ಕೊರೊನಾ ವೈರಸ್(ಕೋವಿಡ್ 19) ಹರಡುವುದನ್ನು ತಡೆಯಲು ಹೇರಲಾಗಿದ್ದ ಲಾಕ್‌ಡೌನ್ ಭಾಗಶಃ ತರೆವಿನೊಂದಿಗೆ ದೇಶ ಸಹಜ ಸ್ಥಿತಿಯತ್ತ ಮರಳುವ ಯತ್ನದಲ್ಲಿದೆ. ಇಷ್ಟೆಲ್ಲ ಬಿಗಿ ಕ್ರಮಗಳ ನಂತರವೂ ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ 50 ಸಾವಿರದ ಗಡಿಯನ್ನು ತಲುಪುತ್ತಿದೆ. ಕೊರೊನಾದಿಂದ 1500ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಸೋಂಕಿತರ ಪ್ರಮಾಣ ಏರುಗತಿಯಲ್ಲಿರುವಾಗಲೇ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆ ತರುವ ಪ್ರಯತ್ನಕ್ಕೆ ಸರಕಾರ ಮುಂದಾಗಿರುವುದು ಎಲ್ಲೆಡೆ ಮತ್ತೊಂದು ಸುತ್ತಿನ ಆತಂಕ ಸೃಷ್ಟಿಸಿದೆ. ಸರಕಾರ ನೀಡಿರುವ ಮಾಹಿತಿಯ ಪ್ರಕಾರ ಮೊದಲ ಹಂತದಲ್ಲಿ 14,800 ಜನರನ್ನು […]