ಸ್ವದೇಶಿ ಕಲ್ಪನೆಯನ್ನು ಜನರೆದೆಯಲ್ಲಿ ಬಿತ್ತಿದ ಮಹಾಸ್ವಾಭಿಮಾನಿಗೆ ಶತಮಾನ. – ಡಾ.ರೋಹಿಣಾಕ್ಷ ಶಿರ್ಲಾಲು. ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವನ್ನು ಮೆಲುಕು ಹಾಕಿದರೆ ನಮ್ಮ ಕಣ್ಮುಂದೆ ಹಾದುಹೋಗುವ ವ್ಯಕ್ತಿತ್ವಗಳು ನೂರಾರು. ಒಬ್ಬೊಬ್ಬರೂ ಮಹಾನ್ ನಾಯಕರೇ. ಗುಲಾಮಿತನ ಎನ್ನುವುದು ರಕ್ತಗತವಾಗಿ, ದಾಸ್ಯಕ್ಕೆ ಒಡ್ಡಿಕೊಂಡು ವಿಸ್ಮೃತಿಗೊಳಗಾಗಿ ಕರಿಚರ್ಮದ ಬ್ರಿಟಿಷರಂತೆ ಬದುಕುತ್ತಿದ್ದ ಭಾರತೀಯರ ಎದೆಯೊಳಗೆ ಸ್ವಾತಂತ್ರ್ಯದ ಕಿಚ್ಚು ಹಚ್ಚುವಂತೆ ‘ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು, ಅದನ್ನು ಪಡೆದೇ ತೀರುತ್ತೇನೆ’ ಎಂದು ಸಿಂಹಘರ್ಜನೆ ಮಾಡಿದ ‘ಲೋಕಮಾನ್ಯ’ರ ಶತಮಾನದ ಸ್ಮೃತಿದಿನ ಇಂದು. 1920 ಆಗಸ್ಟ್ 1ರಂದು ನಿಧನರಾದ […]