ದ್ವಿತೀಯ ಪಿಯು 61.80% ರಿಸಲ್ಟ್ | ಕಲಾ ವಿಭಾಗದಲ್ಲಿ ಗ್ರಾಮಾಂತರ ವಿದ್ಯಾರ್ಥಿಗಳ ಸಾಧನೆ
ಸಾರ್ವಕಾಲಿಕ ಗರಿಷ್ಠ ಫಲಿತಾಂಶ | ಕೊರೊನಾ ಅವಧಿಯ ಇಂಗ್ಲಿಷ್ ಪರೀಕ್ಷೆಯಲ್ಲಿ ಹೆಚ್ಚು ನಪಾಸು.
ವಿಕ ಸುದ್ದಿಲೋಕ ಬೆಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಈ ಬಾರಿ ಸರಾಸರಿ ಶೇ.61.80ರಷ್ಟು ವಿದ್ಯಾರ್ಥಿಗಳು ಪಾಸಾಗುವ ಮೂಲಕ ಸಾರ್ವಕಾಲಿಕ ದಾಖಲೆ ಫಲಿತಾಂಶ ಪ್ರಕಟವಾಗಿದೆ. ಈ ನಡುವೆ ಕಷ್ಟನಷ್ಟ, ಸೌಕರ್ಯ ಕೊರತೆಗಳನ್ನೂ ಮೀರಿ ಹಲವಾರು ವಿದ್ಯಾರ್ಥಿಗಳು ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ. ಮುಖ್ಯವಾಗಿ ಕಲಾ ವಿಭಾಗದಲ್ಲಿ ಟಾಪ್ ಸ್ಥಾನ ಪಡೆದಿರುವ ಬಹುತೇಕ ವಿದ್ಯಾರ್ಥಿಗಳು ಗ್ರಾಮಾಂತರ ಪ್ರದೇಶದ ಆರ್ಥಿಕ ಹಿಂದುಳಿದ ಕುಟುಂಬಗಳಿಗೆ ಸೇರಿದವರಾಗಿರುವುದು ಸೂರ್ತಿದಾಯಕವಾಗಿದೆ. ಬಳ್ಳಾರಿಯ ಕೊಟ್ಟೂರಿನ ಏಳು ವಿದ್ಯಾರ್ಥಿಗಳು ಕಲಾ ವಿಭಾಗದ ಟಾಪ್-10ನಲ್ಲಿ ಸ್ಥಾನ ಪಡೆಯುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ.
ನಪಾಸಾದ ವಿದ್ಯಾರ್ಥಿಗಳು ಅಧೀರರಾಗಬಾರದು. ಪರೀಕ್ಷೆಯಲ್ಲಿ ನಪಾಸಾಗಿ ಜೀವನದಲ್ಲಿ ಸಾಕಷ್ಟು ಸಾಧನೆ ಮಾಡಿದವರ ಉದಾಹರಣೆಗಳಿವೆ. ಪೋಷಕರು ಕೂಡಾ ಮಕ್ಕಳನ್ನು ಅವಹೇಳನ ಮಾಡಬಾರದು. -ಸುರೇಶ್ ಕುಮಾರ್ ಶಿಕ್ಷಣ ಸಚಿವ.
ರಾಜ್ಯಕ್ಕೆ ಪ್ರಥಮ ರಾರಯಂಕ್ ಬಂದಿರುವುದು ಖುಷಿಯಾಗಿದೆ. ಲಾಕ್‌ಡೌನ್ ಸಂದರ್ಭವನ್ನು ಓದಿಗೆ ಪೂರಕವಾಗಿ ಬಳಸಿಕೊಂಡಿದ್ದರಿಂದ ಹೆಚ್ಚು ಅಂಕ ಪಡೆಯಲು ಸಾಧ್ಯವಾಗಿದೆ. -ಅಭಿಜ್ಞಾ ರಾವ್.
ಚೀಟ್ ಶೀಟ್ 92 ಕಾಲೇಜುಗಳಲ್ಲಿ 100%, 88 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ, ಉಡುಪಿ ಜಿಲ್ಲೆ ಪ್ರಥಮ, ವಿಜಯಪುರ ಕೊನೆ, ಕಳಂಕದಿಂದ ಪಾರಾದ ಬೀದರ್.
– ಜು. 30: ಉತ್ತರ ಪತ್ರಿಕೆ ಸ್ಕ್ಯಾನಿಂಗ್ ಪ್ರತಿಗೆ ಅರ್ಜಿ ಸಲ್ಲಿಸಲು ಕೊನೆ ದಿನ
– ಆ.10: ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಕಡೆಯ ದಿನಾಂಕ
ಉಡುಪಿ ಫಸ್ಟ್ ಆಗಿದ್ದು ಹೇಗೆ?
ಜಿಲ್ಲಾವಾರು ಫಲಿತಾಂಶದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಶೇ.90.71 ಫಲಿತಾಂಶದೊಂದಿಗೆ ಸಮಬಲ ಪ್ರದರ್ಶಿಸಿವೆ. ಆದರೆ ಕಳೆದ ಬಾರಿಯ ಫಲಿತಾಂಶ ಹಾಗೂ ಉತ್ತೀರ್ಣರಾದ ವಿದ್ಯಾರ್ಥಿಗಳು ಪಡೆದಿರುವ ಅಂಕಗಳ ಆಧಾರದ ಮೇಲೆ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ನೀಡಲಾಗಿದೆ. ಕೊಡಗು ಮತ್ತು ಉತ್ತರ ಕನ್ನಡ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ. ವಿಶೇಷ ಎಂದರೆ, ವಿಜ್ಞಾನ ವಿಭಾಗದಲ್ಲಿ ಮೊದಲ ಐದು ರಾಂಕ್‌ಗಳನ್ನು 16 ವಿದ್ಯಾರ್ಥಿನಿಯರು ಹಂಚಿಕೊಂಡಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಹಾಗೆಯೇ, ನಗರದ ವಿದ್ಯಾರ್ಥಿಗಳಿಗಿಂತ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತೀರಾ ಹಿಂದೆ ಬಿದ್ದಿಲ್ಲ ಎನ್ನುವುದೂ ಗಮನಾರ್ಹ.