ಸರಿ-ತಪ್ಪುಗಳು ಕಾಲ ಬದಲಾದಂತೆ ಬದಲಾಗುವುದಿಲ್ಲ. ನ್ಯಾಯ-ಅನ್ಯಾಯಗಳು ಕೂಡ ಅದೇ ರೀತಿ. ಜೀವನದ ಮೌಲ್ಯಗಳೂ ಅಷ್ಟೇ. ಹಾಗೇನೆ ತಾನು ಏಟು ತಿಂದಾಗ ನೋವಾಯಿತು ಎಂದು ಅಳುವವರು ತಾವು ಬೇರೆಯವರಿಗೆ ಏಟು ಕೊಟ್ಟಾಗಲೂ ಅದೇ ರೀತಿ ನೋವಾಗುತ್ತದೆ ಎಂದು ತಿಳಿದುಕೊಳ್ಳಬೇಕಲ್ಲವೇ? ಅಹಮದ್ ಪಟೇಲ್ ವಿಚಾರಕ್ಕೆ ಆಮೇಲೆ ಬರೋಣ. ಅದಕ್ಕಿಂತ ಮೊದಲು ಇಬ್ಬರು ವ್ಯಕ್ತಿಗಳ ಜಾತಕವನ್ನು ಒಮ್ಮೆ ಪರಿಶೀಲಿಸುವುದು ಉತ್ತಮ. ಒಬ್ಬಾಕೆ ಇಷ್ರತ್ ಜಹಾನ್. ಮತ್ತೊಬ್ಬಾತ ಸೊಹ್ರಾಬುದ್ದೀನ್ ಶೇಖ್. ಈ ಇಬ್ಬರೂ ಗುಜರಾತ್ ಮತ್ತು ರಾಜಸ್ಥಾನ ಪೊಲೀಸರ ಗುಂಡಿಗೆ ಸಾವನ್ನಪ್ಪಿದವರು. ಇವರ […]