ಇಂದಿರೆಯ ಮನೆಯ ನಿಗೂಢತೆ ಬಗೆದಷ್ಟೂ ಆಳಕ್ಕೆ !

ಐರನ್ ಲೇಡಿ ಇಂದಿರಾ ಈ ಲೋಕಬಿಟ್ಟು ಹೋಗಿ ಇಷ್ಟು ವರ್ಷ ಆಯಿತು ಖರೆ, ಆದರೆ ಅವರ ಮನೆಯ ನಿಗೂಢಗಳ ಬಗ್ಗೆ ಓದುಗರಿಗಿರುವ ಕುತೂಹಲ, ಕಾತರ ಎಷ್ಟು ಗರಿಗರಿ ಅಂತೀರಾ?ಅದಕ್ಕೇ ಅಂತ ಕಾಣುತ್ತದೆ ವಿದ್ವಾಂಸರಾದ ನಾರಾಯಣಾಚಾರ್ಯರು `Beyond The Tigers` ಪುಸ್ತಕವನ್ನು ಕಳಿಸಿಕೊಟ್ಟಿದ್ದಾರೆ.

download (2)

ಒಂದು ಲೇಖನ ಆ ಪರಿ ಕುತೂಹಲ ಕೆರಳಿಸುತ್ತಾ, ಸೆನ್ಸೇಶನ್ ಕ್ರಿಯೇಟ್ ಮಾಡುತ್ತಾ, ಚರ್ಚೆಗೆ ಗ್ರಾಸವಾಗುತ್ತ್ತಾ? ನಿಜಕ್ಕೂ ಅಚ್ಚರಿಯಾಗುತ್ತದೆ. ನಗರವಾಲಾ ಪ್ರಕರಣಕ್ಕೆ ಸಂಬಂಧಿಸಿ ಇಂದಿರೆಯ ಮನೆಯ ಮತ್ತೊಂದು ಹೆಣ್ಣು ಧ್ವನಿ ಯಾರದ್ದು? ನನಗೆ ಗೊತ್ತು… ಆ ಧ್ವನಿ ಅವರದ್ದೇ ಅಲ್ಲವೇ ಅಂತೆಲ್ಲ ತರಹೇವಾರಿ ಪ್ರಶ್ನೆಗಳ ಗಂಟನ್ನೇ ಮುಂದಿಟ್ಟುಕೊಂಡು ಈಗಲೂ ದಿನಕ್ಕೆ ಕನಿಷ್ಠಪಕ್ಷ ಹತ್ತಿಪ್ಪತ್ತು ಮಂದಿ ಫೋನ್ ಕಾಲ್ ಮಾಡುತ್ತಿದ್ದಾರೆ. ಅದಕ್ಕೂ ಹಿಂದಿನ ವಾರ ಬರೆದಿದ್ದ ಇಂದಿರಾ ಹತ್ಯೆಯಲ್ಲಿ ಆರ್.ಕೆ. ಧವನ್ ಪಾತ್ರದ ಕುರಿತ ಲೇಖನ ಮತ್ತು ಆ ನಂತರದಲ್ಲಿ ಬರೆದ ನಗರವಾಲಾ ಪ್ರಕರಣ ಕುರಿತ ಸಸ್ಪೆನ್ಸ್‍ನಿಂದ ಸ್ಟೋರಿಯ ಬಗ್ಗೆ ಚರ್ಚಿಸುವ, ತಿಳಿದುಕೊಳ್ಳುವ ಓದುಗರ ತುಡಿತ ಎಂಟು ದಿನ ಕಳೆದರೂ ಕಡಿಮೆಯಾಗುತ್ತಿಲ್ಲ. ಅದನ್ನು ನೆನೆಸಿಕೊಂಡರೆ ಮತ್ತಷ್ಟು ಇನ್ನಷ್ಟು ಬರೆಯಲು ಉಮೇದಿ ಬರುತ್ತದೆ. ಅದರ ಕ್ರೆಡಿಟ್ಟು, ಕಿರೀಟವೆಲ್ಲ `Stop Next Assassination’ ಪುಸ್ತಕ ಬರೆಯುವುದಕ್ಕೋಸ್ಕರ ಒಂದು ಆಳವಾದ ಸಂಶೋಧನೆಯನ್ನೇ ನಡೆಸಿದ ಎಸ್.ಆರ್.ಕೃಷ್ಣಮೂರ್ತಿ ಎಂಬ ಆ ಹಿರಿಯರಿಗೇ ಸಲ್ಲಲಿ ಬಿಡಿ.

 

Commentry 17 March 15 2014ಓದುಗರೊಬ್ಬರು ಕೇಳಿದ ಪ್ರಶ್ನೆಯೊಂದನ್ನು ಇಲ್ಲಿ ಪ್ರಸ್ತಾಪಿಸಲೇಬೇಕು. “ನಗರವಾಲಾ ಪ್ರಕರಣ ನಡೆದದ್ದು 1971ರಲ್ಲಿ, ಅದರಲ್ಲಿ ಇಂದಿರಾ ಪಾಲು ಏನೇನೂ ಇಲ್ಲ ಎಂಬುದು ಲೇಖನ ಓದಿದಾಗ ಗೊತ್ತಾಗುತ್ತದೆ. ಹಾಗೇ ಬೇರೆ ಯಾರೋ ಒಬ್ಬರು ಅದರ ಹಿಂದಿರುವುದು ಸ್ಪಷ್ಟವಾಗುತ್ತದೆ. ಮೇನಕಾ ಸಂಜಯರ ಕೈ ಹಿಡಿದಿದ್ದು 1974ರಲ್ಲಿ. ಅಂದಮೇಲೆ ಕಿರಿ ಸೊಸೆ ಇನ್ನೂ ಇಂದಿರಾರ ಹೊಸ್ತಿಲನ್ನು ತುಳಿದಿರಲಿಲ್ಲ ಎಂದಾಯಿತು. ಹಾಗಾದರೆ ಇಂದಿರಾ ಗಾಂಧಿ ಮನೆಯಿಂದ ಸ್ಟೇಟ್ ಬ್ಯಾಂಕ್ ಕ್ಯಾಶಿಯರ್‍ಗೆ ಫೋನ್ ಮಾಡಿರಬಹುದಾದ ಮತ್ತೊಂದು ಹೆಣ್ಣು ಧ್ವನಿ ಯಾರದ್ದೆಂದು ನೇರವಾಗಿ ಹೇಳಿಬಿಡಬಹುದಿತ್ತಲ್ಲ” ಅಂತ ಕೇಳಿದರು. ಆ ಓದುಗರ ಪ್ರಶ್ನೆಯೇನೋ ಸರಿ, ಆ ಹೆಣ್ಣಿನ ಹೆಸರು ಬರೆಯಬೇಕೆಂಬ ಅವರ ಬಯಕೆ ಸಹಜವಾದ್ದೇ ಅಲ್ಲವೇ?

ಕಳೆದ ಶನಿವಾರ ಬೆಳಗಿನಿಂದ ಸಂಜೆಯವರೆಗೆ ಫೋನ್ಮತ್ತು ಎಸ್ಸೆಮ್ಮೆಸ್‍ಗೆ ಬಿಡುವಿರಲಿಲ್ಲ. ಮಧ್ಯಾಹ್ನದ ಹೊತ್ತಿಗೆ ಮೇಲ್ ಇನ್‍ಬಾಕ್ಸ್‍ನಲ್ಲಿ ಹಿಂದೆಂದೂ ಬಂದಿರದಷ್ಟು ಪ್ರತಿಕ್ರಿಯೆಗಳು ಬಂದು ಕುಳಿತುಕೊಂಡಿದ್ದವು. ಬೆಳ್ಳಂಬೆಳಗ್ಗೆ ಆರಕ್ಕೂ ಮೊದಲು ಎಸ್ಸೆಮ್ಮೆಸ್ ಮಾಡಿ ಉದ್ಘಾರ ತೆಗೆದಿದ್ದು ಬರಹಗಾರ, ಪ್ರವಚನಕಾರ ಹಾಗೂ ವಿದ್ವಾಂಸ ಪ್ರೊ.ವಿಷ್ಣು ಜೋಶಿ, ಅದರ ಬೆನ್ನಲ್ಲೇ ಫೋನ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು ನನ್ನ ಪ್ರೀತಿಯ ಚಿಂತಕ ಡಾ. ಕೆ.ಎಸ್. ನಾರಾಯಣಾಚಾರ್ಯ. “ಎಲ್ಲವೂ ಚೆನ್ನಾಗಿದೆ, ಆ ಧ್ವನಿ ಯಾರದ್ದು ಅಂತ ಒಂದು ಲೈನ್ ಬರೀಬಹುದಿತ್ತಲ್ಲವೇ” ಎಂದು ಎಂದಿನ ಗಾಂಭೀರ್ಯದ ಧ್ವನಿಯಲ್ಲಿ ಕೇಳಿದರು. “ಎಲ್ಲ ಓದುಗರೂ ಗೂಡಾರ್ಥಗಳನ್ನು ಗ್ರಹಿಸಲಾರರು, ಓದುಗರನ್ನು ಯಾಕೆ ಗೋಳು ಹೊಯ್ದುಕೊಳ್ಳುತ್ತೀರಿ?, ಮ್ಯಾನೇಜ್‍ಮೆಂಟ್ ನಿರ್ಬಂಧ ಏನಾದರೂ ಇದೆಯೋ? ನಿಷ್ಠುರವಾದಕ್ಕೆ ಹೆಸರಾಗಿರುವ ವಿಜಯ ಸಂಕೇಶ್ವರರು ಹಾಗೆ ಕೈಕಟ್ಟಿಹಾಕಲಾರರು ಅನ್ನುವುದು ನನ್ನ ಬಲವಾದ ನಂಬಿಕೆ” ಅಂತ ಒಂದೇ ಉಸಿರಿಗೆ ಎಲ್ಲವನ್ನೂ ಆಚಾರ್ಯರು ಹೇಳಿಬಿಟ್ಟರು.

ನಿಮ್ಮ ಅನಿಸಿಕೆ ಸರಿ ಇದೆ ಅಂದೆ. ವಿಜಯವಾಣಿ ಮಾಲೀಕರಾದ ಸಂಕೇಶ್ವರ ಅವರು ನಮಗೆ ವಿಧಿಸಿರುವ ನಿರ್ಬಂಧ ಅಂದರೆ ಇಷ್ಟೇ. ಪ್ರಾಣ ಹೋದರೂ ಸುಳ್ಳನ್ನು ಬರೆಯಬಾರದು, ಯಾರೊಬ್ಬರ ತೇಜೋವಧೆಗೆ ಕೈ ಹಾಕಬಾರದು, ಕೈ ಬಾಯಿಗೆ ಕೆಸರು-ಕೊಳಕನ್ನು ಮೆತ್ತಿಕೊಳ್ಳಬಾರದು, ಸತ್ಯ ಹೇಳಬೇಕಾದ ಸಂದರ್ಭದಲ್ಲಿ ಪ್ರಾಣ ಹೋದರೂ ಅದನ್ನು ಲೆಕ್ಕಿಸಬಾರದು, `No compromise with Antisocial, Anti-national elements and corrupt people` ಇದು ವಿಜಯವಾಣಿ ಸಿಬ್ಬಂದಿಗೆ ಮಾಲೀಕರು ಹಾಕಿಕೊಟ್ಟಿರುವ ಚೌಕಟ್ಟು. ಅಕ್ರಮವನ್ನು ಬಯಲಿಗೆ ಎಳೀರಿ, ಖದೀಮರ ಮುಖವಾಡ ಕಳಚಿ.. ನಿಮಗೆ ಗನ್ ಬೇಕಾ, ಗನ್‍ಮ್ಯಾನ್ ಬೇಕಾ, ಕೋರ್ಟು ಕಟ್ಟಲೆ ಅಂತ ಬಡಿದಾಡಲು ಹಣಬೇಕಾ? ಅದಕ್ಕೆಲ್ಲ ನಾನಿದ್ದೇನೆ, ಪತ್ರಿಕೋದ್ಯಮ ನನ್ನ ಪ್ಯಾಶನ್ನು, ಪತ್ರಿಕಾಧರ್ಮ ಪಾಲನೆ ಮಾಡುವುದು ನನ್ನ ಸಂಕಲ್ಪ, ನಿಮ್ಮ ಕೆಲಸವನ್ನು ನೀವು ನಿರ್ಭೀತಿಯಿಂದ ಮಾಡಿ, ಪ್ರಾಮಾಣಿಕತೆಯಿಂದ ಮಾಡಿ ಅಂತ ವಿಜಯವಾಣಿ ಪತ್ರಿಕೆ ಆರಂಭಕ್ಕೂ ಮುನ್ನ ಸಂಪಾದಕೀಯ ಬಳಗದ ಪ್ರಮುಖರನ್ನು ಎದುರು ಕುಳ್ಳಿರಿಸಿಕೊಂಡು ಸ್ಪಷ್ಟವಾಗಿ ಹೇಳಿಬಿಟ್ಟಿದ್ದಾರೆ ಅಂದೆ. ಆಚಾರ್ಯರ ಮನಸ್ಸಿನಲ್ಲಾದ ಆನಂದ ಅವರ ನಗೆಯಲ್ಲಿ ವ್ಯಕ್ತವಾಗಿತ್ತು.

 

ಬಸ್! ಆಚಾರ್ಯರ ಮೆಚ್ಚುಗೆ ಮಾತೊಂದೇ ಸಾಕು ಇಂಥ ಇನ್ನೂ ನೂರಾರು ಲೇಖನ ಬರೆಯುವುದಕ್ಕೆ. ಅವರು ಅಷ್ಟಕ್ಕೇ ಸುಮ್ಮನಾಗಲಿಲ್ಲ, “ರಾಜೀವ್ ಹತ್ಯೆಯ ಆಳ ಅಗಲದ ಕುರಿತು ಬರೆಯುವುದಾದರೆ ಆ ಬಗ್ಗೆ ನನ್ನ ಬಳಿ ಒಂದು ಅಪರೂಪದ ಪುಸ್ತಕ ಇದೆ. `Beyond The Tigers-TRACKING RAJIV GANDHIS ASSASSINATION’ ಅಂತ. ದೆಹಲಿಯ ರಾಜೀವ್ ಶರ್ಮಾ ಎಂಬುವವರು ರೀಸರ್ಚ್ ಮಾಡಿ ಪುಸ್ತಕ ಬರೆದಿದ್ದಾರೆ. ಕಾವೇರಿ ಪ್ರಕಾಶನದವರು ಅದನ್ನು ಪ್ರಕಟಿಸಿದ್ದಾರೆ. ಈಗ ಅದು ಮುಗಿದು ಹೋಗಿದೆ, ಮಾರಾಟಕ್ಕೆ ಸಿಗಲ್ಲ. ಇಂದೇ ಕೊರಿಯರ್‍ಗೆ ಹಾಕುತ್ತೇನೆ. ಡೀಟೇಲ್ ಆಗಿ ಓದಿದರೆ ಆರು ತಿಂಗಳು ಓದುಗರ ಕುತೂಹಲ ಹಿಡಿದಿಟ್ಟುಕೊಳ್ಳಬಹುದು” ಎಂದರು. ಆಚಾರ್ಯರ ಬಳಿ ಇಂಥ ಅಮೂಲ್ಯ ಸಂಗ್ರಹ ಅದೆಷ್ಟಿದೆಯೋ? ಮನೆಯಲ್ಲಿ ಅವರು ಕುಳಿತುಕೊಳ್ಳುವ ಕುರ್ಚಿಯೊಂದನ್ನು ಬಿಟ್ಟು ಒಂದಿಚು ಜಾಗವೂ ಖಾಲಿ ಇಲ್ಲ. ಅಷ್ಟು ಪುಸ್ತಕಗಳ ಸಂಗ್ರಹವಿದೆ. ಸುಮಾರು 170ಕ್ಕೂ ಹೆಚ್ಚು ಪುಸ್ತಕಗಳನ್ನು ಅವರೇ ಸ್ವತಃ ಬರೆದಿದ್ದಾರೆ. ಅದರಲ್ಲಿ ಇಂಗ್ಲಿಷ್ ಭಾಷೆಯ ಪುಸ್ತಕಗಳ ಸಂಖ್ಯೆ ಮೂವತ್ತೈದಕ್ಕೂ ಹೆಚ್ಚು. ಅವರ ವಯಸ್ಸು ಎಂಭತ್ತರ ಗಡಿ ದಾಟಿದೆ. ಈಗಲೂ ಅವರು ದಿನಕ್ಕೆ ಸುಮಾರು 25 ಪುಟಗಳಷ್ಟನ್ನು ಕೈಯಲ್ಲೇ ಬರೆಯುತ್ತಾರೆ. ರಾಷ್ಟ್ರ- ರಾಷ್ಟ್ರೀಯತೆ, ಧರ್ಮ ಚಿಂತನೆಯೇ ಅವರಿಗೆ ಫುಲ್‍ಫೂಲ್ ಟೈಮ್ ಕೆಲಸ. ಅವರನ್ನು ರಾಷ್ಟ್ರಸಂತ ಕರೆಯಲು ಅಡ್ಡಿಯಿಲ್ಲ. ಮನೆಯಲ್ಲಿ ಪುಸ್ತಕದ ರಾಶಿ, ನಮನಮೂನೆಯ ನೂರಾರು ಪೆನ್ನುಗಳ ಗೊಂಚಲು, ಒಂದೂ ಚಿತ್‍ಕಾಟು ಇಲ್ಲದೆ ಬರೆದು ಮುದ್ರಣಕ್ಕೆ ಅಣಿಯಾಗಿರುವ ರಾಶಿ ರಾಶಿ ಕೈಬರಹದ ಸಂಗ್ರಹ ನೋಡುವುದಕ್ಕೇ ಅಂದ..ಆನಂದ. ಅಂಥವರ ಆಶೀರ್ವಾದ, ಮೆಚ್ಚುಗೆ, ಪ್ರೀತಿ,ಅಭಿಮಾನದ ಮಾತಿಗಿಂತ ಬೇರೇನು ಬೇಕು ಹೇಳಿ. I am happy… ಅಂದ ಹಾಗೆ `Beyond The Tigers’ ನನ್ನ ಕೈ ಸೇರಿದೆ. ಪುಟಗಳು ಪಟಪಟನೇ ಸಾಗುತ್ತಿವೆ.

ವಿಷಯಕ್ಕೆ ಬರೋಣಲ್ವೆ…

ಆರ್.ಕೆ.ಧವನ್ ಬಗ್ಗೆ ಬರೆಯುತ್ತಾ ಮೇನಕಾ ಮತ್ತು ಸೋನಿಯಾ ಎಂಬ ಎರಡು ಗೂಡುಗಳ ನಡುವೆ ಕೋಳಿ ಕಾಳಗ ಹೇಗೆ ಶುರುವಾಗಿತ್ತು ಅಂತ ಅಲ್ಲಿ ಇಲ್ಲಿ ಸ್ವಲ್ಪ ಸ್ವಲ್ಪ ಹೇಳಿದ್ದೇನೆ. ಅದಕ್ಕೆಲ್ಲ ಸಂಜಯ ಮತ್ತು ಮೇನಕಾ ಜೋಡಿ ಆ ಇಬ್ಬರಿಬ್ಬರಿಗಿಂತ ಹೆಚ್ಚು ಅಗ್ರೆಸ್ಸಿವ್ ಮತ್ತು ಮಹತ್ವಾಕಾಂಕ್ಷಿಗಳಾಗಿದ್ದೇ ಕಾರಣ ಅಂತಲೂ ಹೇಳಿದ್ದೇನೆ. ಆ ಈಷ್ರ್ಯೆಯೇ ಏನೆಲ್ಲ ಅನಾಹುತ ಸೃಷ್ಟಿಸಿತು ಎಂಬುದನ್ನು ಈಗ ಹೇಳುವುದು ಬಾಕಿ ಇದೆ. ಸರ್ಕಾರದ ಆಯಕಟ್ಟಿನ ಜಾಗಗಳಿಗೆ ತಾವು ಹೇಳಿದವರನ್ನೇ ತಂದು ಕೂರಿಸುವ ಕೆಲಸವನ್ನು ಸೋನಿಯಾ ಮತ್ತು ರಾಜೀವರು ಇಂದಿರಾ ಮೂಲಕ ಮಾಡಿಸುತ್ತಾ ಹೋಗುತ್ತಾರೆ. ಇಂದಿರಾಗೆ ಅವರಿಬ್ಬರೇ ಆಪ್ತ ಸಲಾಹಾಕಾರರು. ಅದರ ಪರಿಣಾಮದ ಒಂದು ಉತ್ತಮ ಉದಾಹರಣೆ ಎಂದರೆ ದೇಶದ ಮೇಲೆ ತುರ್ತು ಪರಿಸ್ಥಿತಿಯ ಹೇರಿಕೆ. ಒಂದು ಕಡೆ ಮನೆಯೊಳಗಿನವರ ಒತ್ತಡದ ಪೀಕಲಾಟ, ಹೊರಗೆ ಪ್ರತಿಪಕ್ಷಗಳ ಕಾಟ. ಈ ಜಂಜಾಟದಿಂದ ಬೇಸತ್ತು ಬಳಲಿದ ಇಂದಿರಾಗೆ ಕಮ್ಯುನಿಸ್ಟರ ನೆರವಿನ ಹಸ್ತ ನೆಮ್ಮದಿಯ ತಂಗಾಳಿಯಂತೆ ಕಾಣಿಸಿದ್ದು ಸಹಜ. ಅದರ ಪರಿಣಾಮ ಏನು? ಏಕ್‍ದಂ ಮೋಹನ ಕುಮಾರ ಮಂಗಳಂ ಎಂಬ ಕಮ್ಯುನಿಸ್ಟ್ ನಾಯಕ ಇಂದಿರಾಗೆ ಅತ್ಯಾಪ್ತರಾಗಿಬಿಡುತ್ತಾರೆ. ಅದಕ್ಕೋಸ್ಕರವೇ ಕುಮಾರಮಂಗಳಂ ಇಂದಿರಾ ಕ್ಯಾಬಿನೆಟ್ ಸೇರುತ್ತಾರೆ. ನಂತರ ಆದದ್ದೇನು? ಕುಮಾರ ಮಂಗಳಂ ಕತೆ ಏನಾಯಿತು?

ಕಾಂಗ್ರೆಸ್ ಮತ್ತು ಕಮ್ಯುನಿಸ್ಟರ ಬೆಸುಗೆಗೆ ಎರಕ ಹೊಯ್ಯಲು ಚೆನ್ನೈಗೆ ತೆರಳಿದ್ದ ಕುಮಾರಮಂಗಳಂ ದೆಹಲಿಗೆ ಜೀವಂತ ವಾಪಸಾಗಲೇ ಇಲ್ಲ. 1973 ಮೇ30; ಕುಮಾರಮಂಗಳಂ ಚೆನ್ನೈನಿಂದ ದೆಹಲಿ ಕಡೆ ಪ್ರಯಾಣಿಸುತ್ತಿದ್ದ ವಿಮಾನ ಅತಿ ವಿಚಿತ್ರ ರೀತಿಯಲ್ಲಿ ಅಪಘಾತಕ್ಕೆ ಈಡಾಯಿತು. ಆಂಧ್ರಪ್ರದೇಶದ ಗದ್ದೆಯಲ್ಲಿ ವಿಮಾನ ಅಪ್ಪಳಿಸಿತು. ವಿಮಾನದಲ್ಲಿದ್ದವರ ಪೈಕಿ ಓರ್ವ ಪೈಲಟ್ ಬಿಟ್ಟು ಬಾಕಿ ಯಾರೊಬ್ಬರೂ ಬದುಕಲಿಲ್ಲ. ಇಲ್ಲಿ ಗಮನಿಸಬೇಕಾದ್ದು ಅಪಘಾತ ವಿಚಾರ ಅಲ್ಲ, ಅದರ ಹಿಂದೆ ಒಂದು ಯೋಜನೆ ಇತ್ತು ಎಂಬುದನ್ನು. ಅಪಘಾತಕ್ಕೀಡಾದ ವಿಮಾನದಲ್ಲಿ ಓರ್ವ ಬ್ಯಾಂಕರ್ ಚೆನ್ನೈನಿಂದ ದೆಹಲಿಗೆ ಪ್ರಯಾಣಿಸಬೇಕಿತ್ತು. ಆದರೆ ಮುಂಚಿತವಾಗಿ ಅವರಿಗೆ ಬಂದ ಅನಾಮಧೇಯ ಕರೆ ಅವರ ಜೀವ ಬಚಾವ್ ಮಾಡುತ್ತದೆ. ಇದರ ಅರ್ಥವೇನು? ಯಾರು ಅದರ ಹಿಂದಿದ್ದವರು?

ಇಂದಿರಾ ಆಡಳಿತಾವಧಿಯಲ್ಲಿ ಸರ್ಕಾರದ ವ್ಯವಹಾರಗಳಲ್ಲಿ ಕೈಯ್ಯಾಡಿಸಿ ಆಯಕಟ್ಟಿನ ಜಾಗಗಳಿಗೆ ತಮಗೆ ಬೇಕಾದವರನ್ನು ಇಂದಿರಾ ಕುಟುಂಸ್ಥರು ನೇಮಿಸಿಕೊಳ್ಳುತ್ತಿದ್ದರು. ಅದಕ್ಕೊಂದು ಒಳ್ಳೆ ನಿದರ್ಶನ ಇದೆ. ಸುಮಾರು 1970ರ ಸರಿಸುಮಾರಿಗೆ ಭಾರತೀಯ ಜೀವವಿಮಾ ನಿಗಮಕ್ಕೆ ಡಾ.ಆರಾಂ ಎಂಬುವವರು ನಿರ್ದೇಶಕರಾಗಿ ನಿಯುಕ್ತಿಯಾಗುತ್ತಾರೆ. ಅವರು ಈಶಾನ್ಯ ರಾಜ್ಯಗಳ ಇಗರ್ಜಿಗಳ ಪ್ರಮುಖ ಕಾರ್ಯಕರ್ತರಾಗಿದ್ದರು. ಅವರ ನಿಯುಕ್ತಿ ಭಾರತೀಯ ಜೀವವಿಮಾ ನಿಗಮದ ಶಾಸನಕ್ಕೂ ವಿರುದ್ಧ. ಅದೊಂದೇ ಅಲ್ಲ, ಅದೇ ಕಾಲಕ್ಕೆ ಬೆಂಗಳೂರು ಮೂಲದ ಮ್ಯಾಥನ್ ಎಂಬುವವರನ್ನು ದೂರಸಂಪರ್ಕ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುತ್ತದೆ. ಅದಕ್ಕೆ ಅವರಿಗಿದ್ದ ಅರ್ಹತೆಯ ಮಾನದಂಡ ಅವರ ಜಾತಿ ಮೂಲವೇ ಎಂಬುದು ಗಮನಿಸಬೇಕಾದ ಅಂಶ. ಎಲ್ಲ ಆಯಕಟ್ಟಿನ ಹುದ್ದೆಗಳಿಗೆ ಕ್ರೈಸ್ತ ಹಿನ್ನೆಲೆಯವರನ್ನು ಅಥವಾ ಕ್ರೈಸ್ತ ಸಂಪ್ರದಾಯಕ್ಕೆ ಮತಾಂತರಗೊಂಡ ದಲಿತರು, ಮುಸ್ಲಿಮರನ್ನು, ಕೊನೆಯ ಆಯ್ಕೆಯಾಗಿ ಇತರ ಹಿಂದುಗಳನ್ನು ನೇಮಕ ಮಾಡಲಾಗುತ್ತಿತ್ತು.

ಈ ನಡುವೆ ನಗರವಾಲಾ ಪ್ರಕರಣದಲ್ಲಿ ಆದಂತೆಯೇ ಮತ್ತೊಂದು ಫೋನ್ ಕಾಲ್ ಪ್ರಸಂಗ ಕುತೂಹಲಕರವಾಗಿದೆ. ಜೀವವಿಮಾ ನಿಗಮದ ಕೇಂದ್ರ ಕಚೇರಿಯಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿದ್ದ ಯು.ಕೆ.ಕಿಣಿಯವರಿಗೆ ಒಮ್ಮೆ ಇಂದಿರಾ ನಿವಾಸದಿಂದ ಟೆಲಿಫೋನ್ಕರೆ ಬರುತ್ತದೆ. “ನಾನು ಇಂದಿರಾ ಮಾತನಾಡುತ್ತಿದ್ದೇನೆ, ಗಂಡನನ್ನು ಕಳೆದುಕೊಂಡು ದುಃಖದಲ್ಲಿದ್ದ ಮುಸ್ಲಿಂ ವಿಧವೆಯೊಬ್ಬಳಿಗೆ ವಿಮಾ ಹಣ ನೀಡುವಂತೆ ಹೇಳಿದ್ದೆ, ನೀಡಲಿಲ್ಲವಂತೆ ಏಕೆ? ಕೂಡಲೇ ಹಣ ನೀಡಬೇಕು,ಇಲ್ಲವಾದರೆ ಪರಿಣಾಮ ನೆಟ್ಟಗಿರುವುದಿಲ್ಲ” ಎಂಬ ಆವಾಜ್ ಬರುತ್ತದೆ. ಅದಕ್ಕೆ ಕಿಣಿ ಹೇಳಿದರು, “ಮೇಡಂ ಪಾಲಿಸಿದಾರರು ಮೃತಪಟ್ಟರೆ,ಅದು ದೃಢಪಟ್ಟ ಕೂಡಲೇ ಆ ಹಣ ಸಂಬಂಧಪಟ್ಟವರಿಗೆ ಸಂದಾಯವಾಗುತ್ತದೆ. ಅದಕ್ಕೆ ಯಾರ ಶಿಫಾರಸೂ ಬೇಕಾಗುವುದಿಲ್ಲ, ಆದರೆ ನೀವು ಹೇಳಿದ ಮುಸ್ಲಿಂ ವಿಧವೆಯ ಗಂಡ ವಿಮೆಯನ್ನೇ ಮಾಡಿಸಿರಲಿಲ್ಲ, ಆದ್ದರಿಂದ ಹಣ ಕೊಡಲು ಬರುವುದಿಲ್ಲ”. ಆಗ ದೂರವಾಣಿಯಲ್ಲೇ ಕಿರುಚಿಕೊಂಡ ಆ ಹೆಣ್ಣು ಧ್ವನಿ, ಹೇಳಿದ್ದು `policy or no policy. I do not care… It is not your paternal property.Shell down the money;or, get sacked’ ಹೇಳಿದ ಕೆಲಸವನ್ನು ಮುಚ್ಚಿಕೊಂಡು ಮಾಡು, ಇಲ್ಲ ಅಂದ್ರೆ ಪರಿಸ್ಥಿತಿ ನೆಟ್ಟಗಿರಲ್ಲ ಎಂಬುದು ಮಾತಿನ ಅರ್ಥ.

ಕರೆ ಪ್ರಧಾನಿಯದ್ದೆಂದು ತಿಳಿದು ಎದ್ದು ನಿಂತ ಕಿಣಿ ಆಘಾತಕ್ಕೊಳಗಾಗಿ ಕುಸಿದು ಕುಳಿತವರು ಮತ್ತೆ ಮೇಲೇಳಲೇ ಇಲ್ಲ. ಕಿಣಿ ಪ್ರಕರಣದ ಸುದ್ದಿ ಮಿಂಚಿನಂತೆ ಹಬ್ಬಿತು. ದೇಶಾದ್ಯಂತ ವಿಮಾ ನೌಕರರು ಹರತಾಳ ಆಚರಿಸಿದರು. ಬೆಂಗಳೂರಲ್ಲೂ ವಿಮಾ ನೌಕರರು ಕೆಲ ಕಡತಗಳಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು. ನಿಗಮದ ಕಚೇರಿ ಲಾಕೌಟ್ ಆಯಿತು. ಅದು 1975ರವರೆಗೂ ಸರಣಿ ಮುಷ್ಕರ, ಲಾಕೌಟ್ ಮುಂದುವರೆಯಿತು. ಕೊನೆಗೆ ತುರ್ತು ಪರಿಸ್ಥಿತಿಯಲ್ಲಿ ಅದು ಪರ್ಯಾವಸನವಾಯಿತು. ಪ್ರಕರಣದ ಕುರಿತು ತುರ್ತು ತನಿಖೆ ನಡೆಸುವಂತೆ ಜೀವವಿಮಾ ನಿಗಮದ ಅಧ್ಯಕ್ಷರಾಗಿದ್ದ ಎಸ್. ರಂಗರಾಜನ್ ಸಂಬಂಧಪಟ್ಟ ಸಚಿವ ರಘುನಾಥನ್ ಅವರಿಗೆ ಆಗ್ರಹಪೂರ್ವಕವಾಗಿ ಕೋರಿದರು. ವಿಚಾರಣೆ ನಡೆಯಿತು. ಇಂದಿರಾ ನಿವಾಸದಿಂದ ವಿಮಾ ನಿಗಮದ ಕಚೇರಿಗೆ ಕರೆ ಹೋದದ್ದು ದೃಢಪಟ್ಟಿತು. ಆದರೆ ಆ ಕರೆ ಮಾಡುವ ಸಂದರ್ಭದಲ್ಲಿ ಪ್ರಧಾನಿ ಇಂದಿರಾ ಲೋಕಸಭೆಯ ಸಮಿತಿಯೊಂದರ ಚರ್ಚೆಯಲ್ಲಿ ಭಾಗವಹಿಸಿದ್ದರು. ಆ ದೂರವಾಣಿ ಕರೆಯನ್ನು ಇಂದಿರಾ ನಿವಾಸದ ಓರ್ವ ನೌಕರ ತಮಾಷೆಗೆ ಮಾಡಿದ್ದನಂತೆ. ಅವನ ಮೇಲೆ ಕ್ರಮ ಜರುಗಿಸಲಾಯಿತಂತೆ. ಇದು ತನಿಖೆಯ ಬಳಿಕ ನೀಡಿದ ಹೇಳಿಕೆ. ಹಾಗಾದರೆ ಇಂದಿರಾ ನಿವಾಸದಲ್ಲಿ ಕೆಲಸ ಮಾಡುವ ಸಾಮಾನ್ಯ ನೌಕರ ಇಂದಿರಾ ಧ್ವನಿ ಅನುಕರಿಸಿ ತಮಾಷೆಗೆ ಕರೆ ಮಾಡಿದ ಎಂದರೆ ನಂಬಲಾದೀತೇ? ಈ ಎಲ್ಲ ಸಂಗತಿಯನ್ನು 1981ರಲ್ಲಿ ಬೆಂಗಳೂರಿಗೆ ಬಂದಿದ್ದ ರಂಗರಾಜನ್ ಅನೌಪಚಾರಿಕ ಸಭೆಯಲ್ಲಿ ಹೇಳಿಕೊಂಡಿದ್ದರು. ಹಾಗಾದರೆ ಮತ್ತಿನ್ಯಾರು ದೂರವಾಣಿ ಕರೆ ಮಾಡಿರಬಹುದು? ಓದುಗರ ಊಹೆಗೇ ಬಿಡಲೇ?

ಇಂದಿರಾ ತುರ್ತು ಪರಿಸ್ಥಿತಿ ಹೇರಿದ್ದು ಪ್ರತಿಪಕ್ಷಗಳ ನಿಯಂತ್ರಣಕ್ಕೆ ಎನ್ನುವುದು ಮೇಲ್ನೋಟದ ಸತ್ಯ. ಒಳ ನೋಟ ಬೇರೆಯೇ ಇದೆ. ಮುದ್ದಿನ ಸೊಸೆಯ ಮುಸುಕಿನ ಗುದ್ದುಗಳಿಗೆ ಸಿಕ್ಕು ಹೈರಾಣಾಗಿದ್ದ ಇಂದಿರಾಗೆ ಅಂತಿಮವಾಗಿ ನೆರವಿಗೆ ಬರುತ್ತಿದ್ದುದು ರಫ್ ಆ್ಯಂಡ್ ಟಫ್ ಆಗಿದ್ದ ಸಂಜಯನೇ. ಅಂತಹ ಸಂಜಯ ಇಂದಿರಾ ಪಾಲಿಗೆ ಹೇಗೆ ಇನ್ನಿಲ್ಲವಾಗಿಬಿಟ್ಟ ಎಂಬುದನ್ನೆಲ್ಲ ಈ ವಾರ ಹೇಳಬೇಕಿತ್ತು. ಆಚಾರ್ಯರ ಫೋನ್ಕಾಲ್‍ನ ಖುಷಿಯ ಗುಂಗಲ್ಲೇ ಇದ್ದ ನನಗೆ ಸಮಯ ಅಲ್ಲ, ಪುಟದಲ್ಲಿ ಜಾಗ ತುಂಬಿದ್ದು ಗೊತ್ತಾಗಲೇ ಇಲ್ಲ. ವೆರಿ ಸಾರಿ… ಹೇಳುವುದಕ್ಕೆ ಸಾಕಷ್ಟು ವಿಷಯ ಸಂಗ್ರಹವಿದೆ. ಮುಂದಿನ ವಾರದ ತನಕ ಕಾಯ್ತೀರಲ್ಲ?

ದೇ? ಖಂಡಿತ ಅಲ್ಲ, ಅದು ಇಡೀ ದೇಶಕ್ಕೆ ಆದ ನಷ್ಟ! ನಷ್ಟ ಅನ್ನುವುದಕ್ಕಿಂತ ಅದೊಂದು ದೊಡ್ಡ ಆಘಾತ. ಈಗ ಕಾಂಗ್ರೆಸ್ ಪಕ್ಷಕ್ಕೆ ಎದುರಾಗಿರುವ ಸ್ಥಿತಿಯನ್ನು ಒಮ್ಮೆ ಅವಲೋಕಿಸಿದರೆ ಈ ಮಾತು ಹೆಚ್ಚು ಸುಲಭವಾಗಿ ಅರ್ಥ ಆಗಬಹುದು. ಆದರೇನು ಮಾಡುವುದು, ಇಂದಿರಾರ ಆಪ್ತ ಕಾರ್ಯದರ್ಶಿಯಾಗಿದ್ದ ಆರ್.ಕೆ. ಧವನ್ ಮತ್ತು ಅವರ ಗೌಪ್ಯ ಸೂತ್ರಧಾರರಿಗೆ ಒಂದು ಕ್ಷಣವೂ ಹಾಗೆ ಅನ್ನಿಸಲೇ ಇಲ್ಲವಲ್ಲ! ಧವನ್ ಬಗ್ಗೆ ಇನ್ನೆಷ್ಟು ಅಂತ ಹೇಳುವುದು? ಹೇಳುವಷ್ಟನ್ನು ಕಳೆದ ವಾರದ ಅಂಕಣದಲ್ಲೇ ಹೇಳಿಯಾಗಿದೆ. ಈ ವಾರ `ಐರನ್ ಲೇಡಿ’ ಇಂದಿರಾ ಜೀವನದ ಮತ್ತೊಂದು ನಾಟಕೀಯ ಪ್ರಸಂಗದ ಬಗ್ಗೆ ಹೇಳುತ್ತಿದ್ದೇನೆ.

commentry-17-march-15-2014

ಮೇ 24, 1971, ಬಾಂಗ್ಲಾ ಯುದ್ಧದ ಸಂದರ್ಭ. ಪರಿಸ್ಥಿತಿ ಸ್ವಲ್ಪ ಉದ್ವಿಗ್ನವಾಗಿಯೇ ಇತ್ತು. ಅದೇ ಸಮಯಕ್ಕೆ ಸರಿಯಾಗಿ ಸೇನೆಯ ಮಾಜಿ ಕ್ಯಾಪ್ಟನ್ ಮತ್ತು ಗುಪ್ತಚರ ಅಧಿಕಾರಿ ರುಸ್ತಮ್ ಸುಹ್ರಬ್ ನಗರವಾಲಾ ಎಂಬಾತ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರ ಧ್ವನಿಯನ್ನು ಅನುಕರಿಸಿ ಸಂಸತ್ ಭವನ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಫೋನ್ ಮಾಡುತ್ತಾನೆ. ಆ ಕಡೆ ಬ್ಯಾಂಕ್‍ನ ಚೀಫ್ ಕ್ಯಾಷಿಯರ್ ವೇದಪ್ರಕಾಶ ಮಲ್ಹೋತ್ರಾ ಫೋನ್ ಕಾಲ್ ರಿಸೀವ್ ಮಾಡುತ್ತಾರೆ. ಓರ್ವ ಬಾಂಗ್ಲಾದೇಶಿ ಪ್ರಜೆ ಬರುತ್ತಾನೆ ಆತನಿಗೆ ಅರವತ್ತು ಲಕ್ಷ ರೂಪಾಯಿ ಕೊಟ್ಟು ಕಳಿಸಿ ಅಂತ `ಇಂದಿರಾ’ ಕ್ಯಾಷಿಯರ್‍ಗೆ ಹೇಳುತ್ತಾರೆ. `ಇಂದಿರಾ’  ಫೋನ್ ಬಂದಿದ್ದೇ ತಡ ಮಲ್ಹೋತ್ರಾ ಹಿಂದೆಮುಂದೆ ನೋಡದೆ ಅನಾಮತ್ತಾಗಿ ಅರವತ್ತು ಲಕ್ಷ ರೂಪಾಯಿಯನ್ನು ಅಲ್ಲಿಗೆ ಬಂದ ವ್ಯಕ್ತಿಯ ಕೈಗಿಟ್ಟು ಕಳಿಸಿಕೊಡುತ್ತಾರೆ. “ಇಂದಿರಾ ಆದೇಶದಂತೆ ಅವರು ಕಳಿಸಿದ ವ್ಯಕ್ತಿಗೆ ಅರವತ್ತು ಲಕ್ಷ ರೂಪಾಯಿ ಕೊಟ್ಟು ಕಳಿಸಿದ್ದೇನೆ” ಅಂತ ಇಂದಿರಾರ ಪ್ರಧಾನ ಕಾರ್ಯದರ್ಶಿ ಪಿ.ಎನ್.ಹಕ್ಸರ್‍ಗೆ ಕೆಲ ಹೊತ್ತಿನ ಬಳಿಕ ಮಲ್ಹೋತ್ರಾ ಖುದ್ದಾಗಿ ಹೋಗಿ ತಿಳಿಸುತ್ತಾರೆ. ಆಗಲೇ ಮಲ್ಹೋತ್ರಾಗೆ ಗೊತ್ತಾದದ್ದು ತಾನು ಯಾಮಾರಿದ್ದೇನೆ ಅಂತ. ಕ್ಯಾಷಿಯರ್ ಮಲ್ಹೋತ್ರಾ ಮಾತು ಕೇಳಿ ಹಕ್ಸರ್ ಕೂಡ ದಂಗಾಗಿ ಹೋಗುತ್ತಾರೆ. ಹಕ್ಸರ್ ಈ ಆಘಾತಕಾರಿ ವಿಚಾರವನ್ನು ಇಂದಿರಾಗೆ ಮುಟ್ಟಿಸುತ್ತಾರೆ. ಆ ಬಗ್ಗೆ ಪೊಲೀಸರಿಗೆ ದೂರು ನೀಡುವಂತೆ ಇಂದಿರಾ ಮೆತ್ತಗೆ ಸೂಚಿಸುತ್ತಾರೆ. ನಂತರ ಡಿ.ಕೆ.ಕಶ್ಯಪ್ ಎಂಬ ದಕ್ಷ ಪೊಲೀಸ್ ಅಧಿಕಾರಿ ನೇತೃತ್ವದಲ್ಲಿ ಪ್ರಕರಣದ ತನಿಖೆ ಶುರುವಾಗುತ್ತದೆ. ಕಶ್ಯಪ್ ಮುಂದೆ ಕೆಲವೇ ದಿನಗಳಲ್ಲಿ ಅಕಸ್ಮಾತ್ತಾಗಿ ಸಾವನಪ್ಪುತ್ತಾರೆ. ಇವೆಲ್ಲ ಒಂದು ಕತೆ.

10-vijay-sankeshwar2.new

ಸುಮ್ಮನೇ ಕುಳಿತು ಆಲೋಚನೆ ಮಾಡಿದರೆ ಎಂಥವನನ್ನೇ ಆದರೂ ಕಾಡುವ ಪ್ರಶ್ನೆ ಅಂದರೆ, ನಗರವಾಲಾ ಎಂಬಾತ ಇಂದಿರಾ ಗಾಂಧಿಯವರ ಧ್ವನಿ ಅನುಕರಣೆ ಮಾಡಲು ಸಾಧ್ಯವಾ? ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಪ್ರಧಾನ ಕ್ಯಾಷಿಯರ್ ಮಲ್ಹೋತ್ರಾ ಏನನ್ನೂ ಪ್ರಶ್ನಿಸದೆ ಒಂದಲ್ಲ ಎರಡಲ್ಲ ಅರವತ್ತು ಲಕ್ಷ ರೂಪಾಯಿಯನ್ನು ಸಂಬಂಧಸೂತ್ರ ಕೇಳದೆ, ಪೂರ್ವಾಪರ ವಿಚಾರಿಸದೆ ಯಾರೋ ಒಬ್ಬ ಯಃಕಶ್ಚಿತ್ ವ್ಯಕ್ತಿಗೆ ಕೊಟ್ಟು ಕಳಿಸಲು ಸಾಧ್ಯವೇ? ಹಾಗಿದ್ದರೆ ಫೋನ್ ಮಾಡಿ ಬ್ಯಾಂಕ್‍ನಿಂದ ಕ್ಯಾಷ್ ತರಿಸಿಕೊಳ್ಳುವ ಪರಿಪಾಠವನ್ನು ಇಂದಿರಾ ಗಾಂಧಿ ಮೊದಲಿನಿಂದಲೂ ರೂಢಿಸಿಕೊಂಡಿದ್ದರೇ? ಅದು ನಿಜ ಅಂತಿಟ್ಟುಕೊಳ್ಳಿ. ಆ ವಿಷಯ ಮನೆ ಮಂದಿಗೆ ಬಿಟ್ಟು ಹೊರಗಿನವರಿಗೆ ಗೊತ್ತಿರಲು ಹೇಗೆ ಸಾಧ್ಯ? ಬ್ಯಾಂಕ್ ಕ್ಯಾಷಿಯರ್‍ಗೆ  ಫೋನ್ ಬಂದದ್ದು ಇಂದಿರಾರ ಪರ್ಸನಲ್ ರೂಂನಲ್ಲಿದ್ದ ಟೆಲಿ ಫೋನ್ ನಂಬರಿಂದ. ಇಂದಿರಾರ ಮನೆಯ ಆವರಣವನ್ನೇ ಯಾರೂ ಸುಲಭದಲ್ಲಿ ಪ್ರವೇಶಿಸುವ ಹಾಗಿರಲಿಲ್ಲ, ಅಷ್ಟು ಟೈಟ್ ಸೆಕ್ಯುರಿಟಿ ಇರುವ ಜಾಗ. ಹೇಳಿಕೇಳಿ ದೇಶದ ಪ್ರಧಾನಿ ನಿವಾಸ. ಅಂದಮೇಲೆ ಅವರ ಪರ್ಸನಲ್ ರೂಮಿಗೆ ಹೊರಗಿನವರು ಪ್ರವೇಶ ಮಾಡುವುದು ಸಾಧ್ಯವೇ? ಹಾಗಿದ್ದರೆ ಆ ದೂರವಾಣಿಯಿಂದ ಮನೆ ಮಂದಿಯನ್ನು ಬಿಟ್ಟು ಬೇರೆಯವರು  ಫೋನ್ ಮಾಡಿದ್ದು ಹೇಗೆ? ಇಂದಿರಾ ಪರ್ಸನಲ್ ರೂಮಿಗೆ ಎಂಟ್ರಿ ಪಡೆದು ಇಂದಿರಾರ ಧ್ವನಿಯನ್ನೇ ಅನುಕರಣೆ ಮಾಡಿ ನಗರವಾಲಾ ಬ್ಯಾಂಕ್‍ಗೆ  ಫೋನ್ ಮಾಡುವ ಕತೆಯನ್ನು ನಂಬುವುದಾದರೂ ಹೇಗೆ? ನಾಟ್ ಪಾಸಿಬಲ್!

ಆಯಿತು, ನಗರವಾಲಾಗೆ ಇಂದಿರಾ ಮನೆಯೊಳಗೆ ಪ್ರವೇಶ ಇತ್ತು ಅಂತಲೇ ಇಟ್ಟುಕೊಳ್ಳೋಣ. ಹಾಗಾದರೆ ನಗರವಾಲಾ ಇಂದಿರಾಗೆ ವಿಶ್ವಾಸಘಾತ ಮಾಡಿರಬಹುದೇ? ನಂಬಲಾಗುತ್ತಿಲ್ಲ. ನಗರವಾಲಾ ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್ ಆಗಿದ್ದವರು. ಸೇವೆಯಲ್ಲಿದ್ದಾಗ ದಕ್ಷತೆ ವಿಚಾರದಲ್ಲಿ ಎಲ್ಲೂ ಕೊಂಕಿದ ಉದಾಹರಣೆ ಸಿಗುವುದಿಲ್ಲ. ಹಾಗಿದ್ದರೆ ತಾನು ದೇಶದ ಪ್ರಧಾನಿಯ ಧ್ವನಿಯನ್ನೇ ಅನುಕರಣೆ ಮಾಡಿ ಅಷ್ಟು ದೊಡ್ಡ ಮೊತ್ತದ ಹಣ ಡ್ರಾ ಮಾಡಿದರೆ ಮುಂದೇನು ಗತಿಯಾಗುತ್ತದೆ ಎಂಬುದರ ಕನಿಷ್ಠ ಅರಿವು ಅವರಿಗೆ ಇಲ್ಲದಿರಲು ಸಾಧ್ಯವೇ? ಆದರೆ ನಗರವಾಲಾ ಬ್ಯಾಂಕ್‍ನಿಂದ ದುಡ್ಡು ತರಿಸಿದ್ದು ಮಾತ್ರ ನಿಜ. ಹಾಗಿದ್ದರೆ ನಗರವಾಲಾ ಇಷ್ಟೆಲ್ಲ ಸರ್ಕಸ್ ಮಾಡುವುದರ ಹಿಂದೆ ಯಾರದ್ದೋ ಬಲವಾದ ಕುಮ್ಮಕ್ಕು, ಬೆಂಬಲ ಇದ್ದಿರಲೇಬೇಕಲ್ಲ. ಖಂಡಿತವಾಗಿ ಅದು ಇಂದಿರಾ ಆಗಿರಲು ಸಾಧ್ಯವಿಲ್ಲ. ಹಾಗಿದ್ದರೆ ಯಾರು? ಉತ್ತರವಿಲ್ಲದ ಪ್ರಶ್ನೆ ಹಾಗೇ ಉಳಿದುಬಿಡುತ್ತದೆ.

ಯಾರೋ ಒಬ್ಬರು ಪರಿಸ್ಥಿತಿಯ ದುರ್ಲಾಭ ಮಾಡಿಕೊಂಡಿದ್ದಾರೆ ಅಂತಲೇ ಇಟ್ಟುಕೊಳ್ಳೋಣ. ದೂರಸಂಪರ್ಕ ಇಲಾಖೆಯಿಂದ ದೂರವಾಣಿ ಕರೆ ತನಿಖೆ ಮಾಡಿಸಬಹುದಿತ್ತಲ್ಲ. ಬ್ಯಾಂಕ್ ಕ್ಯಾಷಿಯರ್‍ಗೆ  ಫೋನ್ ಬಂದದ್ದಂತೂ ನೂರಕ್ಕೆ ನೂರು ಸತ್ಯ.  ಫೋನ್ನಲ್ಲಿ ಕೇಳಿಸಿದ್ದು ಒಂದು ಹೆಣ್ಣಿನ ಧ್ವನಿ. ಅದಕ್ಕೆ ಇಂದಿರಾ ಧ್ವನಿಯ ಹೋಲಿಕೆ ಇದೆ ಎಂದು ಕ್ಯಾಷಿಯರ್ ಹೇಳುತ್ತಾರೆ. ತಾನು  ಫೋನ್ ಮಾಡಿಲ್ಲ ಎಂಬುದು ಇಂದಿರಾಗೆ ಪಕ್ಕಾ ಇತ್ತು. ಹಾಗಾದರೆ ಇಂದಿರಾ ಬೆಡ್ ರೂಂನಿಂದ ಬ್ಯಾಂಕ್‍ಗೆ  ಫೋನ್ ಮಾಡಿದ ಆ ಹೆಣ್ಣು ಧ್ವನಿ ಯಾರದು? ಅದ್ಯಾರದ್ದು ಅಂತ ಆಮೇಲೆ ಇಂದಿರಾಗೆ ಗೊತ್ತಾಯಿತೇ? ಗೊತ್ತಾದ ಮೇಲೆ ಯಾರ ಮುಂದೆಯೂ ಅದನ್ನು ಹೇಳಿಕೊಳ್ಳಲಾಗದ ಉಭಯಸಂಕಟಕ್ಕೆ ಇಂದಿರಾ ಸಿಲುಕಿದರೇ? ಹೌದು ಎನ್ನುವುದಕ್ಕೆ ಹಲವಾರು ಪುರಾವೆಗಳು ಸಿಗುತ್ತವೆ.

ಕ್ಯಾಷಿಯರ್ ಮಲ್ಹೋತ್ರಾ ಕ್ಯಾಶ್ ಡ್ರಾ ಮಾಡಿ ಕೊಟ್ಟು ಕಳಿಸಿದ್ದು ಗುಪ್ತಚರ ದಳದ ತನಿಖೆಯಿಂದ ಪ್ರೂವ್ ಆಯಿತು. ಮಲ್ಹೋತ್ರಾ ತನಿಖಾಧಿಕಾರಿಗಳ ಮುಂದೆ ನೀಡಿದ ಹೇಳಿಕೆ ಒಂದೇ-“ ನಾನು ಇಂದಿರಾರ  ಫೋನ್ನಿಂದ ಕರೆ ಸ್ವೀಕರಿಸಿದ್ದು ನಿಜ. ಅದು ಇಂದಿರಾರ ಧ್ವನಿಯ ಹಾಗೇ ಇತ್ತು”. ಇಂದಿರಾ ಬ್ಯಾಂಕ್‍ಗೆ  ಫೋನ್ ಮಾಡಿಲ್ಲ ಎಂದ ಮೇಲೆ ಮುಂದೆ ಅನುಮಾನದ ಬೆರಳು ಹೊರಳುವುದು ನಗರವಾಲಾ ಕಡೆಗೆ. ತರ್ಕ ಮಾಡುತ್ತ ಹೋದರೆ ನಗರವಾಲಾ ಇರಲಿಕ್ಕಿಲ್ಲ ಎಂದು ಒಳಮನಸ್ಸು ಹೇಳುತ್ತದೆ. ಹಾಗಾದರೆ ಮತ್ಯಾರು ಎಂಬ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ.

ಬಹುಶಃ ನಿಜ ಹಕೀಕತ್ ಏನೆಂಬುದು ಇಂದಿರಾಗೂ ಗೊತ್ತಿತ್ತು. ಯಾಕೆ ಗೊತ್ತೇ? ಮೋಸದಿಂದ ಹಣ ಡ್ರಾ ಮಾಡಿರುವುದು ಗೊತ್ತಾದ ಕೆಲವೇ ಘಂಟೆಗಳಲ್ಲಿ ಮಲ್ಹೋತ್ರಾ ಮತ್ತು ನಗರವಾಲಾ ಇಬ್ಬರ ಬಂಧನವೂ ಆಗುತ್ತದೆ. ಪೊಲೀಸ್ ಠಾಣೆಯಲ್ಲೇ ಗೌಪ್ಯ ವಿಚಾರಣೆಯ ಶಾಸ್ತ್ರ ಮುಗಿಸಲಾಗುತ್ತದೆ. ಅದರ ಬೆನ್ನಲ್ಲೇ ತನಿಖಾ ಪ್ರಕ್ರಿಯೆಯನ್ನು ಬರ್ಖಾಸ್ತುಗೊಳಿಸಲು ಇಂದಿರಾ ಮೊಗಮ್ಮಾಗಿ ಸೂಚನೆ ಕೊಡುತ್ತಾರೆ. ಹಾಗಿದ್ದರೆ ಇದಕ್ಕೆಲ್ಲ ಏನು ಕಾರಣ? ಹಣ ಡ್ರಾ ಮಾಡಿದ ಸುದ್ದಿ ತಿಳಿದು ದಂಗಾದ ಇಂದಿರಾ ತಕ್ಷಣ ತನಿಖೆಗೆ ಆದೇಶ ಮಾಡುತ್ತಾರೆ. ತನಿಖೆಯ ವೇಳೆ ಪ್ರಾಥಮಿಕ ಮಾಹಿತಿ ಸಿಗುತ್ತಿದ್ದಂತೆ “ಸಾಕು ನಿಲ್ಲಿಸಿ ತನಿಖೆಯನ್ನು” ಎಂದು ಅದೇ ಇಂದಿರಾ ಹೇಳುತ್ತಾರೆ ಅಂದರೆ ಏನರ್ಥ? ಇಂದಿರಾಗೆ ತೀರಾ ಹತ್ತಿರದಲ್ಲಿರುವವರು ಆ ಘಟನೆಯ ಹಿಂದಿದ್ದಾರೆಂದು ಊಹಿಸಬಹುದಲ್ಲವೇ.

ಅಚ್ಚರಿಯ ಸಂಗತಿ ಎಂದರೆ ನಗರವಾಲಾ ಪ್ರಕರಣದ ಗಂಭೀರ ತನಿಖೆಗೆ ಮುಂದೆಂದೂ ಇಂದಿರಾ ತಯಾರಾಗುವುದಿಲ್ಲ. ಪೊಲೀಸ್ ಅಧಿಕಾರಿ ಡಿ.ಕೆ.ಕಶ್ಯಪ್ ನೇತೃತ್ವದಲ್ಲಿ ಒಂದು ಕಣ್ತೋರಿಕೆಯ ತನಿಖಾ ತಂಡ ರಚಿಸಿದರಾದರೂ ತಕ್ಷಣ ತನಿಖೆ ಸಾಕು ಎಂಬ ತೀರ್ಮಾನಕ್ಕೆ ಇಂದಿರಾ ಬಂದುಬಿಡುತ್ತಾರೆ. ಅಷ್ಟೇ ಸಾಲದ್ದಕ್ಕೆ ಸ್ವತಃ ಇಂದಿರಾ ಸೂಚನೆ ಮೇರೆಗೆ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ತನಿಖಾಧಿಕಾರಿ ಡಿ.ಕೆ.ಕಶ್ಯಪ್ ಮುಂದೆ ಕೆಲವೇ ದಿನಗಳಲ್ಲಿ ಕಾರು ಅಪಘಾತದಲ್ಲಿ ಸಾವನ್ನಪ್ಪುತ್ತಾರೆ. ಮತ್ತೊಂದು ಅನುಮಾನಾಸ್ಪದ ಸಾವು ಅಷ್ಟೆ.

ಮುಂದೆ 1977ರ ಜೂನ್ 19ರಂದು ಆಗಿನ ಜನತಾ ಪಾರ್ಟಿ ಸರ್ಕಾರ ಜಸ್ಟಿಸ್ ಪಿ.ಜಗನ್‍ಮೋಹನ ರೆಡ್ಡಿ ನೇತೃತ್ವದಲ್ಲಿ ವಿಚಾರಣಾ ಸಮಿತಿ ನೇಮಕ ಮಾಡುತ್ತದೆ. ಆದರೆ ಆ ಸಮಿತಿಯಿಂದಲೂ ಪ್ರಕರಣದ ಸತ್ಯಾಂಶ ಹೊರಬರುವುದೇ ಇಲ್ಲ. ಬದಲಾಗಿ ಪ್ರಕರಣಕ್ಕೆ ಸಂಬಂಧಿಸಿ ಒಂದಿಷ್ಟು ವಿಷಯಗಳನ್ನು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿ ಜಸ್ಟಿಸ್ ರೆಡ್ಡಿ ಸುಮ್ಮನಾಗುತ್ತಾರೆ.

ಜಗನ್‍ಮೋಹನ ರೆಡ್ಡಿ ಸಮಿತಿ ಕಲೆಹಾಕಿದ ಒಂದು ಅಚ್ಚರಿಯ ಮಾಹಿತಿಯನ್ನು ಇಲ್ಲಿ ಉಲ್ಲೇಖಿಸಲೇಬೇಕು. ಏನೆಂದರೆ ಯಾವ ಬ್ಯಾಂಕ್ ಶಾಖೆಯಿಂದ ಇಂದಿರಾ ಹೆಸರಲ್ಲಿ ದುಡ್ಡು ಡ್ರಾ ಆಗಿರುತ್ತದೋ ಆ ಶಾಖೆಯಲ್ಲಿ ಇಂದಿರಾರ ಬ್ಯಾಂಕ್ ಅಕೌಂಟೇ ಇರಲಿಲ್ಲ! ಇದು ಇಡೀ ಪ್ರಕರಣವನ್ನು ಮತ್ತಷ್ಟು ಗೋಜಲಾಗಿಸುತ್ತದೆ. ಹಣ ಲಪಟಾಯಿಸಿದ ಪ್ರಕರಣಕ್ಕೆ ಜೈಲು ಸೇರಿದ್ದ ರುಸ್ತಮ್ ನಗರವಾಲಾ, ಜಸ್ಟಿಸ್ ರೆಡ್ಡಿ ಸಮಿತಿ ಮುಂದೆ ಕೆಲ ಸತ್ಯಾಂಶಗಳನ್ನು ನಿವೇದಿಸಿಕೊಳ್ಳಲು ಬಯಸುತ್ತಾರೆ. ಜೈಲಿಂದಲೇ ನ್ಯಾ.ಜಗನ್‍ಮೋಹನ ರೆಡ್ಡಿಯವರಿಗೆ ಪತ್ರ ಬರೆದು ಆ ದಿನ ಏನೇನಾಯಿತು, ಯಾಕೆ ಹಾಗಾಯಿತು ಎಂಬುದನ್ನು ಖುದ್ದಾಗಿ ಹೇಳಿಕೊಳ್ಳಲು ಒಂದು ಅವಕಾಶ ಕೊಡಿ ಅಂತ ಕೇಳಿಕೊಳ್ಳುತ್ತಾರೆ. ಆದರೆ ಅಂತಹ ಅವಕಾಶ ನೀಡಲು ಜಸ್ಟಿಸ್ ರೆಡ್ಡಿ ನಿರಾಕರಿಸುತ್ತಾರೆ.

ನಗರವಾಲಾ ಪತ್ರಕ್ಕೆ ಜಸ್ಟಿಸ್ ಪಿ.ಜಗನ್‍ಮೋಹನ ರೆಡ್ಡಿ ಏನು ಹೇಳಿದರು ಗೊತ್ತೇ? “ಪತ್ರದಲ್ಲಿ ನಗರವಾಲಾ ಉಲ್ಲೇಖಿಸಿದ ಅಂಶಗಳಿಗೆ ಯಾವುದೇ ಪೂರಕ ಸಾಕ್ಷೃ ಇಲ್ಲದೇ ಇರುವುದರಿಂದ ಆ ಹೇಳಿಕೆಯನ್ನು ತಿರಸ್ಕರಿಸಬೇಕು” ಎಂದುಬಿಟ್ಟರು. ಹಾಗಿದ್ದರೆ ನಗರವಾಲಾ ಪತ್ರದಲ್ಲಿ ಏನು ಹೇಳಿದ್ದರು, ಯಾರ ಕೈವಾಡದ ಬಗ್ಗೆ ಹೇಳಿದ್ದರು. ಬ್ಯಾಂಕ್‍ಗೆ ಹೋಗಿ ದುಡ್ಡು ತರಲು ಹೇಳಿದವರಾರು, ಕ್ಯಾಷಿಯರ್‍ಗೆ  ಫೋನ್ ಮಾಡಿ ದುಡ್ಡು ಕಳಿಸಿ ಅಂತ ಹೇಳಿದ ಹೆಣ್ಣು ಧ್ವನಿ ಯಾರದ್ದು ಅನ್ನುವುದನ್ನೆಲ್ಲ ಅವರು ತೋಡಿಕೊಂಡಿದ್ದರೇ? ಕೊನೆಗೂ ಸತ್ಯ ಗೊತ್ತಾಗುವುದಿಲ್ಲ. ಒಮ್ಮೆ ನಗರವಾಲಾ ಅಹವಾಲು ಹೇಳಿಕೊಳ್ಳುವುದಕ್ಕೆ ಅವಕಾಶ ನೀಡಿದ್ದರೆ ಪ್ರಕರಣದ ಅಸಲಿ ವಿಚಾರ ಹೊರಬರುತ್ತಿತ್ತೋ ಏನೋ? ಅದು ಹೊರಬಂದರೆ ದೇಶದಲ್ಲಿ ಅಲ್ಲೋಲಕಲ್ಲೋಲ ಆಗುತ್ತಿತ್ತೇ? ಆ ಪ್ರಕರಣದ `ಸೂತ್ರಧಾರ’ರು ಯಾರೆಂಬುದು ಬಹಿರಂಗವಾಗಿದ್ದರೆ ನಗರವಾಲಾ ಪ್ರಕರಣಕ್ಕೆ ಮಾತ್ರವಲ್ಲ, ಮುಂದೆ ಘಟಿಸಿದ ಇಂದಿರಾ ಹತ್ಯೆ ಪ್ರಕರಣಕ್ಕೂ ಹೊಸ ತಿರುವು ಸಿಕ್ಕರೂ ಸಿಗುವ ಚಾನ್ಸ್ ಇತ್ತು. ಆದರೆ ಅದ್ಯಾವುದಕ್ಕೂ ಅವಕಾಶ ಸಿಗುವುದೇ ಇಲ್ಲ. ಮುಂದೆ ಕೆಲವೇ ದಿನಗಳಲ್ಲಿ ನಗರವಾಲಾ ಹೃದಯಾಘಾತದಿಂದ ಜೈಲಲ್ಲೇ ಕೊನೆಯುಸಿರೆಳೆಯುತ್ತಾರೆ. ಅಲ್ಲಿಗೆ ಪ್ರಕರಣಕ್ಕೆ ಕೊನೇ ಮೊಳೆ ಹೊಡೆದಂತಾಗುತ್ತದೆ.

ನಗರವಾಲಾ ಪ್ರಕರಣದ ಹೂರಣ ಹೊರಗೆಳೆಯುವ ಪ್ರಯತ್ನ ಅಷ್ಟಕ್ಕೇ ನಿಲ್ಲುವುದಿಲ್ಲ. ಡಿ.ಕೆ.ಕಶ್ಯಪ್ ತನಿಖಾ ತಂಡ ಮತ್ತು ಜಸ್ಟಿಸ್ ಜಗನ್‍ಮೋಹನ ರೆಡ್ಡಿ ಸಮಿತಿ ಕಲೆ ಹಾಕಿದ ಮಾಹಿತಿ ಕೊಡುವಂತೆ ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಪದಮ್ ರೋಷಾ ಮೂರ್ನಾಲ್ಕು ವರ್ಷಗಳ ಹಿಂದೆ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸುತ್ತಾರೆ. ಅದಕ್ಕೆ ಸರ್ಕಾರ ಕೊಟ್ಟ ಉತ್ತರ ಏನು ಗೊತ್ತೇ? 30 ವರ್ಷಗಳಷ್ಟು ಹಿಂದಿನ ಘಟನೆಯ ಮಾಹಿತಿಯನ್ನು ಕೊಡುವುದಕ್ಕೆ ಮಾಹಿತಿ ಹಕ್ಕು ಕಾಯ್ದೆಯಲ್ಲಿ ಅವಕಾಶ ಇಲ್ಲ ಎಂಬ ಸಬೂಬು ಕೊಡಲಾಗುತ್ತದೆ. ಹಾಗಿದ್ದರೆ 30 ವರ್ಷದಷ್ಟು ಹಳೆಯ ಪ್ರಕರಣದ ಮಾಹಿತಿ ಕೊಡಬಾರದು ಅಂತ ನಿಯಮ ಇದೆಯಾ? ಕೇಳುವವರು ಹೇಳುವವರು ಯಾರು? ಒಂದಂತೂ ಖರೆ, ಇಂದಿರಾ ಆಯಿತು, ಸಂಜಯ್ ಆಯಿತು, ರಾಜೀವ್ ಆಯಿತು, ಪೈಲಟ್, ಸಿಂಧಿಯಾ… ಕಳೆದುಕೊಂಡ ರತ್ನಗಳು ಒಂದೇ ಎರಡೇ? ಹಾಗಿದ್ದರೆ ಈ ಘನಘೋರ ಹಾನಿ ಸರಣಿಗೆ ಕೊನೆ ಯಾವಾಗ?

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top