-ವಿದ್ಯಾರ್ಥಿಗಳಿಗೂ ಶಿಕ್ಷಣ ಸಂಸ್ಥೆಗಳಿಗೂ ‘ಮೆಂಟರ್’ ವ್ಯವಸ್ಥೆ ಕಲ್ಪಿಸುವುದು ಸರಕಾರದ ನೀತಿಯಾಗಬೇಕು. ಪ್ರೊ.ಎಂ.ಆರ್.ದೊರೆಸ್ವಾಮಿ. ವೈಯಕ್ತಿಕ ಮತ್ತು ಸಾಂಸ್ಥಿಕ ಸಾಮರ್ಥ್ಯ ಹಾಗೂ ಸಬಲೀಕರಣಗೊಳಿಸುವುದೇ ಕ್ರಿಯಾಶೀಲ ಶಿಕ್ಷ ಣ ಸಂಸ್ಥೆಗಳ ಶ್ರೇಷ್ಠತೆಯ ಕುರುಹು. ಅವು ಶೈಕ್ಷ ಣಿಕ ಸೇವೆಯ ಗುಣಮಟ್ಟ ಮತ್ತು ಸಂಸ್ಥೆಗಳ ಫಲಿತಾಂಶವನ್ನು ನಿರೂಪಿಸುತ್ತವೆ. ಮಾರ್ಗದರ್ಶನದ ವಿಭಿನ್ನ ಆಯಾಮಗಳನ್ನು ಮತ್ತು ಅದನ್ನು ಮಾನವ ಕಾರ್ಯಕ್ಷ ಮತೆ ಮತ್ತು ಸಾಂಸ್ಥಿಕ ಸೇವೆಗಳ ವರ್ಧಕವಾಗಿ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಅನ್ವೇಷಿಸಲು ಇಚ್ಛಿಸುತ್ತೇನೆ. (ಮಾರ್ಗದರ್ಶಕ ಪದವನ್ನು ಗ್ರೀಕ್ ಮೂಲದ ಪದವಾಗಿಯೇ ಗ್ರಹಿಸಿದರೂ ಅಮೆರಿಕ ಮತ್ತು […]