ಮನೆ ಮದ್ದು, ಕೊರೊನಾಗೆ ಗುದ್ದು – ಕಷಾಯ ಮಾಡಿ ಕುಡಿಯಿರಿ, ಆರೋಗ್ಯವಾಗಿರಿ…

ವಿಕ ಸುದ್ದಿಲೋಕ ಬೆಂಗಳೂರು.

ರಾಜ್ಯದಲ್ಲಿ ಸಮುದಾಯದ ಮಟ್ಟದಲ್ಲಿ ಸೋಂಕು ಹರಡುತ್ತಿರುವುದು ಮತ್ತು ಲಕ್ಷ ಣರಹಿತ
ಸೋಂಕಿತರು ಹೆಚ್ಚುತ್ತಿರುವುದರಿಂದ ‘ಮನೆ ಆರೈಕೆ ಕ್ರಮ’ ಜಾರಿಗೊಳಿಸಲು ಸರಕಾರ ಚಿಂತನೆ
ನಡೆಸಿದೆ. ಅಂದರೆ ಜನರು ತಮ್ಮ ಆರೋಗ್ಯವನ್ನು ತಾವೇ ಕಾಪಾಡಿಕೊಳ್ಳುವ ಅನಿವಾರ್ಯತೆ
ಎದುರಾಗಿದೆ.

ಸೋಂಕಿತರು ‘ಮನೆ ಆರೈಕೆ’ಗೆ ಒಳಪಟ್ಟರೆ ಆರೋಗ್ಯ ವೃದ್ಧಿಗೆ ಕೆಲ ಕ್ರಮಗಳನ್ನು
ಅನುಸರಿಸಬೇಕಾಗುತ್ತದೆ. ಹಾಗೆಯೇ ಉಳಿದವರೂ ಕೂಡ ಸೋಂಕಿಗೆ ಒಳಗಾಗದಂತೆ ದೂರ ಇರಲು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕಾಗುತ್ತದೆ.

 

ಮನೆ ಮದ್ದು ಬಳಸಿ

ಅಮೃತಬಳ್ಳಿ, ಅಶ್ವಗಂಧ, ಬೇವು, ತುಳಸಿ, ಪುನರ್ನವ, ಮಂಜಿಷ್ಠವನ್ನು ಔಷಧಕ್ಕಿಂತ ಹೆಚ್ಚಾಗಿ ಖಾದ್ಯದ ರೂಪದಲ್ಲಿ ಬಳಸಿದರೆ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಒಂದು ಚಮಚ ಅಶ್ವಗಂಧ ಚೂರ್ಣವನ್ನು 200 ಮಿ.ಲೀ ಹಾಲು ಹಾಗೂ 200 ಮಿ.ಲೀ ನೀರಿನಲ್ಲಿ ಹಾಕಿ ಕುದಿಸಿ ಇಂಗಿಸಿ ಕುಡಿಯಬೇಕು. ಕೂಲ್‌ ಡ್ರಿಂಕ್ಸ್‌, ಫಾಸ್ಟ್‌ ಫುಡ್‌, ಸಂಸ್ಕರಿತ ಆಹಾರ ಸೇವಿಸಬಾರದು. ಹೆಚ್ಚಾಗಿ ಸಸ್ಯಾಹಾರ ಸೇವಿಸಿ. ಕಾಫಿ-ಟೀ ಬೇಡ. ರೋಗ ನಿರೋಧಕ ಶಕ್ತಿ ಹೆಚ್ಚಿದ್ದರೆ ರೋಗ ನಿವಾರಣೆ ಸುಲಭ. ಆಯುರ್ವೇದದತ್ತ ಗಮನಹರಿಸಿ. – ಡಾ. ಸಿ. ಎ. ಕಿಶೋರ್‌, ಭಾರತೀಯ ಆಯುರ್ವೇದ ಪ್ರತಿಷ್ಠಾನದ ಅಧ್ಯಕ್ಷ

ವ್ಯಾಯಾಮ ಅಗತ್ಯ

ಈ ಸಮಯದಲ್ಲಿ ಜಿಮ್‌, ವಾಕಿಂಗ್‌ ಕಷ್ಟ. ಹೀಗಾಗಿ ಸೂರ್ಯ ನಮಸ್ಕಾರ ಮಾಡಿ. ಶರೀರ ಬೆವರುವಂತೆ ಚಟುವಟಿಕೆ ನಡೆಸಿ. ಮನೆಯಲ್ಲೇ ಯೋಗ, ಸ್ಕಿಪ್ಪಿಂಗ್‌, ವ್ಯಾಯಾಮ ಮಾಡಿ. ಲಕ್ಷ ಣರಹಿತ ರೋಗಿಗಳಿಗೆ ಯೋಗ ಪ್ರಯೋಜನಕಾರಿ. ಮಾನಸಿಕ ಆರೋಗ್ಯ ಉತ್ತಮಪಡಿಸಿಕೊಳ್ಳಲು ಧ್ಯಾನ, ಪ್ರಾಣಾಯಾಮ ಮಾಡಿ. ನಿತ್ಯ ಒಂದು ಗಂಟೆ ವ್ಯಾಯಾಮಕ್ಕೆ ಮೀಸಲಿಡಿ. – ಡಾ. ಆರ್‌. ನಾಗರತ್ನ, ‘ಎಸ್‌-ವ್ಯಾಸ’ ಸಂಸ್ಥೆಯ ವೈದ್ಯಕೀಯ ನಿರ್ದೇಶಕಿ

ಕಷಾಯ ಮಾಡಿ ಕುಡಿಯಿರಿ

ಒಂದು ಲೀಟರ್‌ ನೀರು ಕುದಿಸಿದ ಬಳಿಕ ಐದಾರು ತುಳಸಿ ಎಲೆ ಹಾಕಿ ತಣ್ಣಗಾದ ನಂತರ ಕುಡಿಯಬೇಕು. ಒಂದು ಲೋಟ ಹಾಲಿಗೆ ಕಾಲು ಚಮಚ ಅಥವಾ ಅರ್ಧ ಚಮಚ ಅರಿಶಿನ ಪುಡಿ ಹಾಕಿ ಮೂರು ನಿಮಿಷ ಕುದಿಸಿ ಸೋಸಿ ಕುಡಿಯಬೇಕು. ರುಚಿಗೆ ಸಕ್ಕರೆ, ಬೆಲ್ಲಹಾಕಬಹುದು. ಇವರೆಡೂ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ನೆಲನೆಲ್ಲಿಗಿಡ (ಎಲೆ, ಬೇರು ಬಳಸಬಹುದು), ಭದ್ರಮುಷ್ಠಿ, ಅಮೃತಬಳ್ಳಿ ಇವುಗಳಲ್ಲಿಯಾವುದಾದರೂ ಒಂದನ್ನು ತೆಗೆದುಕೊಂಡು ಒಂದು ಲೋಟ
ನೀರಿಗೆ ಹಾಕಿ ಕುದಿಸಿ ಕುಡಿಯಬೇಕು. ಇದು ವೈರಾಣು ನಾಶದ ಸಾಮರ್ಥ್ಯ‌ ಹೆಚ್ಚಿಸುತ್ತದೆ. – ಡಾ. ಗಿರಿಧರ ಕಜೆ, ಆಯುರ್ವೇದ ತಜ್ಞ , ಪ್ರಶಾಂತಿ ಆಯುರ್ವೇದಿಕ್‌ ಸೆಂಟರ್‌.

 

ಆಯುಷ್‌ ಸಲಹೆ ಏನು?

– ಆಯುಷ್‌ ಇಲಾಖೆಯು ರೋಗ ನಿರೋಧಕ ಶಕ್ತಿ ವೃದ್ಧಿಗೆ ಮೂರು ಕ್ರಮಗಳನ್ನು ತಿಳಿಸಿದೆ.

– ಪ್ರತಿ ದಿನ ಬೆಳಗ್ಗೆ 10 ಗ್ರಾಂ (1 ಚಮಚ) ಚ್ಯವನಪ್ರಾಶ ಸೇವಿಸಬೇಕು.

– ತುಳಸಿ, ದಾಲ್ಚಿನ್‌, ಕರಿಮೆಣಸು, ಒಣಶುಂಠಿ ಸೇರಿಸಿ ನೀರಿನಲ್ಲಿ ಕುದಿಸಿ ಕಷಾಯ
ತಯಾರಿಸಿ ದಿನಕ್ಕೆ ಒಂದು ಅಥವಾ ಎರಡು ಬಾರಿ (15-20 ಮಿ.ಲೀ.) ಕುಡಿಯಬೇಕು.

– ಅರ್ಧ ಚಮಚ ಅರಿಶಿನ ಪುಡಿಯನ್ನು 150 ಮಿ.ಲೀ ಬಿಸಿ ಹಾಲಿನಲ್ಲಿ ಸೇರಿಸಿ ದಿನಕ್ಕೆ
ಒಂದು ಅಥವಾ ಎರಡು ಬಾರಿ ಕುಡಿಯಬೇಕು.

 

ನೀವೇನು ಮಾಡುತ್ತಿದ್ದೀರಿ?

ಕೊರೊನಾ ಸೋಂಕಿನಿಂದ ದೂರ ಇರಲು ನಾಗರಿಕರು ಹಲವಾರು ಎಚ್ಚರಿಕೆ ಕ್ರಮಗಳನ್ನು
ಕೈಗೊಳ್ಳುತ್ತಿದ್ದಾರೆ. ಇವುಗಳಲ್ಲಿಮನೆ ಮದ್ದು ಬಳಕೆಯೂ ಒಂದು. ಇದು ರೋಗ ನಿರೋಧಕ
ಶಕ್ತಿ ಹೆಚ್ಚಿಸಿ ಸೋಂಕಿನಿಂದ ಕಾಪಾಡುತ್ತದೆ. ನೀವು ನಿಮ್ಮ ಮನೆಯಲ್ಲಿಯಾವ ಮನೆ ಮದ್ದು
ಬಳಸುತ್ತಿದ್ದೀರಿ? ಇದರಿಂದ ಪ್ರಯೋಜನವೇನು? ಈ ಉಪಯುಕ್ತ ಸಂಗತಿಯನ್ನು ಬರೆದು
ಇತರರೊಂದಿಗೆ ಹಂಚಿಕೊಳ್ಳಿ. ಉಳಿದವರನ್ನೂ ಸೋಂಕಿನಿಂದ ರಕ್ಷಿಸಿ.

ವಾಟ್ಸ್‌ ಆಪ್ ನಂಬರ್- 6366422240

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top