ಏಷ್ಯಾದ ಕುಬೇರ ಮುಕೇಶ್ ಅಂಬಾನಿಯ ಸಾಧನೆಯ ಕಥನದಲ್ಲಿ ಮನೋಜ್ ಮೋದಿ ಅವರದು ಪ್ರಮುಖ ಪಾತ್ರ. – ಹ.ಚ.ನಟೇಶ ಬಾಬು. ಭಾರತ ಮಾತ್ರವಲ್ಲ ಏಷ್ಯಾದಲ್ಲಿಯೇ ನಂ.1 ಕುಬೇರ ಎನ್ನುವ ಹೆಗ್ಗಳಿಕೆ ಮುಕೇಶ್ ಅಂಬಾನಿ ಅವರದು. ಹುರುನ್ ಸಿದ್ಧಪಡಿಸಿದ ಶ್ರೀಮಂತರ ಡೇಟಾ ಗಮನಿಸುವುದಾದರೆ, 2019ರಲ್ಲಿ ಮುಕೇಶ್ ಸಂಪತ್ತಿಗೆ 9.39 ಲಕ್ಷ ಕೋಟಿ ರೂ. ಸೇರಿಕೊಂಡಿದೆ. ದಿನದ ಲೆಕ್ಕದಲ್ಲಿ ಇದನ್ನು ವಿಭಾಗಿಸುವುದಾದರೆ, ಅವರ ಸಂಪತ್ತು ದಿನಕ್ಕೆ ಸರಾಸರಿ 237 ಕೋಟಿ ರೂ. ವೃದ್ಧಿಯಾಗಿದೆ. ಗಂಟೆಗೆ 10.7 ಕೋಟಿ ರೂ., ನಿಮಿಷಕ್ಕೆ 16 […]