– ಪ್ರತಿ ಮನೆಯೂ ಒಂದು ವೈದ್ಯಶಾಲೆ. ಶ್ರೀಕಾಂತ್ ಹುಣಸವಾಡಿ ಬೆಂಗಳೂರು. ಕೊರೊನಾ ನಮ್ಮ ಜೀವನಶೈಲಿಯನ್ನೇ ಬದಲಿಸಿದೆ. ಶ್ರೀಮಂತರು, ಬಡವರೆನ್ನದೆ ಪ್ರತಿಯೊಬ್ಬರೂ ಹೊಸ ಆಹಾರ ಪದ್ಧತಿ, ದಿನಚರಿಗೆ ಒಗ್ಗಿಕೊಂಡಿದ್ದಾರೆ. ಕೊರೊನಾವನ್ನು ಎದುರಿಸುವ ನಿಟ್ಟಿನಲ್ಲಿ ಹೆಚ್ಚಿನವರು ನಾನಾ ತಂತ್ರಗಳನ್ನು ಅಳವಡಿಸಿಕೊಂಡಿದ್ದು, ಇದರಲ್ಲಿ ಆಯುರ್ವೇದ ಔಷಧ, ಕಷಾಯಗಳ ಬಳಕೆ, ಉತ್ತಮ ಆಹಾರ ಸೇವನೆ ಪ್ರಮುಖವಾಗಿದೆ. ಇದರ ಜತೆಗೆ ದೈಹಿಕ ದೃಢತೆಗಾಗಿ ಯೋಗ-ವ್ಯಾಯಾಮ, ಮಾನಸಿಕ ದೃಢತೆಗಾಗಿ ಧ್ಯಾನ, ದೇವರ ಪೂಜೆ, ಮಂತ್ರ ಪಠಣ, ಹೋಮಹವನಗಳು ಕೂಡಾ ಹೆಚ್ಚಾಗಿವೆ. ರಾಜ್ಯದ ನಾನಾ ಕಡೆ ನಡೆಯುತ್ತಿರುವ […]