ತಮ್ಮದೇ ದಾರಿ ಮತ್ತು ಗುರಿಗಳನ್ನು ಬೆನ್ನತ್ತಿ ಹೋಗುವ ಧೈರ್ಯಶಾಲಿಗಳಿಗೆ ಇಲಾನ್ ಮಸ್ಕ್ ದೊಡ್ಡ ಐಕಾನ್. -ಕೆ. ವೆಂಕಟೇಶ್. ಆತ ಮಹಾಮೌನಿಯಾಗಿದ್ದ. ಆತಂಕಿತರಾದ ಪೋಷಕರು ಈತ ಕಿವುಡನಿರಬೇಕು ಎಂದು ಭಾವಿಸಿದ್ದರು. ಶಾಲೆಯಲ್ಲಿ ಚಿಲ್ಟೇರಿಯಂತಿದ್ದ ಈತನನ್ನು ಎಲ್ಲರೂ ಆಟದ ವಸ್ತು ಮಾಡಿಕೊಂಡಿದ್ದರು. ಪ್ರಾಥಮಿಕ ಶಾಲೆಯಲ್ಲಿ ಮೆಟ್ಟಿಲುಗಳ ಮೇಲಿಂದ ತಳ್ಳಿ ಮಜಾ ತೆಗೆದುಕೊಂಡಿದ್ದರು. ಈತ ಆಸ್ಪತ್ರೆ ಸೇರಿದ. ಒಂದು ರೀತಿಯಲ್ಲಿ ಅಂತರ್ಮುಖಿಯಾದ ಆತ ಸದಾ ಆಕಾಶವನ್ನೇ ದಿಟ್ಟಿಸುತ್ತಿದ್ದ. ಪೋಷಕರು, ಶಿಕ್ಷಕರು ಮತ್ತು ಸಹಪಾಠಿಗಳು ಅಂದುಕೊಂಡಿದ್ದಕ್ಕಿಂತ ವಿಭಿನ್ನವಾಗಿದ್ದ ಆತನಲ್ಲಿ ದೈಹಿಕ ನ್ಯೂನತೆಯೇನೂ ಇರಲಿಲ್ಲ. […]