ಚೀನಾ ಎದುರಿಸಲು ಬೇಕು ದೇಶಿ ಮೊಬೈಲ್‌ ಆ್ಯಪ್‌

ಸ್ಥಳೀಯ ಮೊಬೈಲ್‌ ಅಪ್ಲಿಕೇಶನ್‌ ಅಭಿವೃದ್ಧಿಯಲ್ಲಿ ಉನ್ನತ ಶಿಕ್ಷ ಣ ಸಂಸ್ಥೆಗಳ ಪಾತ್ರವೇನು?
– ಪ್ರೊ. ನಾಗೇಶ್ವರ ರಾವ್‌.

ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷ ನ್‌ 69ಎ ಅಡಿಯಲ್ಲಿರುವ ತನ್ನ ಅಧಿಕಾರವನ್ನು ಬಳಸಿ 59 ಚೀನೀ ಮೊಬೈಲ್‌ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದೆ. ಅವುಗಳು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ರಕ್ಷಣೆ, ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ ಚಟುವಟಿಕೆಗಳಲ್ಲಿ ತೊಡಗಿರುವ ಮಾಹಿತಿಯನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ನಿಷೇಧಿತ 59 ಆ್ಯಪ್‌ಗಳ ಪಟ್ಟಿಯಲ್ಲಿರುವ ಅತ್ಯಂತ ಪ್ರಮುಖ ಆ್ಯಪ್‌ಗಳು- ಟಿಕ್‌ಟಾಕ್‌, ಶೇರ್‌ ಇಟ್‌, ಹೆಲೋ, ಕ್ಯಾಮ್‌ ಸ್ಕ್ಯಾ‌ನರ್‌, ಕ್ಲೀನ್‌ ಮಾಸ್ಟರ್‌ ಇತ್ಯಾದಿ. ಈ ನಿಷೇಧಿತ ಆ್ಯಪ್‌ಗಳು ಒಟ್ಟು ಸೇರಿ ಮೇ ತಿಂಗಳಲ್ಲಿ 50 ಕೋಟಿಗೂ ಹೆಚ್ಚು ಮಾಸಿಕ ಸಕ್ರಿಯ ಬಳಕೆದಾರರನ್ನು ಹೊಂದಿದ್ದವು ಮತ್ತು 27 ಆ್ಯಪ್‌ಗಳು ಕಳೆದ ತಿಂಗಳು ಭಾರತದ ಟಾಪ್‌ 1,000 ಆಂಡ್ರಾಯ್ಡ್‌ ಆ್ಯಪ್‌ಗಳಲ್ಲಿ ಸೇರಿದ್ದವು.
ಭಾರತದಲ್ಲಿ ಈ ಚೀನೀ ಆ್ಯಪ್‌ಗಳ ಹೆಚ್ಚಳಕ್ಕೆ ಕಾರಣಗಳು ಏನಿರಬಹುದು? ಮೂರು ಕಾರಣಗಳಿವೆ. ಭಾರತದಲ್ಲಿ ಹೆಚ್ಚುತ್ತಿರುವ ಸ್ಮಾರ್ಟ್‌ ಫೋನ್‌ಗಳ ಬಳಕೆ. 2022ರ ವೇಳೆಗೆ ದೇಶದ ಶೇ.36 ಬಳಕೆದಾರರು ಸ್ಮಾರ್ಟ್‌ಫೋನ್‌ ಬಳಸುತ್ತಾರೆ. ಎರಡು, 56 ಕೋಟಿಗೂ ಹೆಚ್ಚು ಅಂತರ್ಜಾಲ ಬಳಕೆದಾರರನ್ನು ಹೊಂದಿರುವ ಭಾರತ ವಿಶ್ವದ ಎರಡನೇ ಅತಿದೊಡ್ಡ ಆನ್‌ಲೈನ್‌  ಮಾರುಕಟ್ಟೆ. 2023ರ ವೇಳೆಗೆ ದೇಶದಲ್ಲಿ 65 ಕೋಟಿ ಅಂತರ್ಜಾಲ ಬಳಕೆದಾರರು ಇರಬಹುದು. ಮೂರನೆಯದು, ಸಾಮಾಜಿಕ ಜಾಲತಾಣಗಳು. 2023ರ ವೇಳೆಗೆ, ಸಾಮಾಜಿಕ ಜಾಲತಾಣಗಳ ಪ್ರವೇಶವು ದೇಶದ ಜನಸಂಖ್ಯೆಯ ಶೇಕಡಾ 31ರಷ್ಟು ಇರುತ್ತದೆ.
ನಿಷೇಧಿತ ಆ್ಯಪ್‌ಗಳಲ್ಲಿ ಯಾವುದೂ ಶಿಕ್ಷಣ, ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ಅಥವಾ ಒಟ್ಟಾರೆಯಾಗಿ ಸಮಾಜದ ಮೌಲ್ಯವರ್ಧನೆಯನ್ನು ಹೆಚ್ಚಿಸಲು ಸಹಾಯ ಮಾಡುವ ಯಾವುದೇ ಮೌಲ್ಯವನ್ನು ಹೊಂದಿಲ್ಲ. ಈಗ ದೇಶಿ ಆ್ಯಪ್‌ಗಳನ್ನು ಹೇಗೆ ವಿಕಸಿಸಬಹುದು ಎಂದು ವಿಚಾರ ಮಾಡೋಣ.
ಆ್ಯಪ್‌ ಅಭಿವೃದ್ಧಿ ಕಂಪನಿಗಳೊಂದಿಗೆ ಸಹಯೋಗ
ಮೊಬೈಲ್‌ ಆ್ಯಪ್‌ ಅಭಿವೃದ್ಧಿಗೆ ಸಂಬಂಧಿಸಿದ ಕ್ಷೇತ್ರಗಳಿಗೆ ಪ್ರತ್ಯೇಕ ಸಹಕಾರಿ ಕಾರ್ಯತಂತ್ರ ರೂಪುಗೊಳ್ಳಬೇಕು. ಕಂಪ್ಯೂಟರ್‌ ಅಪ್ಲಿಕೇಶನ್‌ಗಳು ಮತ್ತು ಐಟಿ ಸಂಬಂಧಿತ ಕೋರ್ಸ್‌ಗಳನ್ನು ನೀಡುವ ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಸಂಸ್ಥೆಗಳು ಟಿಸಿಎಸ್‌, ಇನ್ಫೋಸಿಸ್‌, ಎಚ್‌ಸಿಎಲ್‌ ಮುಂತಾದ ಐಟಿ ಕಂಪನಿಗಳೊಂದಿಗೆ ಸಹಯೋಗ ಮಾಡಿಕೊಳ್ಳಬಹುದು. ಇದರಿಂದ ಉನ್ನತ ಶಿಕ್ಷಣ ಸಂಸ್ಥೆಗಳ ತಾಂತ್ರಿಕ ಕಾರ್ಯಕ್ರಮಗಳ ಉದ್ಯೋಗಾವಕಾಶದಲ್ಲಿ ಹೆಚ್ಚಳ ಮತ್ತು ಭಾರತದಲ್ಲಿ ಮೊಬೈಲ್‌ ಆ್ಯಪ್‌ ಅಭಿವೃದ್ಧಿಗೆ ನುರಿತ ಮತ್ತು ಪ್ರಮಾಣೀಕೃತ ಮಾನವಶಕ್ತಿಯ ಲಭ್ಯತೆ ಸೇರಿ ಹಲವು ಪ್ರಯೋಜನಗಳನ್ನು ಪಡೆಯಬಹುದು. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ, ಇಂತಹ ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಸಂಸ್ಥೆಗಳು ಮೊಬೈಲ್‌ ಆ್ಯಪ್‌ ಅಭಿವೃದ್ಧಿಗಾಗಿ ತಮ್ಮ ಕೆಲವು ಮೂಲಸೌಕರ್ಯ ಮತ್ತು ಆರ್ಥಿಕ ಸಂಪನ್ಮೂಲಗಳನ್ನು ಮೀಸಲಿಡಬಹುದು. ಆ್ಯಪ್‌ ಅಭಿವೃದ್ಧಿಯಲ್ಲಿ ಪ್ರಮಾಣೀಕೃತ ಕೋರ್ಸ್‌ಗಳನ್ನು ನೀಡಲು ಐಟಿ ಕೈಗಾರಿಕೆಗಳೊಂದಿಗೆ ಸಹಯೋಗ ಮಾಡಿಕೊಳ್ಳಬಹುದು. ಇದನ್ನು ಬಿಇ / ಬಿಟೆಕ್‌ / ಬಿಎಸ್ಸಿ ಮಟ್ಟಗಳಲ್ಲಿ ತಮ್ಮ ಸ್ನಾತಕ ತಾಂತ್ರಿಕ ಕೋರ್ಸ್‌ಗಳೊಂದಿಗೆ ಸಂಯೋಜಿಸಬಹುದು.
ಕ್ಷೇತ್ರ ಕೌಶಲ್ಯ ಮಂಡಳಿಯೊಂದಿಗೆ ಸಹಯೋಗ
ಕೌಶಲ್ಯ ಕ್ಷೇತ್ರಗಳಲ್ಲಿ ಆ್ಯಪ್‌ ಅಭಿವೃದ್ಧಿಯನ್ನು ಒಂದೆಂದು ಗುರುತಿಸಲಾಗಿದೆ. ಆದರೆ ಮೊಬೈಲ್‌ ಆ್ಯಪ್‌ ಡೆವಲಪರ್‌ಗಳಿಗೆ ಉದ್ಯೋಗದ ಸಾಧ್ಯತೆ ಉಂಟಾಗಬೇಕು. ಆದ್ದರಿಂದ ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಸಂಸ್ಥೆಗಳು ತಮ್ಮ ಕೋರ್ಸ್‌ಗಳೊಂದಿಗೆ ಆ್ಯಪ್‌ ಅಭಿವೃದ್ಧಿಯನ್ನು ಸಂಯೋಜಿಸಬೇಕು. ಇದರಿಂದ ಉದ್ಯೋಗ ಲಭ್ಯತೆ ಅಥವಾ ಸ್ವಯಂ ಉದ್ಯೋಗವನ್ನು ಪಡೆಯಲು ಅಗತ್ಯವಾದ ಕೌಶಲ್ಯಗಳನ್ನು ಹೊಂದುವುದು ಸಾಧ್ಯವಾಗುತ್ತದೆ.
ಸಂಸ್ಥೆಯ ಹೊಸತನದ ಅಭ್ಯಾಸಗಳು
ಅನೇಕ ಉನ್ನತ ಶಿಕ್ಷ ಣ ಮತ್ತು ತಾಂತ್ರಿಕ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಬೆಂಬಲ ನೀಡಲು, ನಿರ್ದಿಷ್ಟವಾಗಿ ಕೋವಿಡ್‌ -19 ಸಾಂಕ್ರಾಮಿಕ ರೋಗದ ಸದ್ಯದ ಸಂದರ್ಭದಲ್ಲಿ ಮೊಬೈಲ್‌ ಆ್ಯಪ್‌ಗಳನ್ನು ಸಕ್ರಿಯವಾಗಿ ಬಳಸಿಕೊಳ್ಳುತ್ತಿವೆ. ಲಾಕ್‌ಡೌನ್‌ ಈ ಪರೀಕ್ಷೆಯ ಸಂದರ್ಭದಲ್ಲಿ, ಆನ್‌ಲೈನ್‌ ವಿಧಾನದ ಮೂಲಕ ವಿದ್ಯಾರ್ಥಿಗಳಿಗೆ ಕಲಿಸಲು ಶಿಕ್ಷಣ ಸಂಸ್ಥೆಗಳು ಗೂಗಲ್‌ ಮೀಟ್‌ ಮತ್ತು ಮೈಕ್ರೋಸಾಫ್ಟ್‌ ಟೀಮ್‌ ಗಳಂತಹ ವೀಡಿಯೊ ಕಾನ್ಫರೆನ್ಸಿಂಗ್‌ ಆ್ಯಪ್‌ಗಳನ್ನು ಸಂಪೂರ್ಣವಾಗಿ ಅವಲಂಬಿಸಿವೆ. ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ಡಿಜಿಟಲ್‌ ವಿಷಯವನ್ನು ಒದಗಿಸಲು ಸ್ವಂತದ ಮೊಬೈಲ್‌ ಆ್ಯಪ್‌ ಅನ್ನು ಬೆಳೆಸಿದೆ. IGNOU e-learning app ಎಂಬ ಹೆಸರಿನ ಈ ಮೊಬೈಲ್‌ ಅಪ್ಲಿಕೇಶನ್‌ 5 ಲಕ್ಷ ಕ್ಕೂ ಹೆಚ್ಚು ಡೌನ್ಲೋಡ್‌ ಮಾಡಿಕೊಳ್ಳಲಾಗಿದ್ದು, 3.9 ರೇಟಿಂಗ್‌ ಪಡೆದಿದೆ. 2019ರಲ್ಲಿ ಪ್ರಾರಂಭವಾದ ಈ ಆ್ಯಪ್‌ನಿಂದ ವಿಶ್ವವಿದ್ಯಾನಿಲಯದ ಎಪ್ಪತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಡಿಜಿಟಲ್‌ ಅಧ್ಯಯನ ಸಾಮಗ್ರಿಯನ್ನು ಡೌನ್‌ಲೋಡ್‌‌ ಮಾಡಿಕೊಂಡಿದ್ದಾರೆ. ವಿಶ್ವವಿದ್ಯಾನಿಲಯವು ಒದಗಿಸುವ ಡಿಜಿಟಲ್‌ ವಿಷಯಗಳನ್ನು ಪ್ರವೇಶಿಸಲು ಈ ಆ್ಯಪ್‌ ಎಲ್ಲರಿಗೂ ಮುಕ್ತವಾಗಿದೆ. ಆನ್‌ಲೈನ್‌ ಜಾಹೀರಾತುಗಳು, ಆನ್‌ಲೈನ್‌ ನಿಯೋಜನೆ ಸಲ್ಲಿಕೆ ಮತ್ತು ಅದರ ಮೌಲ್ಯಮಾಪನ ಸೇರಿದಂತೆ ವಿದ್ಯಾರ್ಥಿಗಳ ಸಮಗ್ರ ಬೆಂಬಲಕ್ಕಾಗಿ ವಿಶ್ವವಿದ್ಯಾಲಯ ತನ್ನದೇ ಆ್ಯಪ್‌ ಅಭಿವೃದ್ಧಿಪಡಿಸುತ್ತಿದೆ.
ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅವಕಾಶಗಳು
ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸವಾಲುಗಳನ್ನು ಜಯಿಸಲು ಮತ್ತು ತಮ್ಮ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಬೆಂಬಲವನ್ನು ಒದಗಿಸಲು ದೇಶೀಯ ವಿಡಿಯೋ ಕಾನ್ಫರೆನ್ಸಿಂಗ್‌ ಆ್ಯಪ್‌ ಅಭಿವೃದ್ಧಿಪಡಿಸಲು ಸಂಪನ್ಮೂಲಗಳನ್ನು ಒದಗಿಸುವ ಅವಕಾಶ ಬಂದಿದೆ. ನಿಜವಾಗಿ ಶಿಕ್ಷಣ ಸಂಸ್ಥೆಗಳಿಗೆ ಸಮಗ್ರ ಮೊಬೈಲ್‌ ಆ್ಯಪ್‌ ಸದ್ಯದ ಪ್ರಮುಖ ಅವಶ್ಯಕತೆ. ಅದು ಈ ಕೆಳಗಿನ ಅಪ್ಲಿಕೇಶನ್‌ಗಳನ್ನು ಒಳಗೊಂಡಿರಬಹುದು. ಇ – ಲರ್ನಿಂಗ್‌- ಟ್ಯುಟೋರಿಯಲ್‌ಗಳಿಗಾಗಿ ವಿಡಿಯೋ ಕಾನ್ಫರೆನ್ಸಿಂಗ್‌ ಅಪ್ಲಿಕೇಶನ್‌; ಮೊದಲೇ ರೆಕಾರ್ಡ್‌ ಮಾಡಿದ ಆಡಿಯೊ – ವಿಡಿಯೋ ಪಾಠಗಳನ್ನು ಒಳಗೊಂಡ ಇ- ವಿಷಯ; ನಿಯೋಜನೆ, ಟ್ಯುಟೋರಿಯಲ್‌ಗಳಿಗಾಗಿ ಇ – ಮೌಲ್ಯಮಾಪನ; ಇ – ನೋಂದಣಿ / ಪ್ರವೇಶ; ಸಂವಾದಗಳಿಗಾಗಿ ಇ- ವೇದಿಕೆಗಳು; ಆನ್ಲೈನ್‌ ಪರೀಕ್ಷೆಗಳು. ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಮೊಬೈಲ್‌ ಅಪ್ಲಿಕೇಶನ್‌ ಅಧಾರಿತ ಕಲಿಕಾ ನಿರ್ವಹಣಾ ವ್ಯವಸ್ಥೆಯು ಪ್ರತಿ ವಿದ್ಯಾರ್ಥಿಯ ಜೀವನ ಚಕ್ರ ನಿರ್ವಹಣಾ ವ್ಯವಸ್ಥೆಯನ್ನು ಒಳಗೊಳ್ಳುವ ಪೂರ್ವಭಾವಿ ಸಮಾಲೋಚನೆಯಿಂದ ಆರಂಭವಾಗಿ ಅಂತಿಮವಾಗಿ ಅರ್ಹತಾ ಪತ್ರವನ್ನು ನೀಡುವ ತನಕ ರೂಪುಗೊಳ್ಳಬೇಕು. ಈ ಭವಿಷ್ಯದ ಶೈಕ್ಷಣಿಕ ಮೊಬೈಲ್‌ ಕಲಿಕಾ ಆ್ಯಪ್‌ಗಳು ಉನ್ನತ ಶಿಕ್ಷ ಣದಲ್ಲಿ ಮಾತ್ರವಲ್ಲದೆ ಶಾಲಾ ಶಿಕ್ಷಣದಲ್ಲೂ ಬೋಧನೆ – ಕಲಿಕೆಯ ಪ್ರಕ್ರಿಯೆಯ ಸಂಪೂರ್ಣ ನೋಟವನ್ನೇ ಪರಿವರ್ತಿಸುವ ಅದ್ಭುತ ಸಾಮರ್ಥ್ಯ‌ವನ್ನು ಹೊಂದಬಹುದು. ಶೈಕ್ಷಣಿಕ ಮೊಬೈಲ್‌ ಕಲಿಕೆಯ ಆ್ಯಪ್‌ಗಳ ಡೌನ್‌ಲೋಡ್‌ಗಳ ಸಂಖ್ಯೆ ಮತ್ತು ಸಕ್ರಿಯ ಬಳಕೆಯು ಭಾರತದಲ್ಲಿ ಶಿಕ್ಷಣ ಕ್ಷೇತ್ರದ ಅಪಾರ ಗಾತ್ರ ಮತ್ತು ಸಾಮರ್ಥ್ಯ‌ವನ್ನು ಹೇಳುತ್ತದೆ. ಶಿಕ್ಷಣಕ್ಕೆ ಪ್ರವೇಶ ಮತ್ತು ಸಮಾನತೆಯನ್ನು ಒದಗಿಸುವ ಶೈಕ್ಷ ಣಿಕ ಆ್ಯಪ್‌ಗಳನ್ನು ನಾವು ಪ್ರಜಾಸತ್ತಾತ್ಮಕ ಶೈಕ್ಷ ಣಿಕ ಆ್ಯಪ್‌ಗಳೆಂದು ಕರೆಯಬಹುದು.
ಡಿಜಿಟಲ್‌ ವಿಭಜನೆ ನಿವಾರಿಸುವುದು
ದೇಶದಲ್ಲಿ ಇಂಟರ್ನೆಟ್‌ ಪ್ರವೇಶವನ್ನು ಪ್ರಸ್ತುತ ಇರುವ ಪ್ರಮಾಣದಿಂದ ಮತ್ತಷ್ಟು ಹೆಚ್ಚಿಸಲು ದೇಶಿ ಬಳಕೆದಾರ ಸ್ನೇಹಿ ಮೊಬೈಲ್‌ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸುವುದು ಮುಖ್ಯವಾಗಿದೆ. ಇದು ಡಿಜಿಟಲ್‌ ವಿಭಜನೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಐಟಿ ಕೈಗಾರಿಕೆಗಳ ಸಹಯೋಗದೊಂದಿಗೆ ಶಿಕ್ಷ ಣ ಸಂಸ್ಥೆಗಳು ಮೊಬೈಲ್‌ ಆ್ಯಪ್‌ಗಳನ್ನು ವಿನ್ಯಾಸಗೊಳಿಸುವ ಮತ್ತು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಬಹುದು.
ಡಿಜಿಟಲ್‌ ಸಾಕ್ಷ ರತೆ
ಮೊಬೈಲ್‌ ಆ್ಯಪ್‌ಗಳು ಓದುವಿಕೆ ಮತ್ತು ಬರೆಯುವುದಕ್ಕೆ ಬಹಳ ಉಪಯುಕ್ತ ಸಾಧನವಾಗಬಹುದು ಮತ್ತು ಭಾರತದ ಡಿಜಿಟಲ್‌ ಸಾಕ್ಷರ ನಾಗರಿಕರೆಂದು ಮೌಲ್ಯಮಾಪನ ಮತ್ತು ಪ್ರಮಾಣೀಕರಣ ಮಾಡಲು ಸಂಬಂಧಿತ ಸಂಸ್ಥೆಗಳು, ಇಲಾಖೆಗಳೊಂದಿಗೆ ಸಂಪರ್ಕ ಕಲ್ಪಿಸಬಹುದು.
ಡಿಜಿಟಲ್‌ ಹಣಕಾಸು ಸಾಕ್ಷ ರತೆ
ಜನಧನ್‌‌ ಖಾತೆಗಳನ್ನು ನಿರ್ವಹಿಸುವುದು, ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ ಸೌಲಭ್ಯಗಳನ್ನು ಬಳಸುವುದು, ಯುಪಿಐ ಆಧಾರಿತ ಪಾವತಿಗಳು ಸೇರಿದಂತೆ ಆನ್‌ಲೈನ್‌ ಪಾವತಿಗಳು, ಬ್ಯಾಂಕ್‌ ಮತ್ತು ಹಣಕಾಸು ಸಂಬಂಧಿತ ಮಾಹಿತಿಯಲ್ಲಿ ದೇಶದ ಜನರನ್ನು ಶಿಕ್ಷಿತರನ್ನಾಗಿ ಮಾಡಲು ಮೊಬೈಲ್‌ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಬಹುದು. ಯಶಸ್ವಿ ಮೌಲ್ಯಮಾಪನಗಳ ನಂತರ, ಡಿಜಿಟಲ್‌ ಆರ್ಥಿಕ ಸಾಕ್ಷರತಾ ಪ್ರಮಾಣೀಕರಣವನ್ನು ಒದಗಿಸಬಹುದು. ಸಂಘಟಿತ ಮತ್ತು ಅಸಂಘಟಿತ ಕ್ಷೇತ್ರಗಳಲ್ಲಿನ ರೈತರು ಮತ್ತು ಕಾರ್ಮಿಕರಿಗೆ ಈ ಆ್ಯಪ್‌ಗಳು ಬಹಳ ಅನುಕೂಲವಾಗುತ್ತವೆ.
ಪೂರ್ವ ಕಲಿಕೆಯನ್ನು ಗುರುತಿಸುವುದು
ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆ (ಪಿಎಂಕೆವಿವೈ) ಅಡಿಯಲ್ಲಿ, ಪೂರ್ವ ಕಲಿಕೆಯ ಗುರುತಿಸುವಿಕೆಯು ಒಬ್ಬ ವ್ಯಕ್ತಿಯ ಅಸ್ತಿತ್ವದಲ್ಲಿರುವ ಕೌಶಲ್ಯ, ಜ್ಞಾನ ಮತ್ತು ಅನುಭವವನ್ನು ಔಪಚಾರಿಕ, ಅನೌಪಚಾರಿಕ ಅಥವಾ ಸಾಮಾನ್ಯ ಕಲಿಕೆಯಿಂದ ಪಡೆದ ಬಗ್ಗೆ ಮೌಲ್ಯಮಾಪನ ಮಾಡಲು ಬಳಸುವ ಪ್ರಕ್ರಿಯೆಯನ್ನು ಸೂಚಿಸುತ್ತದೆ. ಇದರ ಅಡಿಯಲ್ಲಿ ಐದು ಹಂತದ ಪ್ರಕ್ರಿಯೆಗಳಿವೆ. ಸಜ್ಜುಗೊಳಿಸುವಿಕೆ- ನುರಿತ ಆದರೆ ದೃಢೀಕರಿಸದ ಅಭ್ಯರ್ಥಿಗಳ ಸಜ್ಜುಗೊಳಿಸುವಿಕೆಗೆ ಸಂಬಂಧಿಸಿದ ಚಟುವಟಿಕೆಗಳು; ಸಮಾಲೋಚನೆ ಮತ್ತು ಪ್ರಿ ಸ್ಕ್ರೀನಿಂಗ್‌ ಪರೀಕ್ಷೆ- ಅವರ ಪೂರ್ವ ಜ್ಞಾನ ಮತ್ತು ಕೌಶಲ್ಯಗಳಿಗೆ ಹೊಂದಿಕೆಯಾಗುವ ಕೆಲಸವನ್ನು ಕಂಡುಹಿಡಿಯಲು ಪರೀಕ್ಷೆ; ಓರಿಯಂಟೇಷನ್‌- 6 ಗಂಟೆಗಳ ನಿರ್ದಿಷ್ಟ ತರಬೇತಿ, 4 ಗಂಟೆಗಳ ಮೃದು ಕೌಶಲ್ಯ ಮತ್ತು ಉದ್ಯಮಶೀಲತೆ ಮತ್ತು 2 ಗಂಟೆಗಳ ಮೌಲ್ಯಮಾಪನ ವಿಧಾನಗಳು; ಅಂತಿಮ ಮೌಲ್ಯಮಾಪನ- ಕೋರ್‌ ಮತ್ತು ನಾನ್‌ ಕೋರ್‌ ರಾಷ್ಟ್ರೀಯ ಉದ್ಯೋಗ ಮಾನದಂಡಗಳ ಮೌಲ್ಯಮಾಪನ; ಮತ್ತು ಪ್ರಮಾಣೀಕರಣ, ಮಾರ್ಕ್‌ಶೀಟ್‌ ಮತ್ತು ಪಾವತಿ. ಇದನ್ನೆಲ್ಲ ಒಂದು ಮೊಬೈಲ್‌ ಆ್ಯಪ್‌ಗೆ ಸಂಯೋಜಿಸಬಹುದು.
ಉನ್ನತ ಶಿಕ್ಷ ಣ ಮತ್ತು ತಾಂತ್ರಿಕ ಶಿಕ್ಷಣದಲ್ಲಿ ಬಲವಾದ ಮೂಲಸೌಕರ್ಯ ಮತ್ತು ನುರಿತ ಮತ್ತು ತಾಂತ್ರಿಕ ಮಾನವಶಕ್ತಿಯೊಂದಿಗೆ ನಮ್ಮ ದೇಶವು ನಿರಂತರವಾಗಿ ಬೆಳೆಯುತ್ತಿರುವ ಪ್ರತಿಭಾವಂತ ಯುವಜನರ ಅಪಾರ ಸಾಮರ್ಥ್ಯ‌ವನ್ನು ಹೊಂದಿದೆ. ಈ ಎಲ್ಲಾ ಅಂಶಗಳನ್ನು ಸಹಯೋಗದ ಚೌಕಟ್ಟಿನಲ್ಲಿ ಸಂಯೋಜಿಸಿದರೆ ನಿಸ್ಸಂದೇಹವಾಗಿ ನಮ್ಮ ಜೀವನದ ಎಲ್ಲ ರಂಗಗಳನ್ನೂ ಒಳಗೊಂಡ, ನಿರ್ದಿಷ್ಟವಾಗಿ ಸಾಮಾಜಿಕ – ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಪರ್ಕಕ್ಕಾಗಿ ನಾವು ಗುಣಮಟ್ಟದ ಯಥೇಚ್ಛ ದೇಶಿ ಮೊಬೈಲ್‌ ಆ್ಯಪ್‌ಗಳನ್ನು ಹೊಂದಬಹುದು. ಇದನ್ನು ಸಾಂಸ್ಥಿಕ – ಉದ್ಯಮ ಸಹಯೋಗದ ಮೂಲಕ ಸಾಧಿಸಬಹುದು. ಇದು ಉನ್ನತ ಶಿಕ್ಷ ಣ ಸಂಸ್ಥೆಗಳು ಮತ್ತು ಐಟಿ ಉದ್ಯಮಗಳೆರಡಕ್ಕೂ ಪರಸ್ಪರ ಗೆಲುವಿನ ಸಂದರ್ಭಗಳಾಗಬಹುದು.

(ಲೇಖಕರು ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಉಪಕುಲಪತಿ)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top