ಭಾರತವೇ ಹುಲಿಗಳ ತವರು

ಇಂದು (ಜುಲೈ 29) ವಿಶ್ವ ಹುಲಿ ದಿನ. ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ 2010ರ ಜುಲೈ 29ರಂದು ನಡೆದ ‘ಹುಲಿ ಶೃಂಗ’ದಲ್ಲಿ ಮೊದಲ ಬಾರಿ  ‘ವಿಶ್ವ ಹುಲಿ ದಿನ’ ಆಚರಿಸಿ, ಹುಲಿ ಸಂರಕ್ಷ ಣೆ ಜಾಗೃತಿ ಮೂಡಿಸಲು ನಿರ್ಧರಿಸಲಾಯಿತು. ಬೇಟೆ, ಅಂಗಾಂಗಗಳಿಗಾಗಿ ಹುಲಿಗಳ ಹತ್ಯೆಗೆ ತಡೆಯೊಡ್ಡುವುದಲ್ಲದೆ ಹುಲಿಗಳ ನೈಸರ್ಗಿಕ ವಾಸತಾಣಗಳ ರಕ್ಷ ಣೆಯೂ ಕೂಡ ಜಾಗೃತಿಯ ಬಹುಮುಖ್ಯ ಭಾಗವಾಗಿದೆ. ವಿಶ್ವದಲ್ಲೇ ಅತಿ ಹೆಚ್ಚು ಹುಲಿಗಳು (2,967) ಮತ್ತು ಹುಲಿ ರಕ್ಷಿತಾರಣ್ಯ (50) ಗಳನ್ನು ಭಾರತ ಹೊಂದಿದೆ. ಕೇವಲ 12 ವರ್ಷಗಳಲ್ಲಿ ದೇಶದಲ್ಲಿ ಹುಲಿಗಳ ಸಂಖ್ಯೆ ದುಪ್ಪಟ್ಟಾಗಿದೆ.

ಹುಲಿಗಳಿಗೆ ಆಪತ್ತು ಏಕೆ? ವನ್ಯಜೀವಿ ಅಂಗಾಂಗಳ ಸಾಗಣೆ ಜಾಲ, ಮಾನವ-ಹುಲಿ ಸಂಘರ್ಷ, ವಾಸಯೋಗ್ಯ ತಾಣ ನಾಶ; ಈ ಮೂರರಿಂದಲೇ ಹುಲಿ ಸಂತತಿಗೆ ಆಪತ್ತು ಎದುರಾಗಿದೆ
ಹುಲಿಗಳನ್ನು ಹೊಂದಿರುವ ದೇಶಗಳು ಭಾರತ, ಚೀನಾ, ಬಾಂಗ್ಲಾದೇಶ, ಕಾಂಬೋಡಿಯಾ,  ಲಾವೊಸ್, ವಿಯೆಟ್ನಾಂ, ಥೈಲೆಂಡ್, ಭೂತಾನ್, ಇಂಡೋನೇಷ್ಯಾ, ನೇಪಾಳ, ಮಲೇಷ್ಯಾ, ರಷ್ಯಾ, ಮ್ಯಾನ್ಮಾರ್.
ಮೂರು ಪ್ರಭೇದ ನಾಶರಾಯಲ್ ಬೆಂಗಾಲ್ ಟೈಗರ್, ಇಂಡೋ-ಚೈನೀಸ್, ಸೈಬೀರಿಯನ್/ಆಮುರ್, ಸುಮಾತ್ರನ್, ಸೌತ್ ಚೀನಾ ಜಾತಿಯ ಹುಲಿಗಳು ಮಾತ್ರ ಅತಿಕಡಿಮೆ ಸಂಖ್ಯೆಯಲ್ಲಿ ಪ್ರಾಣಿ ಸಂಗ್ರಹಾಲಯ, ಕಾಡುಗಳಲ್ಲಿ ಉಳಿದಿವೆ. ಬಾಲಿ ಟೈಗರ್, ಜಾವನ್ ಟೈಗರ್, ಕ್ಯಾಸ್ಪಿಯನ್ ಟೈಗರ್ ನಶಿಸಿ ಹೋಗಿವೆ.
7% ಅರಣ್ಯವು ಏಷ್ಯಾದಲ್ಲಿ ಹುಲಿಗಳಿಗೆ ವಿಹಾರ- ವಾಸಕ್ಕೆ ಈಗ ಲಭ್ಯವಿದೆ.
45% ಹುಲಿ ವಾಸ ಪ್ರದೇಶವು ಕಳೆದ 10 ವರ್ಷಗಳಲ್ಲಿ ಏಷ್ಯಾದಲ್ಲಿ ನಾಶವಾಗಿದೆ
24,710 ಎಕರೆ ವಿಸ್ತೀರ್ಣ- ಪ್ರದೇಶ ಒಂದು ಹುಲಿಯ ಆರಾಮದಾಯಕ (ನೈಸರ್ಗಿಕವಾಗಿ ಸಮೃದ್ಧ- ಬೇಟೆ, ಓಡಾಟ, ಸಂತಾನೋತ್ಪತ್ತಿ) ಮತ್ತು ಸುರಕ್ಷಿತ ಜೀವನಕ್ಕೆ ಅಗತ್ಯವಾದ ಅರಣ್ಯ ಪ್ರದೇಶ
ಭಾರತದ ಹೆಗ್ಗುರುತು, ಕರ್ನಾಟಕದ ಹೆಮ್ಮೆಜಾಗತಿಕ ಭೂಪ್ರದೇಶದಲ್ಲಿ 2.5% ಭೂಪ್ರದೇಶ ಮಾತ್ರವೇ ಭಾರತದಲ್ಲಿದೆ. ಆದರೆ ಜಾಗತಿಕ ಜೀವವೈವಿಧ್ಯದಲ್ಲಿ 8% ಪಾಲನ್ನು ಭಾರತ ಹೊಂದಿದೆ. ಇನ್ನು ಹುಲಿ ವಿಷಯಕ್ಕೆ ಬಂದರೆ ದೇಶದಲ್ಲಿ ಅತಿ ಹೆಚ್ಚು ಹುಲಿಗಳಿರುವ ರಾಜ್ಯಗಳ ಪೈಕಿ ಮಧ್ಯಪ್ರದೇಶವು 526 ಹುಲಿಗಳನ್ನು ಹೊಂದಿದ್ದರೆ, ಕರ್ನಾಟಕದಲ್ಲಿ 524 ಹುಲಿಗಳಿವೆ.3,900 ಹುಲಿಗಳು ವಿಶ್ವದಲ್ಲಿ ಇವೆ ಎಂದು  ಅಂದಾಜಿಸಲಾಗಿದೆ.
– 70% ವಿಶ್ವದಲ್ಲಿನ ಹುಲಿಗಳ ಪೈಕಿ 70% ಹುಲಿಗಳು ಭಾರತದಲ್ಲಿವೆ ಎಂದು ಕೇಂದ್ರ ಸರಕಾರ ತಿಳಿಸಿದೆ.

ವಿಶ್ವದ 13 ದೇಶಗಳಲ್ಲಿ ಮಾತ್ರವೇ ಹುಲಿ ಸಂತತಿ ಇದೆ. ಹುಲಿ ಸಂರಕ್ಷಣೆಯಲ್ಲಿ ಆಸಕ್ತಿ ತೋರುವ ರಾಷ್ಟ್ರಗಳಿಗೆ ಅಗತ್ಯ ತರಬೇತಿ, ಮಾರ್ಗದರ್ಶನ ನೀಡಲು ಭಾರತ ಸಿದ್ಧವಿದೆ. -ಪ್ರಕಾಶ್ ಜಾವಡೇಕರ್, ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top