲಾಗಿಲ್ಲ. ಮುಸ್ಲಿಮರನ್ನು ಓಲೈಸುತ್ತ, ಅವರಿಗೆ ಸಣ್ಣಪುಟ್ಟ ಅನುದಾನ, ಸವಲತ್ತುಗಳನ್ನು ನೀಡುತ್ತ ಮುಖ್ಯವಾಹಿನಿಯಿಂದ ದೂರ ಇಡುವುದೇ ಕಾಂಗ್ರೆಸ್ ಆಲೋಚನೆ. ******************************** “ದೇಶದಲ್ಲಿ ಯಾರ್ಯಾರ ಜನಸಂಖ್ಯೆ ಎಷ್ಟೆಷ್ಟಿದೆಯೋ ಅಷ್ಟೇ ಸವಲತ್ತುಗಳನ್ನು ನೀಡಬೇಕು. ದೇಶದಲ್ಲಿ ಹಿಂದುಗಳ ಸಂಖ್ಯೆಯೇ ಹೆಚ್ಚಿರುವ ಕಾರಣ ಅವರಿಗೆ ಹೆಚ್ಚು ಸವಲತ್ತು ಸಿಗಬೇಕು, ಮುಸ್ಲಿಮರು ಕಡಿಮೆ ಇರುವುದರಿಂದ ಕಡಿಮೆ ಸವಲತ್ತಿಗೆ ತೃಪ್ತಿ ಪಟ್ಟುಕೊಳ್ಳಬೇಕು.” ಹೀಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದರೆ ಏನಾಗುತ್ತದೆ? ಹೀಗೆ ಹೇಳಲು […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top