ಹಿಜಾಬ್‌ ವಿವಾದದ ಮೂಲಕ ಮೂಲಭೂತವಾದಿಗಳ ಕೈ ಮೇಲಾಗದಿರಲಿ

 

ಒಂದು ಹೆಜ್ಜೆ ಮುಂದೆ, ಎರಡು ಹೆಜ್ಜೆ ಹಿಂದೆ ಎಂಬಂತಾಗಬಾರದು

ಕರ್ನಾಟಕದ ಒಂದು ಸರಕಾರಿ ಶಿಕ್ಷ ಣ ಸಂಸ್ಥೆಯಿಂದ ಆರಂಭವಾದ ಹಿಜಾಬ್‌ ವಿವಾದ ಇಂದು ದೇಶದಲ್ಲಿಸುದ್ದಿಯಾಗಿ, ಅಂತಾರಾಷ್ಟ್ರೀಯ ಮಟ್ಟಕ್ಕೂ ವ್ಯಾಪಿಸಿದೆ. ಹಿಜಾಬ್‌ ಎನ್ನುವುದು ಇಸ್ಲಾಂನ ಭಾಗವೇ? ಸಮವಸ್ತ್ರಕ್ಕೆ ಅದು ಹೊಂದಿಕೆ ಆಗುತ್ತದೆಯೇ? ಕಳೆದ ವರ್ಷ ಹಿಜಾಬ್‌ ಧರಿಸದ ಯುವತಿಯರು ಇದ್ದಕ್ಕಿದ್ದಂತೆ ಧರಿಸಿದ್ದೇಕೆ? ಎಂಬೆಲ್ಲವಿಚಾರಗಳು ಸಾಮಾಜಿಕವಾಗಿ ಚರ್ಚೆಯಾಗುತ್ತಿವೆ. ಈಗಾಗಲೆ ನ್ಯಾಯಾಲಯವೂ ಅತ್ಯಂತ ಆಸ್ಥೆಯಿಂದ ಹಾಗೂ ಜವಾಬ್ದಾರಿಯುತವಾಗಿ ನಿರಂತರ ವಿಚಾರಣೆ ನಡೆಸುತ್ತಿರುವುದರಿಂದ, ಆ ವಿಚಾರದ ತೀರ್ಪನ್ನು ಗೌರವಾನ್ವಿತ ನ್ಯಾಯಾಲಯಕ್ಕೇ ಬಿಟ್ಟುಬಿಡೋಣ.
ಆದರೆ ಇಲ್ಲಿಇರುವುದು ಇಷ್ಟೇ ವಿಷಯವಲ್ಲ. ಇಂದು ಕರ್ನಾಟಕದ ಒಂದು ಭಾಗದಲ್ಲಿನಡೆಯುತ್ತಿರುವ ಬೆಳವಣಿಗೆಗೆ ಐತಿಹಾಸಿಕ, ಚಾರಿತ್ರಿಕ ಆಧಾರವಿರುತ್ತದೆ. ಒಂದು ಸಮಾಜ ವಿವಿಧ ಸನ್ನಿವೇಶದಲ್ಲಿಹೇಗೆ ವರ್ತಿಸುತ್ತದೆ ಎಂಬುದರ ಕುರಿತು ಸಮಾಜವಿಜ್ಞಾನಿಗಳು ಬಹಳ ಹಿಂದಿನಿಂದಲೂ ವಿಶ್ಲೇಷಣೆ ನಡೆಸುತ್ತಲೇ ಇದ್ದಾರೆ. ಇದರ ಮೂಲಗಳನ್ನು ಅರಿಯದಿದ್ದರೆ ಇಂದಿನ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಅಥವಾ ಇಂದಿನ ಸಮಸ್ಯೆ ಬಗೆಹರಿದರೂ ನಾಳೆ ಇದೇ ಸ್ವರೂಪದ ಮತ್ತೊಂದು ಸಮಸ್ಯೆ ತಲೆದೋರುತ್ತದೆ.
ಖ್ಯಾತ ಸಂಶೋಧಕ, ಲೇಖಕ ಸೀತಾರಾಮ್‌ ಗೋಯೆಲ್‌ ಅವರು ಹಿಂದೂ, ಮುಸ್ಲಿಂ ಮಾನಸಿಕತೆ ಕುರಿತು ಅನೇಕ ವಿಚಾರಧಿಧಿಧಿಗಳನ್ನು ತಮ್ಮ ಹಲವಾರು ಪುಸ್ತಕಗಳ ಮೂಲಕ ತಿಳಿಸಿಕೊಟ್ಟಿದ್ದಾರೆ. ಮೇಲ್ನೋಟಕ್ಕೆ ಅವರ ಮಾತುಗಳು ಮುಸ್ಲಿಂ ವಿರೋಧಿ ಎಂದೆನಿಸುತ್ತವೆ. ಇತಿಹಾಸ ಎಂದರೆ ನಡೆದದ್ದನ್ನು ಯಾವುದೇ ಸಂಗತಿಯನ್ನು ಮುಚ್ಚಿಹಾಕದೇ, ಎಲ್ಲವನ್ನೂ ಇದ್ದಂತೆಯೇ ಹೇಳುವುದು. ಅಂತೆಯೇ, ಸೀತಾರಾಂ ಗೋಯೆಲ್‌ ಅವರು ತಮ್ಮ ‘ವಾಯ್ಸ್‌ ಆಫ್‌ ಇಂಡಿಯಾ’ ಪುಸ್ತಕ ಸರಣಿಗಳಲ್ಲಿಯಾವುದೇ ಮುಚ್ಚುಮರೆ ಇಲ್ಲದ ಇತಿಹಾಸವನ್ನು ಬರೆದಿದ್ದಾರೆ.
ಅವರು ಒಂದು ಕಡೆ ಹೇಳುತ್ತಾರೆ: ಭಾರತದಲ್ಲಿರುವ ಮುಸ್ಲಿಮರು ಬಹುತೇಕ ಈ ನೆಲದ ಮೂಲ ಬೇರಿನವರೆ. ಕೆಲವರು ಮಾತ್ರವೇ ತಮ್ಮ ವಿದೇಶಿ ಪೂರ್ವಜರ ಕುರಿತು ಹೆಮ್ಮೆ ಹೊಂದಿದ್ದಾರೆ ಎಂಬುದನ್ನು ಬಿಟ್ಟರೆ ಉಳಿದೆಲ್ಲಮುಸ್ಲಿಮರ ಕುಲ, ಭಾಷೆ, ವಸ್ತ್ರದ ನಡಾವಳಿಗಳು ಹಿಂದೂಗಳಂತೆಯೇ ಇದೆ.
ಎಲ್ಲಮತ, ಧರ್ಮಗಳಲ್ಲೂಹೆಚ್ಚಿನ ಸಂಖ್ಯೆಯ ಸುಧಾರಣಾವಾದಿಗಳು, ಮುಂದಾಲೋಚನೆಯುಳ್ಳವರು, ಹೊಸತನಕ್ಕೆ ಒಗ್ಗಿಕೊಳ್ಳುವವರೇ ಆಗಿರುತ್ತಾರೆ. ಹಳೆಯ ಸಂಪ್ರದಾಯ, ನಂಬಿಕೆಗಳ ಒಳ್ಳೆಯ ಸಕಾಲಿಕ ವಿಚಾರಗಳನ್ನು ಹೊಸಯುಗಕ್ಕೆ ಹೊಂದಿಸಿಕೊಳ್ಳುತ್ತಿರುತ್ತಾರೆ. ಆದರೆ, ಹಳೆಯದೆಲ್ಲವೂ ಶ್ರೇಷ್ಠ, ನಾವು ಹಿಂದಿನ ಕಾಲದಂತೆಯೇ ಬದುಕಬೇಕು ಎಂಬ ಮೂಲಭೂತವಾದಿಗಳು ಎಲ್ಲಮತ ಧರ್ಮದಲ್ಲೂಸಣ್ಣ ಸಂಖ್ಯೆಯಲ್ಲಿರುತ್ತಾರೆ. ಇಂಥ ಲಘು ಪ್ರಮಾಣದ ಮೂಲಭೂತವಾದಿಗಳೇ ಇಂದು ಮುಸ್ಲಿಂ ಸಮುದಾಯದೊಳಗೆ ಸಣ್ಣ ಸವಾಲಾಗಿ ಪರಿಣಮಿಸಿದ್ದಾರೆ.
ಹಾಗೆ ನೋಡಿದರೆ, ಈ ಹಿಂದಿನ ವರುಷಗಳಿಗೆ ಹೋಲಿಸಿದರೆ, ಮುಸ್ಲಿಂ ಸಮುದಾಯ ಸಾಕಷ್ಟು ಸುಧಾರಣೆ ಕಾಣುವತ್ತ ಹೆಜ್ಜೆ ಹಾಕುತ್ತಿದೆ. ಮುಸ್ಲಿಮರು ಹೆಚ್ಚು ಶಿಕ್ಷಿತರಾದಂತೆ, ಹಿಂದೂಗಳ ಜತೆಗೆ ವ್ಯಾಪಾರ ವಹಿವಾಟು ನಡೆಸಲು ಆರಂಭಿಸಿದಂತೆ, ಸಮುದಾಯದೊಳಗಿನ ಮೂಲಭೂತವಾದಿತನ ಕಡಿಮೆಯಾಗುತ್ತಿದೆ. ಮುಸ್ಲಿಮರು ಕೂಡ ನಿಧಾನವಾಗಿ ಆಧುನಿಕತೆಯತ್ತ ವಾಲುತ್ತಿದ್ದಾರೆ. ವೈಯಕ್ತಿಕ ನಂಬಿಕೆ ಹಾಗೂ ಸಾಮಾಜಿಕ ಸ್ವಾಸ್ಥ್ಯ ವಿಚಾರದಲ್ಲಿಸಂಘರ್ಷ ನಡೆದರೆ, ಸಾಮಾಜಿಕ ಸ್ವಾಸ್ಥ್ಯವೇ ತಮ್ಮ ಮೊದಲ ಆದ್ಯತೆಯನ್ನಾಗಿ ಮಾಡಿಕೊಳ್ಳಬೇಕು ಎಂಬ ಅರಿವು ಅವರಲ್ಲೂಮೂಡುತ್ತಿದೆ. ತೀರಾ ಇತ್ತೀಚಿನ ಉದಾಹರಣೆ ಹೇಳಬೇಕೆಂದರೆ, ಉತ್ತರಾಖಂಡದ ಮಹಿಳೆ ಶಾಯರಾ ಬಾನೊಗೆ ಆಕೆಯ ಪತಿ ರಿಜ್ವಾನ್‌ ಅಹಮದ್‌ ಎಂಬಾತ ನಿಂತ ನಿಂತಲ್ಲೆತ್ರಿವಳಿ ತಲಾಖ್‌ ನೀಡಿದ. ಮಹಿಳೆಯ ಅಭಿಪ್ರಾಯವನ್ನೂ ಕೇಳದೆ, ಪುನಃ ಪರಾಮರ್ಶೆಗೂ ಅವಕಾಶವಿಲ್ಲದ, ಏಕಪಕ್ಷೀಯ ಪದ್ಧತಿಯು ತನ್ನ ಸ್ವಾತಂತ್ರ್ಯ ಹರಣ ಎಂದು ಶಾಯರಾ ಬಾನೊ ನ್ಯಾಯಾಲಯದ ಮೆಟ್ಟಿಲೇರಿದರು. ವೈಯಕ್ತಿಕ ಸ್ವಾತಂತ್ರ್ಯ ಹರಣವಷ್ಟೆ ಅಲ್ಲದೆ ಸಮಾಜದ ಹಿತದೃಷ್ಟಿಯಿಂದ ಪರಿಗಣಿಸಿದ ನ್ಯಾಯಾಲಯ, ಒಟ್ಟಾರೆ ತ್ರಿವಳಿ ತಲಾಖ್‌ ಎನ್ನುವುದೇ ಭಾರತದ ಸಂವಿಧಾನದತ್ತ ಹಕ್ಕುಗಳಿಗೆ ವಿರುದ್ಧ ಎಂದು ತಿಳಿಸಿತು. ಈ ವಿಚಾರವನ್ನು ಅನೇಕ ಪ್ರಬುದ್ಧ ಮುಸ್ಲಿಮರು ಹಾಗೂ ಒಟ್ಟಾರೆ ಸಮಾಜ ಸ್ವಾಗತಿಸಿತು. ಮುಸ್ಲಿಂ ಸಮುದಾಯದವರಿಗೆ ಬಹುಪತ್ನಿತ್ವಕ್ಕೆ ಅವಕಾಶ ಸದ್ಯಕ್ಕಂತೂ ಇದೆ. ಈಗಲೂ ಕೆಲವರು ಒಂದಕ್ಕಿಂತ ಹೆಚ್ಚು ಮದುವೆ ಮಾಡಿಕೊಳ್ಳುತ್ತಾರೆ. ಆದರೆ ಅದರ ಸಂಖ್ಯೆ ಹಿಂದಿನಷ್ಟಿಲ್ಲ. ಶಿಕ್ಷಿತ ಮುಸ್ಲಿಂ ಯುವಕರು ಹಿಂದೂ ಯುವಕರಂತೆಯೇ ತಮ್ಮ ಏಕ ಪತ್ನಿಗೆ ನಿಷ್ಠರಾಗಿರುವುದನ್ನು ಕಾಣುತ್ತೇವೆ. ಅದರಲ್ಲೂಅನೇಕರು ಒಂದು ಅಥವಾ ಎರಡು ಮಕ್ಕಳನ್ನು ಮಾತ್ರ ಮಾಡಿಕೊಳ್ಳುತ್ತಿದ್ದಾರೆ.
ಇಂತಹ ಅನೇಕ ಸುಧಾರಣೆಗಳನ್ನು ಕಾಣುತ್ತಿರುವುದು ಆ ಸಮುದಾಯದ ಸಣ್ಣ ಸಂಖ್ಯೆಯ ಮೂಲಭೂತವಾದಿಗಳಿಗೆ ಇಷ್ಟವಾಗುತ್ತಿಲ್ಲ. ಹೀಗೇ ಸುಧಾರಣೆಯಾದರೆ ಎಲ್ಲಿತಮ್ಮ ಹಿಡಿತ ಕೈತಪ್ಪುತ್ತದೆಯೋ ಎಂಬ ಆತಂಕ. ಈ ಕಾರಣಕ್ಕಾಗಿ ಸಮುದಾಯದಲ್ಲಿಮೂಲಭೂತವಾದವನ್ನು ಪುನರ್‌ ಸ್ಥಾಪಿಸಲು ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ ಅಥವಾ ಅಂತಹ ಅವಕಾಶವನ್ನು ಸೃಷ್ಟಿಸಿಕೊಳ್ಳುತ್ತಾರೆ. ಹಿಜಾಬ್‌ ಸಂಘರ್ಷವೂ ಇಂಥದ್ದೇ ಒಂದು ಪ್ರಯತ್ನ ಎಂಬಂತೆ ಕಾಣುತ್ತದೆ. ಉಡುಪಿಯ ಸರಕಾರಿ ಶಿಕ್ಷ ಣ ಸಂಸ್ಥೆಯೊಂದರಲ್ಲಿಆರು ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಬೇಕೆಂದು ಪಟ್ಟು ಹಿಡಿದರು. ಯಾಕೆ ಈ ರೀತಿ ಹಠ ಮಾಡಿದರು ಎಂಬುದು ಯಾರಿಗೂ ಗೊತ್ತಿಲ್ಲ. ಏಕೆಂದರೆ, ಇತ್ತೀಚಿನ ದಿನಗಳಲ್ಲಿಉಡುಪಿಯ ಆ ಸರಕಾರಿ ಕಾಲೇಜು ಸೇರಿದಂತೆ, ರಾಜ್ಯದ ಎಲ್ಲಕಡೆಯೂ ಬಹುಪಾಲು ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ತರಗತಿಗೆ ಬರುತ್ತಿರಲಿಲ್ಲ. ಮನೆಯಿಂದ ಶಾಲೆಗೆ ಹೊರಡುವಾಗಲೇ ಹಿಜಾಬ್‌ ತೆಗೆದಿಡುಧಿಧಿಧಿತ್ತಿದ್ದರು ಅಥವಾ ಶಾಲೆಯ ಕಾಂಪೌಂಡ್‌ ಪ್ರವೇಶಿಸುತ್ತಿದ್ದಂತೆಯೇ ಬುರ್ಖಾ, ಹಿಜಾಬ್‌ ತೆಗೆದು ಬ್ಯಾಗಿನಲ್ಲಿಟ್ಟುಕೊಂಡು, ಎಲ್ಲರಂತೆ ಸಹಜವಾಗಿ ತರಗತಿಗಳಿಗೆ ಹಾಜರಾಗುತ್ತಿದ್ದರು. ಆದರೆ ಈಗ ಹಿಜಾಬ್‌ ಸಂಘರ್ಷ ಶುರುವಾದ ಬಳಿಕ, ಹಿಜಾಬ್‌ ಧಾರಣೆ ಎಂಬುದು ದೇಶಾದ್ಯಂತ ಹರಡಿದೆ. ಬೆರಳೆಣಿಕೆ ವಿದ್ಯಾರ್ಥಿನಿಧಿಧಿಧಿಯರು ಧರಿಸುತ್ತಿದ್ದ ಹಿಜಾಬ್‌ ಅನ್ನು ಸಾವಿರಾರು ಮಂದಿ ಧರಿಸುವಂತಾಗಿದೆ. ತಮ್ಮ ಮಕ್ಕಳಿಗೆ ಹಿಜಾಬ್‌ ಧರಿಸದೇ ಶಾಲೆಗೆ ಕಳುಹಿಸಿದರೆ ಸಮುದಾಯದ ತಿರಸ್ಕಾರಕ್ಕೆ ಒಳಗಾಗುವ ಭಯ ಅನೇಕ ಪ್ರಗತಿಪರರಲ್ಲೂಕಂಡು ಬರುತ್ತಿದೆ. ಸುಧಾರಣೆಯಲ್ಲಿಒಂದು ಹೆಜ್ಜೆ ಮುಂದಿಟ್ಟು ಎರಡು ಹೆಜ್ಜೆ ಹಿಂದೆ ಇಟ್ಟಂತೆ ಆಗಿದೆ. ಇಂತಹ ಭಾವನಾತ್ಮಕ ವಿಚಾರಗಳ ಆಧಾರದಲ್ಲಿಸಮುದಾಯಧಿಧಿಧಿವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಮೂಲಭೂತವಾದಿಗಳಿಗೆ ಯಾರೂ ಅವಕಾಶ ಮಾಡಿಕೊಡಬಾರದು. ವಿಶೇಷವಾಗಿ ಇದು ಮುಸ್ಲಿಂ ಸಮಾಜದಲ್ಲಿರುವ ಜನಪ್ರತಿನಿಧಿಗಳು, ಸಾಹಿತಿಗಳು, ಚಿಂತಕರ ಜವಾಬ್ದಾರಿ.
ಹಾಗಾದರೆ ಮುಸ್ಲಿಂ ಹೆಣ್ಣು ಮಕ್ಕಳ ರಕ್ಷ ಣೆ ಹೊಣೆ ಆ ಸಮುದಾಯದ ಮುಖಂಡರ ಹೊಣೆ ಮಾತ್ರವೇ? ಒಟ್ಟಾರೆ ಸಮಾಜದ ಪಾತ್ರ ಇದರಲ್ಲಿಇಲ್ಲವೇ? ಖಂಡಿತ ಇದೆ. ಏಕೆಂದರೆ ಮುಸ್ಲಿಮರ ಸಮಸ್ಯೆ ಕೇವಲ ಆ ಸಮುದಾಯದ ಸಮಸ್ಯೆ ಅಲ್ಲ. ಅದು ಈ ಸಮಾಜದ, ಈ ದೇಶದ ಸಮಸ್ಯೆ. ನಮ್ಮ-ನಿಮ್ಮೆಲ್ಲರ ಸಮಸ್ಯೆ. ಹಾಗಾಗಿ, ಆ ಸಮುದಾಯದೊಳಗೆ ಸಂಪ್ರದಾಯವಾದಿಗಳು ಸೃಷ್ಟಿಸಿರುವ ಕಠಿಣ ನಿಮಯಗಳನ್ನು ಒಟ್ಟಾರೆ ಸಮಾಜ ಪೂರ್ವಾಗ್ರಹದಿಂದ ನೋಡಬಾರದು.
ಮುಸ್ಲಿಂ ಸಮುದಾಯವು ಸುಲಭವಾಗಿ ಒಗ್ಗದ ಇಸ್ಲಾಮಿಕ್‌ ನಿಯಮಗಳಿಗೆ ಅನುಗುಣವಾಗಿ ವರ್ತಿಸುತ್ತದೆ ಎನ್ನುವುದನ್ನು ಅರಿಯಬೇಕು. ಇಸ್ಲಾಂನ ಮೂಲ ವಿದೇಶವಾದ್ದರಿಂದ ಅದರ ಅನೇಕ ಸಂಪ್ರದಾಯಗಳು ಭಾರತದ ಸ್ಥಳೀಯತೆಗೆ, ಸಂಸ್ಕೃತಿಗೆ ಕೆಲವೊಮ್ಮೆ ಸುಲಭವಾಗಿ ಹೊಂದಾಣಿಕೆ ಆಗದೇ ಇರುವ ಸಾಧ್ಯತೆಗಳು ಹೆಚ್ಚಿರುತ್ತವೆ. ಹಿಂದೂ ಧರ್ಮದಲ್ಲಿಆದಷ್ಟು ತ್ವರಿತವಾದ ಸುಧಾರಣೆಗಳು ಅಲ್ಲಿಆಗುವುದಿಲ್ಲಎನ್ನುವುದು ಬೇರೆ ಮಾತು. ಇಂತಹ ಸ್ಥಿತಿಯಲ್ಲೂಮುಸ್ಲಿಂ ಸಮುದಾಯ ನಿಧಾನವಾಗಿ ಬದಲಾವಣೆಯತ್ತ ಮುಖ ಮಾಡುತ್ತಿರುವುದನ್ನು ಗಮನಿಸಬೇಕು ಹಾಗೂ ಅದನ್ನು ಗೌರವಿಸಬೇಕು. ಧನಾತ್ಮಕವಾಗಿ ಆಗಿರುವ ಬದಲಾವಣೆಗಳ ಕುರಿತು ಹೆಚ್ಚು ಚರ್ಚೆ ನಡೆಸುವುದರಿಂದ, ಒಟ್ಟಾರೆ ಆ ಸಮಾಜದ ಮನಸ್ಸು ಕೂಡ ಬದಲಾವಣೆಯತ್ತ ತುಡಿಯುತ್ತದೆ. ಕೇವಲ ಅಲ್ಲಿನ ಲೋಪ-ದೋಷಗಳನ್ನು, ತಪ್ಪುಗಳನ್ನೇ ಎತ್ತಿ ತೋರಿಸಿ ದೂಷಣೆ ಮಾಡುತ್ತಾ ಕುಳಿತರೆ ನಷ್ಟವೇ ಹೆಚ್ಚು. ಇಂಥ ನಡೆಗಳಿಂದ ಈಗಾಗಲೆ ದ್ವೀಪದಂತಾಗಿರುವ ಮುಸ್ಲಿಂ ಸಮುದಾಯವನ್ನು ಪ್ರತ್ಯೇಕತೆಯತ್ತ ತಳ್ಳಿದಂತಾಗುತ್ತದೆ ಎಂಬುದನ್ನು ಮುಸ್ಲಿಮೇತರ ಸಮಾಜ ಅರಿತುಕೊಳ್ಳಬೇಕು. ಭಯೋತ್ಪಾದನೆ ಚಟುವಟಿಕೆ ನಡೆಸುವವರು ಇಸ್ಲಾಂಗೆ ಸೇರಿದವರು ಎಂಬ ಕಾರಣಕ್ಕಾಗಿ, ಎಲ್ಲಮುಸ್ಲಿಮರೂ ಭಯೋತ್ಪಾದಕರು ಎಂದು ಕಾಣಬಾರದು. ಭಯೋತ್ಪಾದನೆಯಂತಹ ಹೀನ ಮನಃಸ್ಥಿತಿ ಉಳ್ಳ ತೀರಾ ಸಣ್ಣ ಸಂಖ್ಯೆಯ ಮುಸ್ಲಿಂ ಮೂಲಭೂತವಾದಿಗಳ ಪ್ರಭಾವ ಆ ಸಮುದಾಯದೊಳಗೆ ಹರಡದಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಇತರೆ ಸಮಾಜದವರು ಮುಸ್ಲಿಮರೊಂದಿಗೆ ಅನುಸಂಧಾನ ಮಾಡಬೇಕಾಗುತ್ತದೆ.
ಆದರೆ, ಇಂಥಾ ಕೆಲಸ ಹೆಚ್ಚು ಹೆಚ್ಚು ನಡೆಯುತ್ತಿಲ್ಲ. ಅಚ್ಚರಿಯ ಇನ್ನೊಂದು ವಿಚಾರವೆಂದರೆ, ಪ್ರಗತಿಪರರು ಎನಿಸಿಕೊಂಡ ಗುಂಪು, ಆ ಸಮುದಾಯದ ಪಾಲಿಗೆ ದೊಡ್ಡ ಹಿತಶತ್ರುವೇ ಆಗಿದೆ. ಮಹಿಳಾ ಹಕ್ಕು ಹೋರಾಟಗಾರರು ಹಿಂದೂ ಧರ್ಮದ ಮಹಿಳೆಯರ ಹಕ್ಕುಗಳಿಗೆ ಸೀಮಿತವಾಗಿ ಹೋರಾಟ ನಡೆಸುತ್ತಿದ್ದಾರೆ. ಮುಸ್ಲಿಂ ಮಹಿಳಾ ಹಕ್ಕುಗಳಿಗೆ, ಅವರ ಘನತೆಯ ಬದುಕಿಗೆ ಸಂಬಂಧಿಸಿದಂತೆ, ವಿರುದ್ಧವಾಗಿರುತ್ತಾರೆ. ಉದಾಹರಣೆಗೆ ಕರ್ನಾಟಕದಲ್ಲಿಯಾವುದೋ ಒಂದು ದೇವಸ್ಥಾನದಲ್ಲಿನಡೆಯುವ ಬೆತ್ತಲೆ ಪೂಜೆ ವಿರುದ್ಧ ಸಿಡಿದೇಳುತ್ತಾರೆ. ಇದು ಮಹಿಳಾ ಸ್ವಾತಂತ್ರ್ಯ ಹರಣ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ. ಹಿಂದೂ ಧರ್ಮದಲ್ಲಿದ್ದ ಸತಿ ಸಹಗಮನ ಹೀನಾತಿಹೀನ ಪದ್ಧತಿ ಎಂದು ಖಡಾಖಂಡಿತವಾಗಿ ಹೇಳುತ್ತಾರೆ. ಇದೆಲ್ಲವೂ ಸರಿ ಹಾಗೂ ಇಂತಹ ನೀಚ ಆಚರಣೆಗಳು ತೊಲಗಬೇಕು ಎನ್ನುವುದರಲ್ಲಿಎರಡನೇ ಮಾತೇ ಇಲ್ಲ. ಆದರೆ ಮುಸ್ಲಿಂ ಸಮುದಾಯದ ಬುರ್ಖಾ, ತ್ರಿವಳಿ ತಲಾಖ್‌ನಂತಹ ವಿಚಾರಗಳು ಬಂದ ಕೂಡಲೆ ಮಹಿಳಾ ಹೋರಾಟಗಾರರ ವರ್ತನೆ ಹಾಗೂ ಅವರ ಹಕ್ಕಿನ ವ್ಯಾಖ್ಯಾನವೇ ಬದಲಾಗುತ್ತದೆ. ಹಿಜಾಬ್‌, ಬುರ್ಖಾ ಧರಿಸುವುದು ಮಹಿಳೆಯರ ಹಕ್ಕಿನ ವಿಷಯ ಎಂಬ ಪ್ರತಿಪಾದನೆ ಮಾಡುತ್ತಾರೆ. ಇನ್ನೂ ಕೆಲವರು, ಹಿಜಾಬ್‌ ಎಂಬುದು ಮುಸ್ಲಿಂ ಸಮುದಾಯದ ವಿಶಿಷ್ಟ ಆಚರಣೆ ಎಂದು ಮೌನವಾಗುತ್ತಾರೆ. ಇದು ಆಷಾಢಭೂತಿತನವಲ್ಲವೇ? ಬುರ್ಖಾ ಎನ್ನುವುದು ಮಹಿಳಾ ಸ್ವಾತಂತ್ರ್ಯದ ಹರಣ ಎಂದು ಸಂವಿಧಾನಶಿಲ್ಪಿ ಬಾಬಾಸಾಹೇಬ್‌ ಡಾ. ಬಿ.ಆರ್‌. ಅಂಬೇಡ್ಕರ್‌ ಅವರು ಗೋಡೆ ಬರಹದಷ್ಟೇ ಸ್ಪಷ್ಟವಾಗಿ ಹೇಳಿದ್ದಾರೆ. ಪಾಕಿಸ್ತಾನ ಅಥವಾ ಭಾರತದ ವಿಭಜನೆ ಎಂಬ ಕೃತಿಯಲ್ಲಿಬಾಬಾಸಾಹೇಬರು ಈ ಕುರಿತು ಅನೇಕ ಸಂಗತಿಗಳನ್ನು ಚರ್ಚಿಸಿದ್ದಾರೆ. ಬುರ್ಖಾ, ಹಿಜಾಬ್‌ ಕುರಿತಂತೆ ಅವರ ಮಾತುಗಳು ಅತ್ಯಂತ ತೀಕ್ಷ ್ಣ ಹಾಗೂ ಸಧಿಟಿಕದಷ್ಟೇ ಸ್ಪಷ್ಟವಾಗಿವೆ, ಅದರ ಸಾರಾಂಶ ಹೀಗಿದೆ.
‘‘ಹಿಂದೂ ಸಮಾಜದಲ್ಲಿರುವ ತಪ್ಪು ಆಚರಣೆಗಳು ಎಲ್ಲರಿಗೂ ತಿಳಿದಿವೆ. ಹಿಂದೂಗಳಲ್ಲಿರುವಷ್ಟೆ, ಕೆಲವೊಮ್ಮೆ ತುಸು ಹೆಚ್ಚಿನ ಕಂದಾಚಾರಗಳು ಮುಸ್ಲಿಮರಲ್ಲಿವೆ. ಅವುಗಳಲ್ಲಿಪರ್ದಾ ಅಥವಾ ಬುರ್ಖಾ ಹಾಗೂ ಹಿಜಾಬ್‌ ಸಹ ಒಂದು. ಬುರ್ಖಾದಿಂದಾಗಿ ಮುಸ್ಲಿಂ ಮಹಿಳೆಯರು ಸಮಾಜದಿಂದ ಪ್ರತ್ಯೇಕವಾಗುತ್ತಿದ್ದಾರೆ. ಭಾರತದಲ್ಲಿಬುರ್ಖಾ ಧರಿಸಿದ ಮಹಿಳೆಯರು ರಸ್ತೆಯಲ್ಲಿನಡೆದುಕೊಂಡು ಹೋಗುತ್ತಿರುವುದು ಒಂದು ಅಸಹನೀಯ ದೃಶ್ಯ. ಬುರ್ಖಾದಿಂದಾಗಿ ಮುಸ್ಲಿಂ ಮಹಿಳೆಯರ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತಿದೆ. ಅವರು ರಕ್ತಹೀನತೆ, ಕ್ಷ ಯ ರೋಗಕ್ಕೆ ತುತ್ತಾಗುತ್ತಿದ್ದಾರೆ. ಅವರ ಬೆನ್ನು ಮೂಳೆ ಬಾಗುತ್ತದೆ, ದೇಹದ ಸ್ವರೂಪ ಬದಲಾಗುತ್ತಿದೆ. ಹೆರಿಗೆಯ ಸಮಯದಲ್ಲಿಹೆಚ್ಚು ಜನರು ಸಾವಿಗೀಡಾಗುತ್ತಿದ್ದಾರೆ. ಹೊರ ಪ್ರಪಂಚದೊಂದಿಗೆ ಸಂಪರ್ಕವನ್ನು ಕಳೆದುಕೊಳ್ಳುವುದರಿಂದ ಅವರ ದೃಷ್ಟಿ ಸೀಮಿತವಾಗುತ್ತದೆ, ಇದರಿಂದಾಗಿ ಕುಟುಂಬದ ಸಣ್ಣಪುಟ್ಟ ಸಮಸ್ಯೆಗಳ ಕುರಿತು ಜಗಳವಾಡುತ್ತ ಮತ್ತಷ್ಟು ಸಂಕುಚಿತರಾಗುತ್ತಿದ್ದಾರೆ. ಇತರೆ ಸಮುದಾಯದ ಹೆಣ್ಣುಮಕ್ಕಳ ಜತೆ ತಮ್ಮನ್ನು ಹೋಲಿಸಿಕೊಂಡು ಕೀಳರಿಮೆಗೆ ತುತ್ತಾಗಿದ್ದಾರೆ. ನಾಲ್ಕು ಗೋಡೆಗಳ ನಡುವೆ ಬಂಧಿತರಾಗಿ ಜ್ಞಾನದಿಂದ ವಂಚಿತರಾಗುತ್ತಾರೆ. ಜೀವನದಲ್ಲಿಎದುರಾಗುವ ಸಮಸ್ಯೆಗಳನ್ನು ಎದುರಿಸುವ ಶಕ್ತಿಯನ್ನು ಅವರು ಕಳೆದುಕೊಳ್ಳುತ್ತಾರೆ.’’
ಹೀಗೆ ಬಾಬಾಸಾಹೇಬರ ಮಾತುಗಳನ್ನು ಯಾವುದೇ ಮಹಿಳಾ ಹಕ್ಕುಗಳ ಹೋರಾಟಗಾರರು ಕೇಳಿಸಿಕೊಂಡಿಲ್ಲ. ಒಂದು ವೇಳೆ ಕೇಳಿಸಿಕೊಂಡಿದ್ದರೂ, ಮುಸ್ಲಿಂ ಮಹಿಳೆಯರ ನೆರವಿಗೆ ಧಾವಿಸುತ್ತಿಲ್ಲ. ಹಿಂದೂ ಮಹಿಳೆಯರ ಹಕ್ಕಿಗೆ, ಘನತೆಗೆ ಚ್ಯುತಿ ಬಂದಾಗ ಬೀದಿಗಿಳಿಯುವ ಹೋರಾಟಗಾರರು ಬುರ್ಖಾ ವಿರುದ್ಧವೂ ದನಿಯೆತ್ತಬೇಕು. ಆಗ ಮಾತ್ರ ಅವರನ್ನು ನೈಜ ಹಾಗೂ ಪ್ರಾಮಾಣಿಕ ಮಹಿಳಾ ಹೋರಾಟಗಾರರು ಎನ್ನಬಹುದು. ಇಲ್ಲದಿದ್ದರೆ ಇವರೆಲ್ಲರನ್ನೂ ಆಷಾಢಭೂತಿಗಳು ಎಂದು ಘಂಟಾಘೋಷವಾಗಿ ಹೇಳಬಹುದು. ಯಾವುದೇ ಸಮುದಾಯ, ವರ್ಗದ ಕುರಿತ ದ್ವೇಷ ಮಾತ್ರವಲ್ಲ, ಓಲೈಕೆ ಹಾಗೂ ಸಮುದಾಯದ ದೋಷಗಳ ಕುರಿತ ‘ದಿವ್ಯ ನಿರ್ಲಕ್ಷ ್ಯ’ವೂ ಅಪಾಯಕಾರಿಯೇ!
ದೇಶದಲ್ಲಿನಡೆದ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಷ್ಟು ಭಾರತದ ಬೌದ್ಧಿಕ ಕ್ಷ ಮತೆ ಸದೃಢವಾಗಿದೆ. ಆದರೂ ಭಾರತದ ವಿರುದ್ಧ ಸದಾ ಕತ್ತಿ ಮಸೆಯುವ, ದೇಶದೊಳಗಿರುವ ಹಾಗೂ ಹೊರಗಿರುವ ಅನೇಕರು ಇಂತಹ ಘಟನೆ ನಡೆದ ಕೂಡಲೆ ಭಾರತದ ವಿರುದ್ಧ ಹರಿಹಾಯುತ್ತಾರೆ. ಪಾಕಿಸ್ತಾನದ ಸಚಿವ ಇದಕ್ಕೆ ಪ್ರತಿಕ್ರಿಯಿಸುತ್ತಾನೆ. ಇಸ್ಲಾಮಿಕ್‌ ರಾಷ್ಟ್ರಗಳ ಸಂಘಟನೆ(ಒಐಸಿ), ಭಾರತದಲ್ಲಿಮುಸ್ಲಿಂ ಮಹಿಳೆಯರ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ, ವಿಶ್ವಸಂಸ್ಥೆ ಮಧ್ಯಪ್ರವೇಶ ಮಾಡಲಿ ಎಂದು ಟ್ವೀಟ್‌ ಮಾಡುತ್ತದೆ. ರಾಣಾ ಅಯೂಬ್‌ರಂಥವರು ಪತ್ರಕರ್ತರ ಸೋಗಿನಲ್ಲಿವಿದೇಶಿ ಚಾನೆಲ್‌ಗಳಲ್ಲಿಕುಳಿತು ಅಪಪ್ರಚಾರ ಮಾಡುತ್ತಾರೆ. ಇಂಥವರಿಗೆ ವೇದಿಕೆ ನೀಡಲು ಅನೇಕ ವಿದೇಶಿ ಚಾನೆಲ್ಲುಗಳು, ಸಂಘ ಸಂಸ್ಥೆಗಳು ವೇದಿಕೆ ಕಲ್ಪಿಸುತ್ತವೆ. ಇಂತಹ ಬೆಳವಣಿಗೆಗಳಿಂದಾಗಿ, ಮೊದಲನೆಯದು ಇದು ಭಾರತದ ಸಾರ್ವಭೌಮತೆಯನ್ನು ಪ್ರಶ್ನಿಸಿದಂತಾಗುತ್ತದೆ. ಎರಡನೆಯದು, ಇಷ್ಟು ವಿಭಿನ್ನ ಸಂಸ್ಕೃತಿಗಳ ನಡುವೆ ಬದುಕಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಿರುವ ಭಾರತೀಯ ಸಮಾಜ ಅಸಹಿಷ್ಣು ಎಂದು ಬಿಂಬಿತವಾಗುತ್ತದೆ. ಮೂರನೆಯದು, ಭಾರತದ ಮುಸ್ಲಿಂ ಸಮಾಜವೇ ಇಂತಹ ಅಂತಾರಾಷ್ಟ್ರೀಯ ಹುನ್ನಾರಗಳ ಜತೆ ಭಾಗಿಯಾಗಿದೆ ಎಂಬ ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ. ನಾಲ್ಕನೆಯದಾಗಿ, ಇದರಿಂದ ಮುಸ್ಲಿಂ ಮಹಿಳೆಯರ ಸಮಸ್ಯೆಯಾದರೂ ಬಗೆಹರಿಯುತ್ತದೆಯೇ? ಅದೂ ಇಲ್ಲ.
ಸಾಮಾಜಿಕ ಜಾಲತಾಣಗಳು, ವಿದ್ಯುನ್ಮಾನ ಮಾಧ್ಯಮಗಳ ಯುಗದಲ್ಲಿಯಾವ ವಿಚಾರವೂ ಸ್ಥಳೀಯವಲ್ಲ. ಎಲ್ಲವಿಚಾರಗಳೂ, ವಿವಾದಗಳೂ ಕ್ಷ ಣಮಾತ್ರದಲ್ಲಿಜಾಗತಿಕ ಗೊಂದಲಕ್ಕೆ ಕಾರಣವಾಗುವ ಸಂದರ್ಭವಿರುತ್ತದೆ. ಇಂತಹ ಸೂಕ್ಷ ್ಮ ಅಂಶಗಳ ಕುರಿತು ಮುಸ್ಲಿಂ ಸಮುದಾಯದ ಮುಖಂಡರಷ್ಟೆ ಅಲ್ಲದೆ ಒಟ್ಟಾರೆ ಸಮಾಜ ಆಲೋಚಿಸಬೇಕು. ಎಲ್ಲಸಮುದಾಯಗಳ ನಿಯಂತ್ರಣ ಆಯಾ ಸಮುದಾಯದ ಪ್ರಗತಿಪರರ ಕೈಯಲ್ಲಿರಬೇಕೊ ಅಥವಾ ಮೂಲಭೂತವಾದಿಗಳ ಕೈಗೆ ಸಿಕ್ಕಿ ನಲುಗಬೇಕೊ ಎಂಬುದನ್ನು ಆಯಾ ಸಮುದಾಯವೇ ನಿರ್ಧರಿಸಬೇಕು. ಎಲ್ಲಸಮಸ್ಯೆಯನ್ನೂ ನ್ಯಾಯಾಲಯವೋ, ಸರಕಾರಿ ಆದೇಶವೋ ಬಗೆಹರಿಸಬೇಕು ಎಂಬ ಮನಸ್ಥಿತಿಯಿಂದ ಹೊರಬರಬೇಕು. ಸುಧಾರಣೆಯತ್ತ ಇಟ್ಟ ಒಂದು ಹೆಜ್ಜೆ ನಂತರ ಹಿಮ್ಮುಖವಾಗಿ ಎರಡು ಹೆಜ್ಜೆ ಇಟ್ಟರೆ ಮಾನವ ಸಮಾಜ ಮತ್ತೆ ಶಿಲಾಯುಗದತ್ತ ಸಾಗುತ್ತದೆ. ಮುಂದಿನ ಪೀಳಿಗೆಯನ್ನು ಹಿಮ್ಮುಖ ಚಲನೆಯತ್ತ ಕೊಂಡೊಯ್ಯುವ ಯಾವುದೇ ಅಧಿಕಾರ ನಮಗೆ ಇರುವುದಿಲ್ಲ.

 

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top