– ಭಾರತ ಒತ್ತಡಕ್ಕೆ ಮಣಿದ ಡ್ರ್ಯಾಗನ್ – ದೋವಲ್-ವಾಂಗ್ ಮಾತುಕತೆ ಯಶಸ್ವಿ. ಹೊಸದಿಲ್ಲಿ: ಭಾರತದ ಹಲವು ಬಗೆಯ ಒತ್ತಡ ಹಾಗೂ ಅಂತಾರಾಷ್ಟ್ರೀಯ ಸಮುದಾಯದ ಎಚ್ಚರಿಕೆಗೆ ಮಣಿದ ಚೀನಾವು ಗಲ್ವಾನ್ ಕಣಿವೆಯಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡಿದೆ. ಇದರಿಂದಾಗಿ ಎರಡು ತಿಂಗಳಿಂದ ಕದನ ಭೀತಿಯಿಂದ ಕುದಿಯುತ್ತಿದ್ದ ವಾಸ್ತವ ಗಡಿ ನಿಯಂತ್ರಣ ರೇಖೆಯ ಗಲ್ವಾನ್ ವ್ಯಾಲಿ ಶಾಂತವಾಗುವ ಲಕ್ಷಣಗಳು ಗೋಚರಿಸಿವೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಜತೆ ದೂರವಾಣಿ ಸುಮಾರು ಎರಡು […]