ಸಾವು ತಡೆಯೋಣ

– 11 ದಿನದ ಅವಧಿಯಲ್ಲಿ102 ಬಲಿ | ಬೆಂಗಳೂರಿನಲ್ಲೇ ಹೆಚ್ಚು

– ಗಂಭೀರ ರೋಗಿಗಳು, ಹಿರಿಯರ ತುರ್ತು ಚಿಕಿತ್ಸೆಗೆ ವ್ಯವಸ್ಥೆ ಅಗತ್ಯ

ಬೆಂಗಳೂರು: ರಾಜ್ಯದಲ್ಲಿಕೊರೊನಾ ಸೋಂಕಿತರ ಜತೆಗೆ ಸಾವಿನ ಸಂಖ್ಯೆಯೂ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಪ್ರಸಕ್ತ ಸೋಂಕನ್ನು ನಿಯಂತ್ರಿಸುವುದು ಕಷ್ಟ ಸಾಧ್ಯ ಎಂಬ ಪರಿಸ್ಥಿತಿ ಇದೆ. ಆದರೆ, ಕನಿಷ್ಠ ಸಾವನ್ನಾದರೂ ತಡೆಯುವಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂಬ ಬೇಡಿಕೆ ತೀವ್ರವಾಗಿದೆ.

ರಾಜ್ಯದಲ್ಲಿ ಇದುವರೆಗೆ ಮೃತಪಟ್ಟವರ ಸಂಖ್ಯೆ 227. ಕಳೆದ ಎರಡೇ ದಿನದಲ್ಲಿ40 ಸೇರಿದಂತೆ 11 ದಿನದಲ್ಲಿ103 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅದರಲ್ಲೂ ಬೆಂಗಳೂರು, ಬಳ್ಳಾರಿ, ಬೀದರ್‌, ಕಲಬುರಗಿ, ದ.ಕನ್ನಡದಲ್ಲಿ ಸಾವಿನ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿದೆ. ಮೃತರಲ್ಲಿ ಅರ್ಧಕ್ಕಿಂತಲೂ ಹೆಚ್ಚಿನವರು 60 ವರ್ಷ ಮೀರಿದವರು (122). ಜತೆಗೆ ಕೊರೊನೇತರ ಹಲವು ರೋಗಗಳಿಗೆ ಮೊದಲೇ ತುತ್ತಾದವರು. ಮೃತ್ಯು ಸಂಭವಿಸುತ್ತಿರುವ ವರ್ಗವನ್ನು ಗಂಭೀರವಾಗಿ ಪರಿಗಣಿಸಿ ಅವರಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಿದರೆ ಜೀವ ಉಳಿಸಬಹುದು.

ಹೆಚ್ಚಿನವರು ಆರಂಭದಲ್ಲಿ ಶೀತಜ್ವರ, ಉಸಿರಾಟದ ಸಮಸ್ಯೆಗಳನ್ನು ಸಹಜ ಎಂಬಂತೆ ಸ್ವೀಕರಿಸಿ ನಿರ್ಲಕ್ಷಿಸುತ್ತಾರೆ. ಇಲ್ಲವೇ ಸಮೀಪದ ವೈದ್ಯರಿಂದ ಔಷಧೋಪಚಾರ ಪಡೆಯುತ್ತಾರೆ. ಪರಿಸ್ಥಿತಿ ಗಂಭೀರವಾದಾಗ ಆಸ್ಪತ್ರೆಗಳಿಗೆ ಅಲೆಯುತ್ತಾರೆ. ಅಂತಿಮವಾಗಿ ಕೋವಿಡ್‌ ಆಸ್ಪತ್ರೆ ತಲುಪುವಾಗ ಪ್ರಾಣ ಕಳೆದುಕೊಳ್ಳುವ ಅಪಾಯ ಹೆಚ್ಚಾಗಿರುತ್ತದೆ ಎನ್ನುತ್ತಾರೆ ತಜ್ಞರು. ಸಮಸ್ಯೆ ಕಂಡ ಕೂಡಲೇ ಕೋವಿಡ್‌ ಪರೀಕ್ಷೆ ಮಾಡಿಸಿ ತುರ್ತಾಗಿ ಚಿಕಿತ್ಸೆ ಸಿಕ್ಕಿದರೆ ಹೆಚ್ಚಿನ ಸಾವುಗಳನ್ನು ತಡೆಯಬಹುದು.

ಜನ ಏನು ಮಾಡಬೇಕು?
– ಶೀತಜ್ವರ, ಉಸಿರಾಟದ ತೊಂದರೆ ಕಂಡರೆ ನಿರ್ಲಕ್ಷ್ಯ ಬೇಡ
– ಆದಷ್ಟು ಬೇಗನೆ ಕೋವಿಡ್‌ ಟೆಸ್ಟ್‌ ಮಾಡಿಸಿ ತುರ್ತು ಚಿಕಿತ್ಸೆ
– ಮಧುಮೇಹ, ಬಿಪಿ ಇರುವವರೂ ಸಮಸ್ಯೆ ಕಂಡ ಕೂಡಲೇ ಟೆಸ್ಟ್‌ ಮಾಡಿಸಿ
– ಸಣ್ಣ ಸಮಸ್ಯೆ ನಿರ್ಲಕ್ಷಿಸಬೇಡಿ.
– ಆಸ್ಪತ್ರೆ ಸುತ್ತಬೇಡಿ, ನೇರ ಕೋವಿಡ್‌ ಪರೀಕ್ಷೆ ಮಾಡಿಸಿ ಆಸ್ಪತ್ರೆ ಸೇರಿದರೆ ಒಳ್ಳೆಯದು
– 60 ವರ್ಷ ಮೀರಿದ, ದೈಹಿಕ ಶಕ್ತಿ ಕಡಿಮೆ ಇರುವವರು ಮನೆಯೊಳಗೆ ಇದ್ದರೆ ಉತ್ತಮ

+++++++++++++++++
ಹಿರಿಯರಲ್ಲೇ ಹೆಚ್ಚು ಸಾವು
ರಾಜ್ಯದಲ್ಲಿಇದುವರೆಗೆ 10 ವರ್ಷದೊಳಗಿನ ಮಕ್ಕಳಲ್ಲಿ ಕೋವಿಡ್‌ ಸಾವು ಸಂಭವಿಸಿಲ್ಲ. 11-20 ವರ್ಷದೊಳಗಿನವರಲ್ಲಿ ಒಂದೇ ಸಾವು ಸಂಭವಿಸಿದೆ.

ಸರಕಾರ ಏನು ಮಾಡಬೇಕು?
– ಪ್ರಮುಖ ಆಸ್ಪತ್ರೆಗಳಲ್ಲಿ ಗಂಭೀರ ರೋಗಿಗಳಿಗೆ ಬೆಡ್‌ ಮೀಸಲು
– ಲಕ್ಷಣರಹಿತರಿಗೆ, ಕಡಿಮೆ ತೊಂದರೆ ಇರುವವರಿಗೆ ಕೇರ್‌ ಸೆಂಟರ್‌
– ವಯಸ್ಸಾದವರಲ್ಲಿ ಪಾಸಿಟಿವ್‌ ಕಂಡುಬಂದರೆ ಕೆಲವೇ ಗಂಟೆಗಳಲ್ಲಿಆಸ್ಪತ್ರೆ ಸೇರ್ಪಡೆಗೆ ವ್ಯವಸ್ಥೆ
– ಹಿರಿಯ, ರೋಗದಿಂದ ಬಳಲುತ್ತಿರುವವರಿಗೆ ಖಾಸಗಿ ಆಸ್ಪತ್ರೆಗಳಲ್ಲೂ ಆದ್ಯತೆಯ ಚಿಕಿತ್ಸೆ

++++++++++++++++
ಇವರು ಜಾಗೃತರಿರಲಿ

– ಶ್ವಾಸಕೋಶದ ತೊಂದರೆ ಇರುವವರು
– ಸುಲಭದಲ್ಲಿಶೀತ ಜ್ವರ ಬಾಧಿಸುವವರು
– ಮಧುಮೇಹ, ರಕ್ತದೊತ್ತಡ ಇರುವವರು
– ಹೃದಯ ರೋಗ, ಕ್ಯಾನ್ಸರ್‌ ರೋಗಿಗಳು
– ಕಿಡ್ನಿ, ಲಿವರ್‌ ಸಮಸ್ಯೆ ಇರುವವರು
– 60ಕ್ಕಿಂತ ಹೆಚ್ಚು ವಯಸ್ಸಿನವರು

++++++++++++++
ಐಸಿಯುವಾಸಿ ಸಂಖ್ಯೆ ಹೆಚ್ಚಳ

ರಾಜ್ಯದಲ್ಲಿ ಪ್ರಸಕ್ತ ಐಸಿಯುನಲ್ಲಿರುವ 268ಕ್ಕೇರಿದೆ. ಹತ್ತು ದಿನದ ಹಿಂದೆ ಈ ಸಂಖ್ಯೆ ಕೇವಲ 78 ಇತ್ತು. ಪ್ರಸಕ್ತ ಬೆಂಗಳೂರೊಂದರಲ್ಲೇ 178 ಮಂದಿ ಐಸಿಯುನಲ್ಲಿದ್ದಾರೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top