ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಯಶಸ್ವಿಯಾಗಿ ಮುಕ್ತಾಯಗೊಂಡಿವೆ. ಕೊರೊನಾ ವೈರಸ್‌ನ ಆತಂಕಕಾರಿ ಹಬ್ಬುವಿಕೆಯ ನಡುವೆಯೂ ಜೂನ್ 25ರಿಂದ ಆರಂಭಗೊಂಡಿದ್ದ ಪರೀಕ್ಷೆ ಶುಕ್ರವಾರ ಪೂರ್ಣಗೊಂಡಿದೆ. ಸುಮಾರು 8.50 ಲಕ್ಷ ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಶುಕ್ರವಾರ ನಡೆದ ತೃತೀಯ ಭಾಷಾ ವಿಷಯಗಳ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಶೇ.98.10ರಷ್ಟಿತ್ತು. ಪ್ರತಿ ಪರೀಕ್ಷೆಗೂ ಶೇ.98 ವಿದ್ಯಾರ್ಥಿಗಳು ವೈರಾಣುವಿನ ಭಯ ಮೀರಿ ಹಾಜರಾಗಿದ್ದರು. 32 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದ್ದು, ಇದು ಪರೀಕ್ಷಾ ಕೇಂದ್ರಗಳಿಂದ ಬಂದದ್ದಲ್ಲ ಎಂದು ಸರಕಾರ ಹೇಳಿದೆ. ಇವರೂ ಸೇರಿದಂತೆ, ಕ್ವಾರಂಟೈನ್‌ನಲ್ಲಿರುವ […]