ಭಾಗ 2 ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಪಟ್ಟಾಭಿಷಿಕ್ತರಾಗಿ ಐವತ್ತು ವರ್ಷಗಳಾಗುತ್ತಿವೆ. ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ಪ್ರಧಾನ ಸಂಪಾದಕ ಹರಿಪ್ರಕಾಶ ಕೋಣೆಮನೆ ಅವರಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೆಗ್ಗಡೆಯವರು ಹಲವು ಸಂಗತಿಗಳ ಕುರಿತು ವಿವರವಾಗಿ ಮಾತನಾಡಿದ್ದಾರೆ. # ತಮ್ಮ ಸೇವೆಯ ಕಾರಣಕ್ಕೆ, ಧರ್ಮಸ್ಥಳದ ಕ್ಷೇತ್ರದ ಮಹಿಮೆಯ ಕಾರಣಕ್ಕೆ ಅಪಾರ ಹೊಗಳಿಕೆ ಕೇಳಿಬರುತ್ತಿರುತ್ತದೆ. ಇದನ್ನು ತಾವು ಹೇಗೆ ಸ್ವೀಕರಿಸುತ್ತೀರಿ? ಇಂತಹ ಹೊಗಳಿಕೆಗಳಿಂದ ಭಯವಾಗುತ್ತದೆ ಎಂದು ನಾನು ಯಾವಾಗಲೂ ಹೇಳುತ್ತಿರುತ್ತೇನೆ. ಸೇವೆಯ ಅವಕಾಶಗಳು ಸಾಕಷ್ಟಿವೆ. ಇನ್ನೂ ನೂರು ಕೆಲಸಗಳನ್ನು ನಾವು ಮಾಡಬಹುದು. ಕಳೆದ ಎರಡು ವರ್ಷದಿಂದ ಕೆರೆ […]