-ವಿದ್ಯಾರ್ಥಿಗಳಿಗೂ ಶಿಕ್ಷಣ ಸಂಸ್ಥೆಗಳಿಗೂ ‘ಮೆಂಟರ್’ ವ್ಯವಸ್ಥೆ ಕಲ್ಪಿಸುವುದು ಸರಕಾರದ ನೀತಿಯಾಗಬೇಕು.
ಪ್ರೊ.ಎಂ.ಆರ್.ದೊರೆಸ್ವಾಮಿ.
ವೈಯಕ್ತಿಕ ಮತ್ತು ಸಾಂಸ್ಥಿಕ ಸಾಮರ್ಥ್ಯ ಹಾಗೂ ಸಬಲೀಕರಣಗೊಳಿಸುವುದೇ ಕ್ರಿಯಾಶೀಲ ಶಿಕ್ಷ ಣ ಸಂಸ್ಥೆಗಳ ಶ್ರೇಷ್ಠತೆಯ ಕುರುಹು. ಅವು ಶೈಕ್ಷ ಣಿಕ ಸೇವೆಯ ಗುಣಮಟ್ಟ ಮತ್ತು ಸಂಸ್ಥೆಗಳ ಫಲಿತಾಂಶವನ್ನು ನಿರೂಪಿಸುತ್ತವೆ. ಮಾರ್ಗದರ್ಶನದ ವಿಭಿನ್ನ ಆಯಾಮಗಳನ್ನು ಮತ್ತು ಅದನ್ನು ಮಾನವ ಕಾರ್ಯಕ್ಷ ಮತೆ ಮತ್ತು ಸಾಂಸ್ಥಿಕ ಸೇವೆಗಳ ವರ್ಧಕವಾಗಿ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಅನ್ವೇಷಿಸಲು ಇಚ್ಛಿಸುತ್ತೇನೆ.
(ಮಾರ್ಗದರ್ಶಕ ಪದವನ್ನು ಗ್ರೀಕ್ ಮೂಲದ ಪದವಾಗಿಯೇ ಗ್ರಹಿಸಿದರೂ ಅಮೆರಿಕ ಮತ್ತು ಯುರೋಪಿಯನ್ ಶೈಕ್ಷ ಣಿಕ ಸಂಸ್ಥೆಗಳು 1970ರ ದಶಕದಲ್ಲಿ ಅದನ್ನು ತಮ್ಮದಾಗಿಸಿಕೊಂಡವು. ಭಾರತದ ಪ್ರಾಚೀನ ‘ಗುರು-ಶಿಷ್ಯ’ ಪರಂಪರೆಯಲ್ಲಿ ಕೂಡ ಇದರ ಮಹತ್ವಕ್ಕೇನೂ ಕೊರತೆ ಇಲ್ಲ. ಮೆಂಟರ್ ಪದದ ಜನಪ್ರಿಯತೆಯಿಂದಾಗಿ ನಾವು ಅದನ್ನು ಸುಲಭ ಸಂವಹನವಾಗಿ ಬಳಸುತ್ತಿದ್ದೇವೆ.
ಮೆಂಟರ್ ಪದಕ್ಕೆ ಅನೇಕ ವ್ಯಾಖ್ಯಾನಗಳಿವೆ. ಹೆಚ್ಚು ಜ್ಞಾನವುಳ್ಳ ವ್ಯಕ್ತಿಯಿಂದ ಕಲಿಯುವವ ಅಥವಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಜ್ಞಾನದ ವ್ಯವಸ್ಥೆ ಎನಿಸಿಕೊಳ್ಳುತ್ತದೆ. ಸಮಕಾಲೀನ ಸನ್ನಿವೇಶದಲ್ಲಿ ಮೆಂಟರ್‌ಗಳು ಶೈಕ್ಷ ಣಿಕ ಪೋಷಕರಂತೆ (ಮನೆಯಲ್ಲಿರುವ ಜೈವಿಕ ಪೋಷಕರಿಗೆ ಹೋಲಿಸಿದರೆ) ಕಾರ್ಯ ನಿರ್ವಹಿಸುತ್ತಾ, ಶೈಕ್ಷ ಣಿಕ ಸಂಸ್ಥೆಯಲ್ಲಿನ ಅವರ ಶೈಕ್ಷಣಿಕ ಪ್ರಗತಿಯನ್ನು ನಿರ್ವಹಣೆ ಮಾಡಲು ವಿದ್ಯಾರ್ಥಿ ಅಥವಾ ವಿದ್ಯಾರ್ಥಿಗಳ ಗುಂಪನ್ನು ನಿರ್ವಹಿಸುತ್ತಾರೆ.
ಮೆಂಟರ್ ಕೇವಲ ಶೈಕ್ಷಣಿಕ ನೆರವು ನೀಡುವುದು ಮಾತ್ರವಲ್ಲದೆ, ಮಾನಸಿಕ ಸಲಹೆ ಸೇರಿದಂತೆ ಎಲ್ಲ ರೀತಿಯ ಬೆಂಬಲವನ್ನು ನೀಡುತ್ತಾನೆ. ವಿದ್ಯಾರ್ಥಿಯು ಅವನ/ಅವಳ ಪೂರ್ಣ ಸಾಮರ್ಥ್ಯವನ್ನು ನಿರ್ವಹಿಸಲು ಸಹಾಯ ಮಾಡುತ್ತಾನೆ. ಮೆಂಟರ್ ಒಂದೆಡೆ ವಿದ್ಯಾರ್ಥಿ ಮತ್ತು ಮತ್ತೊಂದೆಡೆ ಪೋಷಕರು ಹಾಗೂ ಶೈಕ್ಷ ಣಿಕ ಸಂಸ್ಥೆಯ ಮುಖ್ಯಸ್ಥರ ನಡುವೆ ಸಂವಹನದ ಸೇತುವೆಯಾಗಿ ಕೆಲಸ ಮಾಡುವ ಮೂಲಕ, ವಿದ್ಯಾರ್ಥಿಯಿಂದ ಗರಿಷ್ಠ ಲಾಭ ಹೊರ ತೆಗೆಯಲು ಪ್ರಯತ್ನಿಸುತ್ತಾನೆ.
ವಿದ್ಯಾರ್ಥಿಗಳ ಕಾರ್ಯಕ್ಷ ಮತೆಯ ಮೇಲೆ ಮಾರ್ಗದರ್ಶನದ ಸಕಾರಾತ್ಮಕ ಪರಿಣಾಮವನ್ನು ಗಮನಿಸಿದರೆ, ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಅದರಲ್ಲೂವಿ ಶೇಷವಾಗಿ ಸರಕಾರಿ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಈ ವ್ಯವಸ್ಥೆಯ ಅಗತ್ಯ ಹೆಚ್ಚಾಗಿದ್ದು, ಅದನ್ನು ಕಡ್ಡಾಯಗೊಳಿಸುವುದು ರಾಜ್ಯ ಸರಕಾರದ ನೀತಿಯಾಗಬೇಕು.
ಪ್ರಮುಖ ಅಂಶಗಳು
ಎ) ಎಲ್ಲಸರಕಾರಿ ಮತ್ತು ಅನುದಾನಿತ ಶೈಕ್ಷ ಣಿಕ ಸಂಸ್ಥೆಗಳಲ್ಲಿ ಮಾರ್ಗದರ್ಶಕತ್ವ (ಮೆಂಟರ್‌ಶಿಪ್) ಅಳವಡಿಸಿಕೊಳ್ಳುವುದು ಸರಕಾರದ ನೀತಿಯಾಗಬೇಕು.
ಬಿ) ಒಬ್ಬ ಶಿಕ್ಷಕ ಅಥವಾ ಮೆಂಟರ್‌ಗೆ 20 ವಿದ್ಯಾರ್ಥಿಗಳ ಗುಂಪನ್ನು ಒದಗಿಸುವುದೇ ಹೆಚ್ಚು ಸೂಕ್ತ ಎನಿಸುತ್ತದೆ.
ಸಿ) ಶೈಕ್ಷ ಣಿಕ ಸಂಸ್ಥೆಯಲ್ಲಿ ವಿದ್ಯಾರ್ಥಿ ಪ್ರವೇಶ ಪಡೆದ ತಕ್ಷ ಣವೇ ಈ ಸಂಗತಿಗಳನ್ನು ಜಾರಿಗೆ ತರಲು ಮುಂದಾಗಬೇಕು.
ಡಿ) ಪ್ರತಿ ವಿದ್ಯಾರ್ಥಿಯ SWOC (Strengths, Weaknesses, Opportunities, Challenges) ಸಾಮರ್ಥ್ಯಗಳು, ದೌರ್ಬಲ್ಯಧಿಗಳು, ಅವಕಾಶಗಳು, ಸವಾಲುಗಳು) ವಿಶ್ಲೇಷಿಸಲು ಮತ್ತು ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿಗಾಗಿ ಕ್ರಿಯಾ ಯೋಜನೆಯನ್ನು ರೂಪಿಸಲು ಮೆಂಟರ್ ಪ್ರತಿ ತಿಂಗಳಿಗೊಮ್ಮೆ ಮೌಲ್ಯಮಾಪನ ಸಭೆಗಳನ್ನು ನಡೆಸಬೇಕು. ಉದಾಹರಣೆಗೆ- ನಿಧಾನಗತಿಯ ಕಲಿಯುವವರು, ಭಾವನಾತ್ಮಕವಾಗಿ ಸವಾಲು ಹೊಂದಿರುವ, ದೈಹಿಕವಾಗಿ ಸವಾಲು ಹೊಂದಿರುವವರು, ಪ್ರತಿಭಾವಂತರು, ಅಥ್ಲೆಟಿಕ್ಸ್ ಮತ್ತು ಕ್ರೀಡೆಗಳತ್ತ ಒಲವು ತೋರುವವರನ್ನು ಒಳಗೊಳ್ಳಲು ಸರಿಯಾದ ಕ್ರಮಗಳನ್ನು ರೂಪಿಸಿಕೊಳ್ಳಬೇಕಾಗುತ್ತದೆ.
ಇ) ವಿದ್ಯಾರ್ಥಿಗಳಿಗೆ ವೃತ್ತಿಪರ ಮಾನಸಿಕ ಸಮಾಲೋಚನೆ ಸೇವೆ ಒದಗಿಸಬೇಕು. ಹಿಂದುಳಿದ ವಿದ್ಯಾರ್ಥಿಗಳು, ಬೇಗ ಕಲಿಯುವವರು, ಮಹಿಳಾ ಸಬಲೀಕರಣ, ಪ್ರದರ್ಶನದ ಕಲೆ ಮತ್ತು ಕ್ರೀಡೆಗಳಲ್ಲಿ ಪ್ರತಿಭೆಯನ್ನು ತೋರಿಸುವ ವಿದ್ಯಾರ್ಥಿಗಳತ್ತ ಸರಿಯಾದ ಗಮನ ಹರಿಸಬೇಕು.
ಎಫ್) ನಿರ್ದಿಷ್ಟ ಅವಧಿಯ ಎಲ್ಲ ರೀತಿಯ ಮೌಲ್ಯಮಾಪನ ವರದಿಗಳು ಮತ್ತು ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಶೈಕ್ಷ ಣಿಕ ಸಂಸ್ಥೆಗಳ ಮುಖ್ಯಸ್ಥರ ಗಮನಕ್ಕೆ ತರಬೇಕು. ಹಾಗೆಯೇ ಈ ಮಾಹಿತಿಯನ್ನು ಪೋಷಕರಿಗೂ ನೀಡಬೇಕು.
ಜಿ) ವಿದ್ಯಾರ್ಥಿಗಳು, ಪೋಷಕರು, ಮಾರ್ಗದರ್ಶಕ ಮತ್ತು ಸಂಸ್ಥೆಯನ್ನು ಒಳಗೊಂಡ ಜಾಲವನ್ನು ಸ್ಥಾಪಿಸುವ ಮೂಲಕ ಮಾರ್ಗದರ್ಶಕತ್ವದ ಗರಿಷ್ಠ ಫಲಿತಾಂಶವನ್ನು ಪಡೆಯುವುದಕ್ಕಾಗಿ ಮೆಂಟರ್ ಇಲ್ಲವೇ ಶೈಕ್ಷಣಿಕ ಸಂಸ್ಥೆಯ ಆಡಳಿತ ಮತ್ತು ಪೋಷಕರು ಇದರಲ್ಲಿ ತೊಡಗಿಸಿಕೊಳ್ಳಬೇಕು.
ಎಚ್) ಹಾಸ್ಟೆಲ್‌ಗೆ ಸಂಬಂಧಿಸಿದ ಅಥವಾ ವಿದ್ಯಾರ್ಥಿಯ ಇನ್ನಾವುದೇ ಸಮಸ್ಯೆಯನ್ನು ಮೆಂಟರ್ ಶೈಕ್ಷ ಣಿಕ ಸಂಸ್ಥೆಯ ಮುಖ್ಯಸ್ಥರ ಗಮನಕ್ಕೆ ತರಬೇಕು. ಆ ಮೂಲಕ ಈ ಸಮಸ್ಯೆಗಳನ್ನು ವಿದ್ಯಾರ್ಥಿಯ ಶೈಕ್ಷಣಿಕ ಸವಾಲುಗಳ ಮೇಲೆ ಮಾತ್ರ ಗಮನಹರಿಸುವಂತೆ ಅವುಗಳನ್ನು ಪರಿಹರಿಸಬಹುದು.
ಐ) ಸಾಮಾಜಿಕ ಹೊಣೆಗಾರಿಕೆಗಳನ್ನು ನಿಭಾಯಿಸುವ ಮೂಲಕ ಸಂಸ್ಥೆಯು ವಿದ್ಯಾರ್ಥಿಯ ಒಟ್ಟಾರೆ ಬೆಳವಣಿಗೆಗೆ ಬದ್ಧವಾಗಿರಬೇಕು. ಅಂತಿಮವಾಗಿ, ವಿದ್ಯಾರ್ಥಿಯನ್ನು ಸಬಲೀಕರಣಗೊಳಿಸುವುದು ಎಂದರೆ ಅಕ್ಷರ ಮತ್ತು ಉತ್ಸಾಹದ ಮೂಲಕ ರಾಷ್ಟ್ರದ ಸಬಲೀಕರಣವೇ ಆಗಿದೆ.
‘ಸಾಂಸ್ಥಿಕ ಮಾರ್ಗದರ್ಶನ’ (Institutional Mentoring) ವು ಸಾಮರ್ಥ್ಯ ವೃದ್ಧಿಯ ಹೊಸ ಆಯಾಮವಾಗಿದೆ. ಕರ್ನಾಟಕದ ಶಿಕ್ಷಣ ಸಂಸ್ಥೆಗಳನ್ನು ಸಶಕ್ತಗೊಳಿಸುವ ಒಂದು ಹೊಸ ಆಯಾಮವನ್ನು ಸೇರಿಸಲು ಮಾರ್ಗದರ್ಶನದ ಪರಿಕಲ್ಪನೆಯಡಿಯೇ ವಿಸ್ತರಿಸಬಹುದಾಗಿದೆ. ಅಂದರೆ, ಉನ್ನತ ಮಟ್ಟದ ಸಂಸ್ಥೆಗಳು (ಅವರ ಶೈಕ್ಷ ಣಿಕ ಪರಿಣತಿಯನ್ನು ಒದಗಿಸುವುದು) ಕೆಳ ಹಂತದ ಸಂಸ್ಥೆಗಳಿಗೆ ಮಾರ್ಗದರ್ಶಕ ರೀತಿಯಲ್ಲಿ ಕೆಲಸ ಮಾಡಬೇಕು.
ಈ ವ್ಯವಸ್ಥೆಯು ಮಾರ್ಗದರ್ಶನದ ಸಂಸ್ಥೆಗಳ ವಿಸ್ತರಿತ ಚಟುವಟಿಕೆಗಳಿಗೆ ಹೊಸ ಆಯಾಮವನ್ನು ಕಲ್ಪಿಸಬಹುದು. ಉದಾಹರಣೆಗೆ- ಪ್ರತಿಷ್ಠಿತ ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳು ತಮ್ಮ ತಜ್ಞತೆಯನ್ನು ಸಮಕಾಲೀನ ಶೈಕ್ಷಣಿಕ ಮೂಲಸೌಕರ್ಯಗಳನ್ನು ಒದಗಿಸಲು ಸರಕಾರಿ ಮತ್ತು ಅನುದಾನಿತ ಶಾಲೆಗಳು, ಕಾಲೇಜುಗಳಿಗೆ ಪರಿಣತಿಯನ್ನು ನೀಡಬಲ್ಲವು. ಅದು 21ನೇ ಶತಮಾನದ ಜ್ಞಾನ ಆಧಾರಿತ ಶೈಕ್ಷ ಣಿಕ ಚಟುವಟಿಕೆಗಳು ಮತ್ತು ಸೇವೆಗಳಿಗೆ ಅನುಗುಣವಾಗಿಯೇ ಇರುತ್ತದೆ.
1. ಸರಕಾರಿ ಮತ್ತು ಅನುದಾನಿತ ಶಾಲೆಗಳು ತಮ್ಮ ಸಮೀಪದ ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆಗಳಿಂದ ಶೈಕ್ಷಣಿಕ ತಜ್ಞತೆಯನ್ನು ಪಡೆದುಕೊಳ್ಳಬಹುದು. ವಿಶೇಷವಾಗಿ, ಶಿಕ್ಷಕರಿಗೆ ಕ್ಲಾಸ್‌ರೂಮ್ ಮತ್ತು ಬೋಧನಾ-ಕಲಿಕಾ ಚಟುವಟಿಕೆಗಳಿಗೆ ಸಂಬಂಧಿಧಿಸಿದಂತೆ ಹೊಸದನ್ನು ಕಲಿಯಲು ಇದರಿಂದ ಸಾಧ್ಯವಾಗುವುದು.
2. ಸರಕಾರಿ ಮತ್ತು ಅನುದಾನಿತ/ಸ್ವಾಯತ್ತ ಕಾಲೇಜುಗಳು ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ (ಕೆಎಸ್‌ಎಚ್‌ಸಿಇ) ನಿಗದಿಪಡಿಸಿದ ಗುರಿ ಮತ್ತು ಉದ್ದೇಶಗಳಿಗೆ ಅನುಗುಣವಾಗಿ ತಮ್ಮ ಶೈಕ್ಷಣಿಕ ಮೂಲಸೌಕರ್ಯ ಮತ್ತು ಕಾರ್ಯಕ್ರಮಗಳನ್ನು ನವೀಕರಿಸಲು ಹತ್ತಿರದ ಹೆಸರಾಂತ ವಿಶ್ವವಿದ್ಯಾಲಯಗಳಿಂದ ಶೈಕ್ಷಣಿಕ ಪರಿಣತಿಯನ್ನು ಪಡೆಯಬಹುದು. ಇದಕ್ಕೆ ಸಂಬಂಧಿಧಿಸಿದ ಕೆಲವು ಪ್ರಮುಖ ಅಂಶಗಳು ಹೀಗಿವೆ:
ಎ) ಉದಾರ ಕಲೆ ಪದವಿ ಮೂಲಕ ಪದವಿ ಪೂರ್ವ ಶಿಕ್ಷಣದಲ್ಲಿ ಉದ್ಯೋಗದ ಕೌಶಲ್ಯಗಳನ್ನು ಹೇಳಿಕೊಡಬಹುದು. ಇದೇ ರೀತಿಯ ಕೋರ್ಸ್‌ಗಳನ್ನು ವಿಜ್ಞಾನದ ವಿಭಾಗದಲ್ಲೂ ಮಾಡಬಹುದು.
ಬಿ) ಎನ್‌ಎಎಸಿ(ನ್ಯಾಕ್) ಸ್ವಯಂ ಮೌಲ್ಯಮಾಪನ ವರದಿಗಾಗಿ ಮತ್ತು ವರಿಷ್ಠ ಸಮಿತಿ ಭೇಟಿಯ ಸಿದ್ಧತೆಗಾಗಿ ಕಾಲೇಜುಗಳು ಮತ್ತು ಸ್ವಾಯತ್ತ ಕಾಲೇಜುಗಳನ್ನು ತಯಾರುಗೊಳಿಸಬೇಕು. ಪ್ರತಿಯೊಂದು ವಿಶ್ವವಿದ್ಯಾಲಯವು ತಜ್ಞರ ಸಮಿತಿಯನ್ನು ರಚಿಸಬಹುದು ಮತ್ತು ಅದನ್ನು ತಮ್ಮ ಅಧಿಧಿಕೃತ ಜಾಲತಾಣಗಳಲ್ಲಿ ಪ್ರಕಟಿಸಬೇಕು. ಇದರಿಂದ ಕಾಲೇಜುಗಳು ತಮ್ಮ ಶೈಕ್ಷಣಿಕ ಅಗತ್ಯಗಳನ್ನು (ವಾಣಿಜ್ಯ, ಕಲೆ, ವಿಜ್ಞಾನ, ಶಿಕ್ಷ ಣ ಇತ್ಯಾದಿ) ಆಧರಿಸಿ, ತಮ್ಮ ತಜ್ಞತೆಯನ್ನು ಬಳಸಿಕೊಳ್ಳಬಹುದಾಗಿದೆ.
ಸಿ) ಕಾಲೇಜುಗಳು ಮತ್ತು ಸ್ವಾಯತ್ತ ಕಾಲೇಜುಗಳಲ್ಲಿ ಶೈಕ್ಷ ಣಿಕ ಮೂಲಸೌಕರ್ಯಗಳನ್ನು ಒದಗಿಸಲು ಎಐಸಿಟಿಇ, ಎಂಸಿಐ, ಬಿಸಿಐ ಅಡಿಯಲ್ಲಿರುವ ವಿಶ್ವವಿದ್ಯಾಲಯಗಳನ್ನು ತಜ್ಞ ಸಂಸ್ಥೆಗಳಾಗಿ ಸೇರಿಸಿಕೊಳ್ಳಬಹುದು.
ಡಿ) ಐಐಟಿಗಳು, ಐಐಐಟಿಗಳು, ಐಐಎಸ್ಸಿ ಮತ್ತು ಇತರ ರಾಷ್ಟ್ರೀಯ ಸಂಸ್ಥೆಗಳು ರಾಷ್ಟ್ರೀಯ ವಿಶ್ವವಿದ್ಯಾಲಯಗಳನ್ನು ರಾಷ್ಟ್ರೀಯ ಮತ್ತು ಜಾಗತಿಕ ಪ್ರಯತ್ನಗಳೊಂದಿಗೆ ಕೈಜೋಡಿಸಲು ಸಹಾಯ ಮಾಡುವಂತೆ ಕೇಳಿಕೊಳ್ಳಬಹುದು. ಒಂದು ವೇಳೆ ಅಗತ್ಯಬಿದ್ದರೆ, ಕೆಎಸ್‌ಎಚ್‌ಇಸಿ ಜೊತೆಗೂಡಿ ರಾಜ್ಯ ಸರಕಾರಗಳು ಈ ಸಂಸ್ಥೆಗಳೊಂದಿಗೆ ಒಪ್ಪಂದಗಳನ್ನೂ ಮಾಡಿಕೊಳ್ಳಬಹುದು. 21ನೇ ಶತಮಾನದ ಜ್ಞಾನ ಆಧರಿತ ಆರ್ಥಿಕತೆಯನ್ನು ನಿರ್ಮಿಸುವ ಅಗಾಧ ಸಾಮರ್ಥ್ಯವನ್ನು ಹೊಂದಿರುವ, ರಾಷ್ಟ್ರೀಯ, ಶೈಕ್ಷಣಿಕ ಮತ್ತು ಜಾಗತಿಕವಾಗಿ ಸೂಕ್ಷ್ಮ ವಿಷಯಗಳಿಗೆ ಅವರ ಶೈಕ್ಷಣಿಕ ಚಟುವಟಿಕೆಗಳ ದೃಷ್ಟಿಕೋನಕ್ಕೆ ಅನುಗುಣವಾಗಿ ಸ್ಪಂದಿಸುವ ಉನ್ನತ ಶಿಕ್ಷಣ ಸಂಸ್ಥೆಗಳು ನೀಡುವ ಮಾರ್ಗದರ್ಶನ ಅಮೂಲ್ಯವಾಗಿರುತ್ತದೆ.
ಮಾರ್ಗದರ್ಶನಕ್ಕೆ ಈಗಾಗಲೇ ಹೇಳಿರುವ ಸಮಗ್ರ ವಿಧಾನವು ವಿಶಾಲ, ವೈವಿಧ್ಯ ಮಾರ್ಗದರ್ಶನ ವ್ಯವಸ್ಥೆಯು ಕೇವಲ ವಿದ್ಯಾರ್ಥಿಗಳನ್ನು ಮಾತ್ರವಲ್ಲದೆ ಎಲ್ಲಾ ಹಂತದ ಶಿಕ್ಷಣ ಸಂಸ್ಥೆಗಳನ್ನೂ ಮರುಪೂರಣ ಮಾಡುವ ಸಂಪೂರ್ಣ ಸಾಮರ್ಥ್ಯಕ್ಕೆ ಬಳಸುವ ಸೃಜನಶೀಲ ಪರಿಹಾರವಾಗಿದೆ.
ಈಗ ತಿಳಿಸಿರುವ ಸಂಗತಿಗಳನ್ನು ರಾಷ್ಟ್ರೀಯ ಶಿಕ್ಷಣ ನೀತಿಯ ಪರಿಶೀಲನೆಯ ಚೌಕಟ್ಟಿನೊಳಗೆ ಸಹಕಾರಿ ಕ್ರಮದಲ್ಲಿ ಅಭಿವೃದ್ಧಿಪಡಿಸಿದರೆ ಮತ್ತು ಕಾರ್ಯಗತಗೊಳಿಸಿದರೆ ಕೆಜಿಯಿಂದ ಪಿಜಿಯವರೆಗೆ ಎಲ್ಲಾ ಹಂತದ ಶಿಕ್ಷಣವನ್ನು ಮರುಪೂರಣ ಮಾಡುವ ಎಲ್ಲ ಸಾಮರ್ಥ್ಯವನ್ನು ಹೊಂದಿವೆ. ಜೊತೆಗೆ ಈ ಮಾದರಿಯು ಇತರ ರಾಜ್ಯಗಳಿಗೂ ಅನುಕರಣೀಯವಾಗಿದೆ.
(ಲೇಖಕರು ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಮತ್ತು ಕರ್ನಾಟಕ ಸರಕಾರದ ಶಿಕ್ಷಣ ಸುಧಾರಣೆಯ ಸಲಹೆಗಾರರು)