ಕೊರೊನಾ ವಿರುದ್ಧ ಗೆಲುವಿಗೆ ಪಂಚಸೂತ್ರ

ಇಡೀ ವಿಶ್ವವನ್ನು ಕಾಡುತ್ತಿರುವ ಕೊರೊನಾ ವೈರಸ್(ಕೋವಿಡ್ 9) ಅನ್ನು ಹತ್ತಿರಕ್ಕೂ ಸುಳಿಯದಂತೆ ರಾಜ್ಯದ ಕೆಲವು ಜಿಲ್ಲಾಡಳಿತಗಳು ನೋಡಿಕೊಂಡಿವೆ. ಆಡಳಿತಕ್ಕೆ ಜನರು ಕೈ ಜೋಡಿಸಿದ ಪರಿಣಾಮ ಇಂದಿಗೂ ಈ ಜಿಲ್ಲೆಗಳು ಸೋಂಕುರಹಿತವಾಗಿವೆ. ಹಸಿರು ಪಟ್ಟಿಯಲ್ಲಿರುವ ರಾಜ್ಯದ 10 ಜಿಲ್ಲೆಗಳ ಯಶಸ್ಸಿನ ಹಿಂದಿನ ಪಂಚಸೂತ್ರಗಳು ಯಾವವು? ಇಲ್ಲಿದೆ ಕುತೂಹಲಕಾರಿ ಮಾಹಿತಿ.

 

ಮಾರಿ ಹಿಮ್ಮೆಟ್ಟಿಸಿದ ಹಾವೇರಿ
– ಅನಗತ್ಯ ಹೊರಗೆ ಬಂದವರಿಗೆ ಲಾಠಿ ರುಚಿ. ಮುಖ್ಯರಸ್ತೆ ಬಂದ್, ಒಳಮಾರ್ಗಕ್ಕೂ ತಡೆ
– ಶಾಸಕರು, ಸಚಿವರು ಅಧಿಕಾರಿಗಳ ಸಭೆ ನಡೆಸಿ ಮಾಸ್ಕ್ ಮತ್ತು ಸ್ಯಾನಿಟೈಸರ್ ವ್ಯವಸ್ಥೆ
– ಚೆಕ್ ಪೋಸ್ಟ್ ಕಟ್ಟುನಿಟ್ಟು. ಮನೆಯಲ್ಲೇ ಕಡ್ಡಾಯ ನಮಾಜ್‌…, ಜಿಲ್ಲೆಗೆ ತಬ್ಲಿಘಿ ನಂಟಿಲ್ಲ.
– ಜಿಲ್ಲೆಯಿಂದ ವಲಸೆ ಹೋದವರನ್ನು ಮರಳಿ ಬರಲು ಅವಕಾಶ ನಿರಾಕರಣೆ.
– ಜನರಲ್ಲಿ ಹೆಚ್ಚಿನ ಅರಿವು. ಬಡವರು ಹಸಿವಿನಿಂದ ಪರದಾಡದಂತೆ ಫುಡ್ ಕಿಟ್ ಪೂರೈಕೆ

ಹಸನಾಗಿ ಉಳಿದ ಹಾಸನ
– ಜಿಲ್ಲಾಡಳಿತದಿಂದ ಕಟ್ಟುನಿಟ್ಟಿನ ಕ್ರಮ. ಜನರೂ ಎಚ್ಚರ ವಹಿಸಿ ಮನೆಯಿಂದ ಹೊರಬರಲಿಲ್ಲ.
– ಆಂಬ್ಯುಲೆನ್ಸ್ ಅನ್ನು ಸಹ ಬಿಡದೆ ಗಡಿಯಲ್ಲಿ ಶೋಧಿಸಿ ಅಕ್ರಮ ನುಸುಳುಕೋರರ ಪತ್ತೆ
– ವಿದೇಶ, ಹೊರ ರಾಜ್ಯ, ಜಿಲ್ಲೆಯಿಂದ ಬಂದವರನ್ನು ಪತ್ತೆಹಚ್ಚಿ ಹೋಂ ಕ್ವಾರಂಟೈನ್
– ಸೋಂಕು ತಡೆಯಲು ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಪೊಲೀಸರು, ಸಂಸ್ಥೆಗಳು ಶ್ರಮ.
– ಅನ್ಯ ಜಿಲ್ಲೆಗೆ ವಾಹನ ಪಾಸ್ ವಿತರಣೆ ವೇಳೆ ಕೈಗೊಂಡ ದಿಟ್ಟ ಕ್ರಮ.

ಚಾಮರಾಜನಗರ ಚೆನ್ನಾಗಿದೆ
– ಅಂತಾರಾಜ್ಯ ಸಂಪರ್ಕ ಬಂದ್. ಕಟ್ಟುನಿಟ್ಟಿನ ಲಾಕ್‌ಡೌನ್‌.
– ವಿದೇಶದಿಂದ ಬಂದವರನ್ನು ಪತ್ತೆಹಚ್ಚಿ ಕ್ವಾರಂಟೈನ್ ಮಾಡಿದ್ದು.
– ಹೆಚ್ಚು ಕೈಗಾರಿಕೆ, ಮಾಲ್‌ಗಳು ಇಲ್ಲದಿರುವುದು. ರೈಲ್ವೆ ಮಾರ್ಗ ತಮಿಳುನಾಡಿಗೆ ಸಂಪರ್ಕ ಇಲ್ಲದೇ ಜಿಲ್ಲೆಯಲ್ಲೇ ಅಂತ್ಯ.
– ತಮಿಳುನಾಡು, ಕೇರಳಕ್ಕೆ ಹೊಂದಿಕೊಂಡ ಭಾಗದಲ್ಲಿ ಹೆಚ್ಚು ಅರಣ್ಯ ಇದ್ದು, ಜನ ಸಂಪರ್ಕ ಕಡಿತಗೊಂಡಿರುವುದು.
– ಹೆಚ್ಚು ಮಂದಿ ವಿದೇಶದಿಂದ ಜಿಲ್ಲೆಗೆ ಮರಳದಿರುವುದು.

ಚೊಕ್ಕ ಚಿಕ್ಕಮಗಳೂರು
– ಲಾಕ್‌ಡೌನ್ ಮುನ್ನವೇ ಎಲ್ಲ ಹೋಂಸ್ಟೇ, ರೆಸಾರ್ಟ್ ಬುಕ್ಕಿಂಗ್ ರದ್ದು. ಪ್ರವಾಸಿಗರಿಗೆ ತಡೆ.
– ಪೊಲೀಸರಿಗೆ ಫುಲ್ ಹಿಡಿತ. ಹೊರಗಿನಿಂದ ಯಾರೊಬ್ಬರೂ ಜಿಲ್ಲೆಗೆ ಬರದಂತೆ ಕಟ್ಟೆಚ್ಚರ.
– ವಿದೇಶದಿಂದ ಬಂದ 273 ಜನರನ್ನು ಪತ್ತೆಹಚ್ಚಿ, ಕ್ವಾರಂಟೈನ್‌ಗೆ ಒಳಪಡಿಸಲಾಯಿತು.
– ಸ್ಯಾನಿಟೈಸ್, ಸ್ಕ್ರೀನಿಂಗ್‌ಗೆ ಒಳಪಟ್ಟ ಗೂಡ್ಸ್ ವಾಹನ, ಆಂಬ್ಯುಲೆನ್ಸ್ ಗಳಿಗೆ ಮಾತ್ರ ಪ್ರವೇಶ.
– ಜಿಲ್ಲಾಡಳಿತಕ್ಕೆ ಜನಸಹಕಾರ, ವಿದೇಶ, ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ಬಂದವರ ಮಾಹಿತಿ ರವಾನೆ

ಕೋಟೆಯಾದ ಕೊಪ್ಪಳ
– ಕೊಪ್ಪಳ ಜಿಲ್ಲೆ ಚಿಕ್ಕ ಜಿಲ್ಲೆಯಾಗಿರುವುದು ಹೆಚ್ಚಿನ ನಿಗಾ ವಹಿಸಲು ಸಾಧ್ಯವಾಗಿದೆ.
– ವಿದೇಶಿಯರೇ ಹೆಚ್ಚಾಗಿ ಆಗಮಿಸುವ ವಿರುಪಾಪುರಗಡ್ಡಿ ಮೇಲೆ ಸಂಪೂರ್ಣ ನಿಗಾ.
– ಹೊರ ಜಿಲ್ಲೆಯಲ್ಲಿದ್ದ ಕಾರ್ಮಿಕರಿಗೆ ಪ್ರವೇಶ ನಕಾರ, ಗಡಿಯಲ್ಲಿ ಕಟ್ಟೆಚ್ಚರ
– ಮನೆ, ಮನೆಗೆ ತರಕಾರಿ, ಹಣ್ಣು ಪೂರೈಕೆ ಪ್ರಯತ್ನ.
– ನಗರದ ಪ್ರಮುಖ ರಸ್ತೆ, ಗ್ರಾಮಗಳ ಪ್ರವೇಶಿಸುವ ಸ್ಥಳದಲ್ಲಿ ಬ್ಯಾರಿಕೇಡ್

ರಾಯಚೂರಲ್ಲಿಲ್ಲ ಸೋಂಕು
– ಕಲಬುರಗಿಯಲ್ಲಿ ಸೋಂಕು ಪತ್ತೆಯಾಗುತ್ತಿದ್ದಂತೆ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ.
– ಗಡಿಗಳಲ್ಲಿ ಚೆಕ್‌ಪೋಸ್ಟ್‌. ಅಂಗಡಿ ಮುಂಗಟ್ಟು, ಎಪಿಎಂಸಿ ಸ್ಥಗಿತ.
– ಆಂಧ್ರ, ತೆಲಂಗಾಣಗಳಿಂದ ಬಂದವರಿಗೆ ಪ್ರವೇಶ ನಿರಾಕಣೆ. ಕಣ್ತಪ್ಪಿಸಿ ಬಂದವರು ಕ್ವಾರಂಟೈನ್‌ಗೆ
– ತಬ್ಲಿಘಿಗಳನ್ನು ತುರ್ತಾಗಿ ಪತ್ತೆ ಮಾಡಿ ಕ್ವಾರಂಟೈನ್‌ಗೆ ಕಳುಹಿಸಲಾಯಿತು. ವಿದೇಶಿಯರ ಕ್ವಾರಂಟೈನ್

ಗಡಿ ಭದ್ರ ಮಾಡಿಕೊಂಡ ಕೋಲಾರ
– ಸೋಂಕು ಹರಡುವ ಮುನ್ನವೇ ಜಿಲ್ಲೆಯ ತಬ್ಲಿಘಿಗಳು ದಿಲ್ಲಿ ಕಾರ್ಯಕ್ರಮದಿಂದ ವಾಪಸಾಗಿದ್ದರು.
– ರಾಷ್ಟ್ರೀಯ ಹೆದ್ದಾರಿಗಳಲ್ಲಿ ಚೆಕ್ಪೋಸ್ಟ್ ಮತ್ತು ಸಂಚಾರದ ಮೇಲೆ ಕಟ್ಟುನಿಟ್ಟಿನ ಕ್ರಮ.
– ಚಿಕ್ಕಬಳ್ಳಾಪುರ, ಬೆಂಗಳೂರು ಹಾಗೂ ಆಂಧ್ರ ಗಡಿಗಳಲ್ಲಿ ಬಿಗಿ ಭದ್ರತೆ, ಪಾಸ್ ಇಲ್ಲದೆ ಪ್ರವೇಶವಿಲ್ಲ.
– ವಿದೇಶದಿಂದ ಬಂದವರನ್ನು ಪತ್ತೆ ಹಚ್ಚಿ ಹೋಮ್ ಕ್ವಾರಂಟೈನ್, ಗ್ರಾಮೀಣರಿಂದ ಸ್ವಯಂ ದಿಗ್ಭಂಧನ.
– ಸಂಸದರು, ಶಾಸಕರು, ಅಧಿಕಾರಿಗಳಿಂದ ಸ್ವಚ್ಛತೆಯ ಜಾಗೃತಿ

ಶಿವಮೊಗ್ಗದಲ್ಲಿ ಅರಳಿದ ಶಿಸ್ತು
– ಹೊರ ಜಿಲ್ಲೆಮತ್ತು ದೇಶಗಳಿಂದ ಬರುವ ಪ್ರತಿಯೊಬ್ಬರ ಮೇಲೆ ವಿಶೇಷ ನಿಗಾ.
– ತಬ್ಲಿಘಿಗಳ ಪತ್ತೆಯಾದ ಕೂಡಲೇ ಅವರನ್ನು ಕ್ವಾರಂಟೈನ್ ಮಾಡಲಾಯಿತು.
– ಗಡಿ ಭಾಗದಲ್ಲಿ ಬರುವ ಪ್ರತಿಯೊಂದು ವಾಹನಗಳ ಮೇಲೆ ತೀವ್ರ ನಿಗಾ.
– ಪ್ರವಾಸೋದ್ಯಮ ಹೊರತು ಇನ್ನಾವುದೇ ವಿಷಯದಲ್ಲಿ ಹೊರ ಸಂಪರ್ಕ ಕಡಿಮೆ.
– ಶಿವಮೊಗ್ಗ ಸಿಎಂ ತವರು ಕ್ಷೇತ್ರವಾದ್ದರಿಂದ ಹೆಚ್ಚಿನ ಮುತುವರ್ಜಿ ವಹಿಸಲಾಗಿದೆ.

ಲಾಕ್‌ಡೌನ್ ಆದ ಯಾದಗಿರಿ
– ಕಲಬುರಗಿಯಲ್ಲಿ ಪಾಸಿಟಿವ್ ಬಂದ ತಕ್ಷಣವೇ ಜಿಲ್ಲಾಗಡಿ ಬಂದ್ .
– ನಾನಾ ಕಡೆಯಿಂದ ಬಂದ ಸುಮಾರು 50 ಸಾವಿರ ಕಾರ್ಮಿಕರ ತಪಾಸಣೆ.
– ವಿದೇಶದಿಂದ ಬಂದ 71 ಮಂದಿಗೆ ಆರಂಭದಲ್ಲೇ ಹೋಮ್ ಕ್ವಾರಂಟೈನ್.
– ಸಾಮಾಜಿಕ ಅಂತರ ಕಾಪಾಡುವಂತೆ ಧ್ವನಿವರ್ಧಕ ಮೂಲಕ ಜಾಗೃತಿ.
– 16 ಚೆಕ್‌ಪೋಸ್ಟ್‌ಗಳಲ್ಲಿ ಭಾರಿ ಕಟ್ಟೆಚ್ಚರ.

ರಾಮನಗರ ಕಟ್ಟುನಿಟ್ಟು
– ಜಿಲ್ಲೆಯಲ್ಲಿ ತಬ್ಲಿಘಿ ಪ್ರಕರಣಗಳಿಲ್ಲದಿರುವುದು.
– ಬೆಂಗಳೂರು-ಮೈಸೂರು ಹೆದ್ದಾರಿ ಬಂದ್. ವಹಿವಾಟು ಸ್ಥಗಿತ.
– ಜನಪ್ರತಿನಿಧಿಗಳು, ಸಂಘಸಂಸ್ಥೆಗಳಿಂದ ಸಂಘಟಿತ ಹೋರಾಟ
– ಮನೆ ಮನೆಗೆ ಸ್ಯಾನಿಟೈಸರ್, ಮಾಸ್ಕ್, ದಿನಸಿ ವಿತರಣೆ
– ಸೋಂಕು ಹರಡುವ ಮೂಲವಾಗಿದ್ದ ರೇಷ್ಮೆ ಮಾರುಕಟ್ಟೆ ಬಂದ್

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top