ಇಂದಿನಿಂದ ಟೆಂಪಲ್, ಮಾಲ್, ಹೋಟೆಲ್ ಓಪನ್ | ಷರತ್ತುಗಳು ಅನ್ವಯ. ಎರಡೂವರೆ ತಿಂಗಳ ಬಳಿಕ ಸೃಷ್ಟಿಯಾಗಲಿದೆ ಸಂಚಲನ | ಪ್ರವಾಸಿ ತಾಣಗಳೂ ರೆಡಿ. ವಿಕ ಸುದ್ದಿಲೋಕ ಬೆಂಗಳೂರು. ಕೊರೊನಾದಿಂದಾಗಿ ಅಸ್ತವ್ಯಸ್ತಗೊಂಡಿದ್ದ ವಾಣಿಜ್ಯ ಕ್ಷೇತ್ರ ಮತ್ತು ಜನಜೀವನವನ್ನು ಮರಳಿ ಹಳಿಗೆ ತರುವ ಅತಿ ದೊಡ್ಡ ಕ್ರಮವಾಗಿ ಸೋಮವಾರದಿಂದ ರಾಜ್ಯಾದ್ಯಂತ ದೇವಾಲಯಗಳು, ಹೋಟೆಲ್ಗಳು ಮತ್ತು ವಾಣಿಜ್ಯ ಮಾಲ್ಗಳನ್ನು ಮತ್ತೆ ತೆರೆಯಲಾಗುತ್ತಿದೆ. ಇದರೊಂದಿಗೆ ಸುಮಾರು ಎರಡುವರೆ ತಿಂಗಳಿನಿಂದ ಸ್ಥಗಿತಗೊಂಡಿದ್ದ ಆತಿಥ್ಯ ಕ್ಷೇತ್ರ, ಧಾರ್ಮಿಕ ಮತ್ತು ವ್ಯಾಪಾರಿ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಯಾಗಲಿದೆ. […]