– ಡಾ.ರೋಹಿಣಾಕ್ಷ ಶಿರ್ಲಾಲು. ಸಾಹಿತ್ಯ ನಿಂತ ನೀರಲ್ಲ. ಕಾಲ ಉರುಳಿದಂತೆ ಸಾಹಿತ್ಯ ಕೃತಿಗಳ ಆಶಯ, ಅಭಿವ್ಯಕ್ತಿ, ಶೈಲಿ, ವಸ್ತು ಹೀಗೆ ಎಲ್ಲವೂ ಬದಲಾಗುತ್ತಾ ಹೋಗುತ್ತದೆ. ಇದು ದೋಷವಲ್ಲ. ಜೀವಂತಿಕೆಯ ಲಕ್ಷಣ. ಹೀಗಾಗಿ ಯಾವುದೇ ಭಾಷೆಯ ಕಳೆದ ಒಂದು ನೂರು ವರ್ಷದ ಸಾಹಿತ್ಯಚರಿತ್ರೆಯನ್ನು ಅಭ್ಯಾಸ ಮಾಡಲು ಹೊರಟರೆ ನಮಗೆ ಈ ವೈವಿಧ್ಯಮಯ ಬೆಳವಣಿಗೆಯ ದರ್ಶನವಾಗುತ್ತದೆ. ಅಲ್ಲಿ ಸಾಹಿತ್ಯದ ಛಂದೋವಿನ್ಯಾಸ ಬದಲಾಗಿದೆ. ಭಾಷೆಯ ಶೈಲಿ ಬದಲಾಗಿದೆ. ಪ್ರಕಾರಗಳು ಬದಲಾಗಿದೆ. ವಸ್ತು ವಿನ್ಯಾಸಗಳಲ್ಲಿ ಬದಲಾಗಿದೆ ಎನ್ನುವುದು ಕೇವಲ ಬದಲಾವಣೆಗಾಗಿ ನಡೆದ ಬದಲಾವಣೆ […]