ರಿಷಿ ಕಪೂರ್ ನಿಧನ, ಕಂಬನಿ ಮಿಡಿದ ಭಾರತ ಮೂರು ದಶಕಗಳ ಕಾಲ ಬಾಲಿವುಡ್‌ನ ‘ರೊಮ್ಯಾಂಟಿಕ್ ಹೀರೋ’ ಆಗಿ ಮೆರೆದ ರಿಷಿ ಕಪೂರ್ ಗುರುವಾರ ಬೆಳಗ್ಗೆ ನಿಧನರಾದರು. ಎರಡು ವರ್ಷಗಳಿಂದ ರಕ್ತದ ಕ್ಯಾನ್ಸರ್(ಲುಕೇಮಿಯಾ)ನಿಂದ ಬಳಲುತ್ತಿದ್ದ ಅವರಿಗೆ 67 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಬುಧವಾರ ರಾತ್ರಿಯೇ ಅವರನ್ನು ಮುಂಬಯಿನ ಎಚ್.ಎನ್.ರಿಲಯನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಗ್ಗೆ ಕೊನೆಯುಸಿರೆಳೆದರು. ಭಾರತೀಯ ಸಿನಿಮಾಕ್ಕೆ ಅನನ್ಯ ಕೊಡುಗೆ ನೀಡಿರುವ ಕಪೂರ್ ಕುಟುಂಬದ ಮೂರನೇ ತಲೆಮಾರಿನ ನಟರಾಗಿದ್ದ ರಿಷಿ […]