ಮನೆಯಿಂದ ಕೆಲಸ ಮಾಡುವುದು, ವರ್ಕಿಂಗ್ ಫ್ರಮ್ ಹೋಮ್, ಐಟಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಹೊಸ ವಿಷಯವೇನೂ ಅಲ್ಲ. ವಾರಕ್ಕೊಂದು ದಿನವೋ ತಿಂಗಳಿಗೆರಡು ದಿನವೋ ಮನೆಯಿಂದ ಕೆಲಸ ಮಾಡುವ ಆಯ್ಕೆಯನ್ನು ಅನೇಕ ಸಂಸ್ಥೆಗಳು ಬಹಳ ವರ್ಷಗಳಿಂದಲೇ ತಮ್ಮ ಉದ್ಯೋಗಿಗಳಿಗೆ ನೀಡುತ್ತ ಬಂದಿವೆ. ಆಫೀಸಿಗೆ ಹೋಗುವ ಅಗತ್ಯವೇ ಇಲ್ಲದೆ, ಸದಾಕಾಲವೂ ಮನೆಯಿಂದಲೇ ಕೆಲಸ ಮಾಡುವ ಸೌಲಭ್ಯ ಒದಗಿಸಿರುವ ಸಂಸ್ಥೆಗಳೂ ಇವೆ. ಈ ರೀತಿ ಕೆಲವರಿಗಷ್ಟೇ ಸೀಮಿತವಾಗಿದ್ದ ಸೌಲಭ್ಯವನ್ನು ಎಲ್ಲರಿಗೂ ವಿಸ್ತರಿಸಿದ್ದು, ಐಚ್ಛಿಕವಾಗಿದ್ದುದನ್ನು ಕಡ್ಡಾಯವಾಗಿಸಿದ್ದು ಕೋವಿಡ್-19ರ ಹೆಚ್ಚುಗಾರಿಕೆ. ಕಣ್ಣಿಗೆ […]