ಸೋಮವಾರ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ದೇಶವನ್ನುದ್ದೇಶಿಸಿ ಮಾತನಾಡಿ, 20 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ಅನ್ನು ಘೋಷಿಸಿದ್ದಾರೆ. ಕೊರೊನಾ ಲಾಕ್‌ಡೌನ್‌ನಿಂದ ಉಂಟಾಗಿರುವ ಆರ್ಥಿಕ ಬೇಗುದಿಯನ್ನು ತಕ್ಕಮಟ್ಟಿಗೆ ತಣಿಸಲು ಈ ಪ್ಯಾಕೇಜ್ ನೆರವಾಗಬಹುದು ಎಂದು ಆಶಿಸಬಹುದು. ಇದು ಜಿಡಿಪಿಯ ಶೇ.10ರಷ್ಟಿದ್ದು, ಗಣನೀಯ ಪ್ರಮಾಣದ ನೆರವೇ ಆಗಿದೆ. ರೈತರು, ಸಣ್ಣ ಹಾಗೂ ಕಿರು ಉದ್ಯಮಗಳು, ಕೈಗಾರಿಕೆ, ಮಧ್ಯಮ ವರ್ಗದವರಿಗೆ ಈ ಪ್ಯಾಕೇಜ್ ಸಲ್ಲಲಿದೆ ಎಂದು ಪ್ರಧಾನಿ ಹೇಳಿದ್ದಾರೆ. ಕೊರೊನಾ ಸಮರವನ್ನು […]