ದೇಸಿ ರಕ್ಷಣೆಗೆ ಮಣೆ

101 ರಕ್ಷಣಾ ಸಾಮಗ್ರಿಗಳ ಆಮದು ನಿಷೇಧ ದೇಶೀಯ ಉತ್ಪಾದನೆಗೆ ಒತ್ತು | ಕೇಂದ್ರದ ದಿಟ್ಟ ಹೆಜ್ಜೆ.

ಹೊಸದಿಲ್ಲಿ: ರಕ್ಷ ಣಾ ಸಾಮಾಗ್ರಿಗಳ ದೇಶೀಯ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಬಂದೂಕು, ರೇಡಾರ್‌, ಲಘು ಯುದ್ಧ ಹೆಲಿಕಾಪ್ಟರ್‌ ಸೇರಿದಂತೆ 101 ರಕ್ಷಣಾ ಉತ್ಪನ್ನಗಳ ಆಮದಿನ ಮೇಲೆ ಕೇಂದ್ರ ಸರಕಾರ ನಿರ್ಬಂಧ ಹೇರಿದೆ.

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಈ ವಿಷಯವನ್ನು ಪ್ರಕಟಿಸಿದ್ದಾರೆ. ‘‘ಪ್ರಧಾನಿ ಮೋದಿಯವರ ‘ಆತ್ಮ ನಿರ್ಭರ ಭಾರತ’ ಕರೆಯಿಂದ ಪ್ರೇರಣೆಗೊಂಡು ಹಾಗೂ ರಕ್ಷ ಣಾ ಸಾಮಾಗ್ರಿಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ,’’ ಎಂದಿದ್ದಾರೆ.

‘‘2020ರಿಂದ 2024ರ ಅವಧಿಯಲ್ಲಿ ಹಂತಹಂತವಾಗಿ ಆಮದು ಜಾರಿಗೆ ತರಲು ಉದ್ದೇಶಿಸಲಾಗಿದೆ. ‘ನೆಗೆಟಿವ್‌ ಆರ್ಮ್ಸ್‌ ಲಿಸ್ಟ್‌’ನಿಂದಾಗಿ ದೇಶೀಯ ಸಂಸ್ಥೆಗಳಿಗೆ ಈ ಸಾಮಗ್ರಿಗಳ ಉತ್ಪಾದನೆಗೆ ಕೋಟ್ಯಂತರ ರೂಪಾಯಿ ಗುತ್ತಿಗೆ ದೊರೆಯಲಿದೆ’’ ಎಂದು ರಾಜನಾಥ್‌ ಹೇಳಿದ್ದಾರೆ.

1.2 ಲಕ್ಷ ಕೋಟಿ ರೂ.
2014-19ರ ಅವಧಿಯಲ್ಲಿ ಭಾರತದ ರಕ್ಷಣಾ ಸಾಮಗ್ರಿಯ ಆಮದು ಅಂದಾಜು ಮೌಲ್ಯ 4 ಲಕ್ಷ ಕೋಟಿ ರೂ.
ಆಮದು ನಿಷೇಧದಿಂದ 6-7 ವರ್ಷದಲ್ಲಿ ದೇಶಿಯ ಕಂಪನಿಗಳಿಗೆ ದೊರೆಯಲಿರುವ ಗುತ್ತಿಗೆ ಮೊತ್ತ
++++++++++++++++

ಉದ್ದೇಶವೇನು?
-ರಕ್ಷಣಾ ಸಾಮಗ್ರಿ, ಶಸ್ತ್ರಾಸ್ತ್ರಗಳಿಗೆ ವಿದೇಶಿ ಅವಲಂಬನೆ ತಗ್ಗಿಸುವುದು
– ಸ್ಥಳೀಯವಾಗಿ ಈ ಉತ್ಪನ್ನಗಳ ತಯಾರಿಕೆಗೆ ಉತ್ತೇಜನ,
– ದೇಶೀಯ ವ್ಯಾಪಾರ- ವಹಿವಾಟು, ಉದ್ಯೋಗಾವಕಾಶ ಹೆಚ್ಚಳ
– ಮೋದಿ ಅವರ ‘ಆತ್ಮ ನಿರ್ಭರ ಭಾರತ್‌’ ಕನಸು ಸಾಕಾರಕ್ಕೆ ನೆರವು
+++++++++++++++++

ಆಮದು ನಿರ್ಬಂಧ

– ಸಮೀಪ ಗುರಿಯ, ದೂರಗಾಮಿ ಕ್ಷಿಪಣಿ
– ಎಳೆದೊಯ್ಯುವ ಗನ್‌
– ಹಡಗಿನಿಂದ ಹಾರಿಸಬಹುದಾದ ಕ್ಷಿಪಣಿ
-ಮಲ್ಟಿ ಬ್ಯಾರಲ್‌ ರಾಕೆಟ್‌ ಲಾಂಚರ್‌
-155 ಎಂಎಂ ಹಗುರ ಹೊವಿಟ್ಸರ್‌
– ಲಘು ಮೆಷಿನ್‌ಗನ್‌, ಬಂದೂಕುಗಳು
– ಶತ್ರು ಸ್ಥಳಾನ್ವೇಷಣೆ ವಿಮಾನಗಳು
-ಲಘು ಯುದ್ಧ ವಿಮಾನ, ಕಾಪ್ಟರ್‌
-ಲಘು ಸರಕು ಸಾಗಣೆ ವಿಮಾನ
– ಕ್ಷಿಪಣಿ ನಾಶಕ ಅಸ್ತ್ರಗಳು, ರೇಡಾರ್‌
– ಬಹು ಉದ್ದೇಶದ ಹಡಗುಗಳು
– ಬುಲೆಟ್‌ ಪ್ರೂಫ್‌ ಜಾಕೆಟ್‌

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top