– ಮುದ್ರಾಂಕ ಶುಲ್ಕ ವಿನಾಯಿತಿ | ಅಕ್ರಮ ಸಕ್ರಮಕ್ಕೆ ಹೊಸ ಕಾಯಿದೆ ವಿಕ ಸುದ್ದಿಲೋಕ, ಬೆಂಗಳೂರು ಕೃಷಿಕರಲ್ಲದವರೂ ಕೃಷಿ ಭೂಮಿ ಖರೀದಿಸಲು ಅವಕಾಶ ಮಾಡಿಕೊಡುವ ಭೂಸುಧಾರಣಾ ಕಾಯಿದೆ ತಿದ್ದುಪಡಿಯ ದಿಟ್ಟ ಹೆಜ್ಜೆ ಇಟ್ಟ ರಾಜ್ಯ ಸರಕಾರ ಇದೀಗ 2ನೇ ಹಂತದ ಭೂಸುಧಾರಣೆಗೆ ಸಿದ್ಧವಾಗಿದೆ. ನೋಂದಣಿ ಶುಲ್ಕದಲ್ಲಿ ವಿನಾಯಿತಿ, ಭೂ ಖರೀದಿ ನಿಯಮ ಸರಳೀಕರಣ ಸೇರಿದಂತೆ ಮಹತ್ವದ ತೀರ್ಮಾನಗಳು ಜಾರಿಯಾಗಲಿವೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ಕೊರೊನಾ ಕಾಲಘಟ್ಟದಲ್ಲಿ ರಾಜ್ಯದ ಆರ್ಥಿಕತೆ, ವ್ಯವಹಾರ ಮತ್ತು ಜನಜೀವನದ […]