-ಎಲ್ಲ ಮೃತ್ಯುವಿಗೂ ಸೋಂಕು ಕಾರಣವಲ್ಲ -ಅನ್ಯ ರೋಗಗಳಿದ್ದವರ ಸಂಖ್ಯೆಯೇ ಅಧಿಕ -850 ಸಾವಿನಲ್ಲಿ ಕೊರೊನಾದಿಂದಲೇ ಪ್ರಾಣ ಕಳೆದುಕೊಂಡವರು 212 ಮಂದಿ ಮಾತ್ರ. ರಾಜ್ಯದಲ್ಲಿ ದಿನೇದಿನೆ ಕೊರೊನಾ ಸೋಂಕು ಮತ್ತು ಸಾವು ಹೆಚ್ಚಾಗುತ್ತಿದೆ. ಆದರೆ, ಸಂಭವಿಸುತ್ತಿರುವ ಸಾವುಗಳಿಗೆಲ್ಲ ಕೊರೊನಾ ಒಂದೇ ಕಾರಣವಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ರಾಜ್ಯದಲ್ಲಿ ಜುಲೈ 14ರವರೆಗೆ ದಾಖಲಾದ ಸುಮಾರು 850 ಸಾವುಗಳಲ್ಲಿ ಶೇಕಡಾ ೭೫ರಷ್ಟು ಪ್ರಕರಣಗಳಲ್ಲಿ ಮೃತರು ಈಗಾಗಲೇ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದವರು ಮತ್ತು ಹಲವಾರು ಕಾರಣಗಳಿಂದ ರೋಗ ನಿರೋಧಕ ಶಕ್ತಿ ಕಡಿಮೆ […]