– ಸುನೀಲ್ ಬಾರ್ಕೂರ್. ಕೆಲದಿನಗಳ ಹಿಂದಿನ ಮಾತು. ಭಾರತಾದ್ಯಂತ ಲಾಕ್ಡೌನ್ ಜಾರಿಯಲ್ಲಿದ್ದು ಜನ ಮನೆಗಳಲ್ಲಿಯೇ ಬಂದಿಯಾಗಿರುವ ಸಂದರ್ಭ, ರಾಜಸ್ಥಾನದ ಜೋಧಪುರ ಜೈಸಲ್ಮೇರ್ ಹೆದ್ದಾರಿಯ ಭಾಲುರಾಜ್ವಾ ಎಂಬ ಪುಟ್ಟಹಳ್ಳಿಯ ಅರಣ್ಯ ಪ್ರದೇಶಕ್ಕೆ ಮಧ್ಯರಾತ್ರಿಯಲ್ಲಿ ಲಗ್ಗೆಯಿಟ್ಟ ನಾಲ್ಕು ಜನ ಬಂದೂಕುಧಾರಿಗಳ ತಂಡವೊಂದು ಕೃಷ್ಣಮೃಗಗಳನ್ನು ಬೇಟೆಯಾಡಲು ಯಶಸ್ವಿಯಾಯಿತು. ಅಲ್ಲಿಂದ ಅವರು ಕಾಲ್ಗೀಳಲು ಮುಂದಾಗುತ್ತಿದ್ದಾಗ ಹದಿನೇಳು ವರ್ಷದ ಯುವಕನೊಬ್ಬ ಧುತ್ತನೆ ಬಂದು ಅಡ್ಡಲಾಗಿ ನಿಂತ. ಇದನ್ನು ನಿರೀಕ್ಷಿಸದ ತಂಡದಲ್ಲೊಬ್ಬ ಬಂದೂಕು ತೋರಿಸಿದ. ಆ ಯುವಕನೂ ಬಲು ಘಾಟಿಯೇ. ಅವರ ಬಂದೂಕಿನಲ್ಲಿ ಗುಂಡುಗಳು ಖಾಲಿಯಾದುದನ್ನರಿತಿದ್ದ […]