ತಳ ಸಮುದಾಯದಿಂದ ಬಂದು ಮೇಲ್ಮನೆ ಸೇರಿದ ಶಾಂತಾರಾಮ ಸಿದ್ದಿ ಹಿಂದಿದೆ ನಿಸ್ವಾರ್ಥ ಸೇವೆಯ ಚರಿತ್ರೆ – ಹರಿಪ್ರಕಾಶ ಕೋಣೆಮನೆ. ಇತ್ತೀಚೆಗೆ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ರಾಯಚೂರು ಜಿಲ್ಲೆಯ ಅಶೋಕ ಗಸ್ತಿ, ಬೆಳಗಾವಿ ಜಿಲ್ಲೆಯ ಈರಣ್ಣ ಕಡಾಡಿ, ಕರ್ನಾಟಕ ವಿಧಾನ ಪರಿಷತ್ತಿಗೆ ಹೊಸದಾಗಿ ನಾಮನಿರ್ದೇಶನಗೊಂಡಿರುವ ಸಾಯಬಣ್ಣ ತಳವಾರ್ ಹಾಗೂ ಬುಡಕಟ್ಟು ಸಮದಾಯದ ಶಾಂತಾರಾಮ್ ಸಿದ್ದಿ ಅವರ ಆಯ್ಕೆ ವಿಚಾರದಲ್ಲಿ ಒಂದು ರೀತಿಯ ಸದಭಿಪ್ರಾಯ ಸಾರ್ವತ್ರಿಕ ವಲಯದಲ್ಲಿ ಮೂಡಿದೆ. ಶಾಸನ ಸಭೆಗಳಲ್ಲಿ , ಅಧಿಕಾರದ ಆಯಕಟ್ಟಿನ ತಾಣಗಳಲ್ಲಿ ಸರ್ವರಿಗೂ ಪ್ರಾತಿನಿಧ್ಯ […]