– ಜಯಂತ್ ಗಂಗವಾಡಿ ಬೆಂಗಳೂರು. ನಾನು ಬೆಂಗಳೂರಿಗೆ ವಾಪಸ್ ಬರುತ್ತೇನೆ ಅನ್ನೋ ನಂಬಿಕೆಯೇ ಹೊರಟು ಹೋಗಿತ್ತು. ಮೇ 10ರ ಸಂಜೆ 5 ಗಂಟೆ ಸುಮಾರಿಗೆ ‘ಲಂಡನ್‌ನಿಂದ ಬೆಂಗಳೂರಿಗೆ ರಾತ್ರಿ 9.45ಕ್ಕೆ ವಿಮಾನ ಹೊರಡಲಿದೆ’ ಎಂದು ‘ಏರ್ ಇಂಡಿಯಾ’ ಕಚೇರಿಯಿಂದ ಫೋನ್ ಕರೆ ಬಂದಾಕ್ಷಣ ನಂಬಲು ಸಾಧ್ಯವಾಗದೆ ಜೋರಾಗಿ ಅತ್ತು ಬಿಟ್ಟೆ. ನಟಿ ಹಾಗೂ ವಿಧಾನ ಪರಿಷತ್ ಸದಸ್ಯೆ ಜಯಮಾಲಾ ಅವರ ಪುತ್ರಿ ಸೌಂದರ್ಯ ಇಂಗ್ಲೆಂಡ್‌ನಲ್ಲಿ ಅನುಭವಿಸಿದ ಲಾಕ್‌ಡೌನ್ ನೋವಿನ ಕತೆಯನ್ನು ‘ವಿಜಯ ಕರ್ನಾಟಕ’ದ ಮುಂದೆ ತೆರೆದಿಟ್ಟದ್ದು ಹೀಗೆ. […]