ಪಾಕಿಸ್ತಾನದ ದುಷ್ಟರಿಗೆ ಶಿಕ್ಷೆ, ಅಫಘಾನಿಸ್ತಾನದ ಶಿಷ್ಟರಿಗೆ ರಕ್ಷೆ ನಮ್ಮಿಂದ ಆಗಬೇಕು ಅಫ್ಘಾನಿಸ್ತಾನ ನೆಲದಿಂದ ಅಮೆರಿಕಾ ತನ್ನ ಸೇನೆಯನ್ನು ಹಿಂತೆಗೆದುಕೊಳ್ಳಲಾರಂಭಿಸಿದ ಬೆನ್ನಲ್ಲಿಯೇ, ತಾಲಿಬಾನಿಗಳು ಬಾಲ ಬಿಚ್ಚಲಾರಂಭಿಸಿದ್ದಾರೆ. ಅವರ ಭಯೋತ್ಪಾದನೆ, ಜನ ಹಿಂಸೆ ಶುರುವಾಗಿದೆ. ವಿಭಜನೆಗೆ ಮುನ್ನ ತನ್ನ ನೆರೆಯ ರಾಷ್ಟ್ರವೇ ಆಗಿದ್ದ ಅಫ್ಘಾನಿಸ್ತಾನದ ನೆಲದಲ್ಲಿ ಭಾರತ ನಿರ್ಮಿಸಿದ ಆಸ್ತಿಗಳ ಮೇಲೂ ದಾಳಿ ನಡೆದಿದೆ. ಆಫ್ಘನ್ ಭದ್ರತಾ ಪಡೆ ಹಾಗೂ ತಾಲಿಬಾನಿಗಳ ನಡುವಿನ ಹಿಂಸಾಚಾರ ಕಂಡು ಆತಂಕಗೊಂಡಿರುವ ನಮ್ಮ ಕೇಂದ್ರ ಸರಕಾರ, ಅಲ್ಲಿ ನೆಲೆಸಿರುವ ಭಾರತೀಯರನ್ನು ವಾಪಸ್ ಕರೆಸಿಕೊಳ್ಳಲು ಮುಂದಾಗಿದೆ. […]