ಜೂಮ್‌ ಆ್ಯಪ್ ಹುಷಾರು!!

 

ಹೊಸದಿಲ್ಲಿ: ಚೀನಾದಲ್ಲಿ ಸರ್ವರ್ ಹೊಂದಿರುವ ಟೆಲಿ ಕಾನರೆನ್ಸಿಂಗ್ ಆ್ಯಪ್ ‘ಜೂಮ್’ ಬಳಕೆ ನಿಷೇಸಿ ಟೆಕ್ ದಿಗ್ಗಜ ‘ಗೂಗಲ್’ ತನ್ನ ಸಿಬ್ಬಂದಿಗೆ ಸೂಚನೆ ರವಾನಿಸಿದ ಬೆನ್ನಲ್ಲೇ, ಕೇಂದ್ರ ಗೃಹ ಸಚಿವಾಲಯವೂ ಅದಕ್ಕೆ ಕಡಿವಾಣ ಹಾಕಲು ನಿರ್ದೇಶನಗಳನ್ನು ಹೊರಡಿಸಿದೆ. ‘ಜೂಮ್’ ಸುರಕ್ಷಿತವಲ್ಲ ಹಾಗೂ ಮಾಹಿತಿಗಳು ಸೈಬರ್ ಖದೀಮರ ಪಾಲಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.

ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ‘ವರ್ಕ್ ಫ್ರಮ್ ಹೋಮ್’ನಲ್ಲಿ ನಿರತವಾಗಿರುವ ಮಂದಿ, ತಮ್ಮ ಕಚೇರಿ ಮುಖ್ಯಸ್ಥರು ಹಾಗೂ ಸಹೋದ್ಯೋಗಿಗಳ ಜತೆ ಸಂವಾದ ನಡೆಸಲು ‘ಜೂಮ್’ ಆ್ಯಪ್‌ನ ಟೆಲಿಕಾನ್ಫರೆನ್ಸಿಂಗ್ ಆಯ್ಕೆ ಬಳಸುತ್ತಿದ್ದಾರೆ. ಆದರೆ, ಇದರ ಆನ್‌ಲೈನ್ ಪ್ಲಾಟ್‌ಫಾರಂ (ಕೋಡ್‌ಗಳ ಸಂಗ್ರಹ) ಚೀನಾದಲ್ಲಿದ್ದು, ಗೌಪ್ಯತೆ ಲೋಪ ಕಂಡು ಬಂದಿದೆ. ಮಾತುಕತೆ ಮಧ್ಯೆಯೇ ಕಂಪನಿಗೆ ಸಂಬಂಸಿದ ಗುಪ್ತ ಮಾಹಿತಿಗಳನ್ನು ಸೈಬರ್ ಕಳ್ಳರು ಲೂಟಿ
ಮಾಡಿದ್ದರು. ಹೀಗಾಗಿ ಬಳಕೆದಾರ ಮಾಹಿತಿಗೆ ಸುರಕ್ಷತೆ ಒದಗಿಸದ ‘ಜೂಮ್’ ಬಳಸುವಾಗ ಎಚ್ಚರವಹಿಸುವಂತೆ ಗೃಹ
ಸಚಿವಾಲಯದ ‘ಸೈಬರ್ ಸಮನ್ವಯ ಕೇಂದ್ರ’ ಮಾರ್ಗಸೂಚಿಗಳನ್ನು ಸಿದ್ಧಪಡಿಸಿ ಗುರುವಾರ ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ.

1 ಕೋಟಿ ರೂ. ಇನಾಮು
‘ಜೂಮ್’ಗೆ ಪರ್ಯಾಯವಾಗಿ ಸ್ಥಳೀಯ ತಂತ್ರಜ್ಞಾನ ಬಳಸಿ ಆ್ಯಪ್ ಅಭಿವೃದ್ಧಿಪಡಿಸಿದವರಿಗೆ ಒಂದು ಕೋಟಿ ರೂ. ಬಹುಮಾನ ರೂಪದ ಅನುದಾನ ನೀಡುವುದಾಗಿ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೇಳಿದೆ. ಸರಕಾರದ ವೆಬ್‌ಸೈಟ್‌ನ ‘ಇನ್ನೋವೇಷನ್ ಚಾಲೆಂಜ್’ ವಿಭಾಗದಲ್ಲಿ ಆಫರ್ ಕೊಟ್ಟಿದ್ದು, ಮೇಕ್ ಇಂಡಿಯಾ ಯೋಜನೆಯಡಿ ಆ್ಯಪ್ ಸಿದ್ಧಪಡಿಸಬೇಕಾಗಿದೆ. 2020ರ ಏಪ್ರಿಲ್ 30 ಅರ್ಜಿ ಸಲ್ಲಿಸಲು ಕೊನೇ ದಿನ. ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದ 3 ಸಂಸ್ಥೆಗಳಿಗೆ ತಲಾ 20 ಲಕ್ಷ ರೂ. ನೀಡಿ ಆ್ಯಪ್ ಅಭಿವೃದ್ಧಿಗೆ ಬೆಂಬಲಿಸಲಾಗುತ್ತದೆ. ವಿಜಯಿಯಾಗುವ ಸಂಸ್ಥೆ 1 ಕೋಟಿ ರೂ. ಅನುದಾನ ಹಾಗೂ ಹೆಚ್ಚುವರಿ 10 ಲಕ್ಷ ರೂ. ನಿರ್ವಹಣಾ ನಿಧಿ ಪಡೆಯಲಿದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top