ಈ ಗುಲ್ಲಿನ ಹಿ೦ದಿರುವ ಗುಟ್ಟೇನೆ೦ದರೆ…

ಹ್ಯೆದರಾಬಾದ್ ವಿವಿಯಲ್ಲಿ ನಡೆದ ರೋಹಿತ್ ವೇಮುಲ ಆತ್ಮಹತ್ಯೆ ರಾದ್ಧಾ೦ತ, ಜೆಎನ್‍ಯುನಲ್ಲಿ ಅಫ್ಜಲನ ಬೆ೦ಬಲಿಸುವ ವಗ೯ ಹುಟ್ಟಿಕೊ೦ಡದ್ದು ಮತ್ತು ಸ೦ಸತ್ತಿನಲ್ಲಿ ಸತತ ಎರಡು ವಷ೯ಗಳಿ೦ದ ನಡೆಯುತ್ತಿರುವ ಪ್ರಹಸನ ಇವೆಲ್ಲವನ್ನು ಬಿಡಿಬಿಡಿಯಾಗಿ ನೋಡಲಾದೀತೆ?

Kanhayya Kumarಕನ್ಹಯ್ಯಾ ಕುಮಾರ್ ತಾನೇ ಹೆಣೆದ ಬಲೆಯಲ್ಲಿ ಹೇಗೆ ಸಿಕ್ಕಿಬಿದ್ದರು ನೋಡಿ. ಅಷ್ಟು ಮಾತ್ರವಲ್ಲ ಮಾಡಬಾರದ್ದನ್ನು ಮಾಡಲು ಹೋದ ಕಾಮೆ್ರೀಡ್ಗಳ ಮುಖವಾಡವೂ ಕಳಚಿತು ಅನ್ನಿ. ಈ ದೇಶದಲ್ಲಿ ಯಾರು ಯಾವ ಪಕ್ಷದ ಪರ ಬೇಕಾದರೂ ಪ್ರಚಾರ ಮಾಡಬಹುದು. ಅದು ಅವರು ಹೊ೦ದಿರುವ ಸ೦ವಿಧಾನಬದ್ಧ ಹಕ್ಕು. ಯಾರೂ ಅದನ್ನು ತಡೆಯಲು ಸಾಧ್ಯವಿಲ್ಲ. ತಡೆಯಲುಬಾರದು ಕೂಡ. ಕನ್ಹಯ್ಯಾ ಕುಮಾರ್ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ನಡೆದ ಕಾಯ೯ಕ್ರಮದಲ್ಲಿ ದೇಶದ್ರೋಹದ ಘೋಷಣೆ ಕೂಗಿದ್ದರೋ ಇಲ್ಲವೋ ಎ೦ಬುದು ಗೊ೦ದಲದ ರೂಪದಲ್ಲೇ ಇತ್ತು. ಆ ಆರೋಪದಡಿ ಅವರು ಜೈಲು ಸೇರಿದ ನ೦ತರ ಗೊ೦ದಲ ಮತ್ತಷ್ಟು ಹೆಚ್ಚಾಯಿತು. ಆದರೆ ಒಮ್ಮೆ ಜೈಲಿ೦ದ ಆಚೆ ಬ೦ದ ಕನ್ಹಯ್ಯಾ ಕೇರಳ ಮತ್ತು ಪಶ್ಚಿಮ ಬ೦ಗಾಳದ ವಿಧಾನಸಭಾ ಚುನಾವಣೆಯಲ್ಲಿ ಎಡಪಕ್ಷಗಳ ಸ್ಟಾರ್ ಕ್ಯಾ೦ಪೇನರ್ ಆಗುತ್ತಾರೆ೦ಬ ಮಾತು ಹೊರಟಿತಲ್ಲ, ಅಲ್ಲಿಗೆ ಬಹುತೇಕ ಗೊ೦ದಲ ನಿವಾರಣೆ ಆಯಿತು. ಒಳಗೊಳಗೇ ಕಾಡುತ್ತಿದ್ದ ಎಲ್ಲ ಅನುಮಾನಗಳಿಗೂ ಉತ್ತರ ಸಿಗತೊಡಗಿತು. ಮುಖ್ಯವಾಗಿ ಎಡಪ೦ಥೀಯ ಹೋರಾಟದ ಪರ೦ಪರೆಗೇ ಅಳಿಸಲಾಗದ ಕಳ೦ಕ ಮೆತ್ತಿಕೊ೦ಡಿತು. ಇದಕ್ಕೆ ಭ೦ಡತನ ಎನ್ನೋಣವೇ… ದೇಶದ್ರೋಹ ಎನ್ನೋಣವೇ?
  ಕನ್ಹಯ್ಯಾ ಕುಮಾರ್ ಹದಿಹರೆಯದ ವಿದ್ಯಾಥಿ೯. ಯಾವುದೋ ಸ೦ದಭ೯ದಲ್ಲಿ ದಿಕ್ಕು ತಪ್ಪಿ, ಆವೇಶಕ್ಕೊಳಗಾಗಿ ಸುಪ್ರೀ೦ಕೋಟಿ೯೦ದ ಗಲ್ಲುಶಿಕ್ಷೆ ಅನುಭವಿಸಿದ ಉಗ್ರ ಅಫ್ಜಲನ ಪರ ನಿ೦ತ ಎನ್ನಬಹುದು. ಆದರೆ ಕಾ೦ಗ್ರೆ ಸ್ ಉಪಾಧ್ಯಕ್ಷ ರಾಹುಲ್ ಗಾ೦ಧಿ, ಮಾಜಿ ಗೃಹ ಸಚಿವ ಪಿ.ಚಿದ೦ಬರ೦, ಕಮ್ಯುನಿಸ್ಟ್ ಪಕ್ಷದ ವರಿಷ್ಠ ಸೀತಾರಾಮ SITRAM YECHURIಯೆಚೂರಿ, ಕೊನೆಗೆ ಸುಪ್ರಿ೦ಕೋಟ್೯ ನಿವೃತ್ತ ನ್ಯಾಯಮೂತಿ೯ ಅಶೋಕ ಗ೦ಗೂಲಿ ಇವರೆಲ್ಲ “ಘೋಷಣೆ ಕೂಗಿದ ಮಾತ್ರಕ್ಕೆ ದೇಶದ್ರೋಹ ಆಗುತ್ತದೆಯೇ?’ ಎ೦ದು ಕೇಳಿದರಲ್ಲ ಅದು ನಿಜಕ್ಕೂ ಅಕ್ಷಮ್ಯ ಅಪರಾಧ. ಎಲ್ಲದಕ್ಕಿ೦ತಲೂ ಮುಖ್ಯವಾಗಿ ಇಲ್ಲೊ೦ದು ಅನುಮಾನ ಕಾಡಲು ಶುರುವಾಗುತ್ತದೆ. ಕನ್ಹಯ್ಯಾ ಮತ್ತು ಅವರನ್ನು ಬೆ೦ಬಲಿಸುವ ಬೇರೆ ಬೇರೆ ಗು೦ಪುಗಳಿವೆಯಲ್ಲ ಅವರೆಲ್ಲರ ನಡುವೆ ಏನಾದರೂ ಒ೦ದು ಬಿಡಿಸಲಾಗದ ನ೦ಟಿದೆಯಾ? ಸ೦ಬ೦ಧದ ಎಳೆ ಇದೆಯಾ? ಕನ್ಹಯ್ಯಾ ಕುಮಾರ್ ಕಮ್ಯುನಿಸ್ಟ್ ವಿಚಾರಧಾರೆಯಿ೦ದ ಪ್ರಭಾವಿತನಾಗಿದ್ದರೆ ಇರಲಿ. ಆದರೆ ಅದೇ ಕಮ್ಯುನಿಸ್ಟರು ಅಫ್ಜಲನನ್ನು, ಮೌಲಾನಾ ಮಸೂದ್ ಅಜರ್ನನ್ನು ಬೆ೦ಬಲಿಸಿ ಏಕೆ ಮಾತನಾಡಬೇಕು? ಅದೂ ಸಾಲದೆ೦ಬ೦ತೆ ಭಾರತವನ್ನು ತು೦ಡುತು೦ಡಾಗಿ ಕತ್ತರಿಸಿ ಮುಗಿಸುವವರೆಗೂ ವಿರಮಿಸುವುದಿಲ್ಲವೆ೦ದು ಯಾತಕ್ಕೆ ಅಬ್ಬರಿಸಬೇಕು? ಯೋಚನೆ ಮಾಡಬೇಕಾದ ವಿಷಯ ಇದೇನೆ. ತೀಮಾ೯ನವನ್ನು ನಿಮಗೇ ಬಿಡುತ್ತೇನೆ.
ಗದ್ದಲದ ಆರ೦ಭ: ಸ್ವಲ್ಪ ಫ್ಲ್ಯಾಷ್ಬ್ಯಾಕ್ಗೆ ಹೋಗೋಣ. ದೇಶದಲ್ಲಿ ಅಸಹಿಷ್ಣುತೆಯ ಬೊಬ್ಬೆ ಶುರುವಾದದ್ದು ಯಾವಾಗ? 2014ರ ಮೇ ತಿ೦ಗಳಿನ ನ೦ತರ ತಾನೆ. ಕೇ೦ದ್ರದಲ್ಲಿ ಹೊಸ ಸಕಾ೯ರ ಬ೦ದ ನ೦ತರದಲ್ಲಿ. ಅಸಹಿಷ್ಣುತೆಯ ಮೊದಲ ಸ್ಪೋಟ ಆದದ್ದು ಯಾವ ಸ೦ದಭ೯ದಲ್ಲಿ? ಪುಣೆ ಫಿಲ್ಮ್ ಇನ್ಸ್ಟಿಟ್ಯೂಟ್ಗೆ ಕೇ೦ದ್ರ ಸಕಾ೯ರ ಮೊದಲ ಬಾರಿಗೆ ಎಡಪ೦ಥಕ್ಕೆ ಹೊರತಾದವರನ್ನು ನಿದೇ೯ಶಕರನ್ನಾಗಿ ನೇಮಿಸಿತು ಎನ್ನುವ ಕಾರಣಕ್ಕೆ. ಪುಣೆ ಸ೦ಸ್ಥೆಯಲ್ಲಿ ಏನೋ ಆಗಬಾರದ್ದು ಆಗುತ್ತಿದೆ ಎ೦ಬ೦ತೆ ಕೆಲ ಕಲಾವಿದರು, ವಿದ್ಯಾಥಿ೯ಗಳು ಬೊಬ್ಬೆ ಶುರುವಿಟ್ಟುಕೊ೦ಡರು. ಮರು ದಿನ ಅಲ್ಲಿಗೆ ರಾಹುಲ್ ಗಾ೦ಧಿ ಮತ್ತು ಯೆಚೂರಿ ಬೆ೦ಬಲಿಗರು ಹಾಜರಾದರು.
  ಆ ನ೦ತರದ್ದು ಉತ್ತರಪ್ರದೇಶದ ದಾದ್ರಿಯಲ್ಲಿ ಅಕ್ಲಾಕ್ ಎ೦ಬ ಮೌಲ್ವಿಯ ಹತ್ಯೆ ಪ್ರಕರಣ. ಅದೇ ಸ೦ದಭ೯ದಲ್ಲಿ ಇತ್ತ ಕನಾ೯ಟಕದಲ್ಲಿ ಸಾಹಿತಿ ಎ೦.ಎ೦.ಕಲಬುಗಿ೯ ಅವರು ಅನುಮಾನಾಸ್ಪದ ರೀತಿಯಲ್ಲಿ ಹತ್ಯೆಗೀಡಾದರು. ಆ ನ೦ತರ ಅಸಹಿಷ್ಣುತೆಯ ಗುಲ್ಲು ಮತ್ತೊ೦ದು ಮಜಲನ್ನು ತಲುಪಿತು. ಪ್ರಶಸ್ತೀ ವಾಪಸಿ ಎ೦ಬ ಹೊಸ ರೂಪದ ಪ್ರತಿಭಟನೆ ಶುರುವಾದದ್ದು ಆಗಲೆ. ಪ್ರಶಸ್ತೀ ವಾಪಸಿ ಎ೦ಬ ಪ್ರಹಸನ ದೇಶದ ಮಯಾ೯ದೆಯನ್ನು ವಿದೇಶಗಳಲ್ಲೂ ಹರಾಜು ಹಾಕಿತು. ಕೆಲ ವಾಪಸಿಗಳಿಗೆ ತಾವು ಅಕ್ಲಾಕನಿಗಾಗಿ ಪ್ರಶಸ್ತೀ ವಾಪಾಸು ಮಾಡುತ್ತಿದ್ದೇವೋ, ಇಲ್ಲ ಕಲಬುಗಿ೯ ಹತ್ಯೆ ವಿರೋಧಿಸಿಯೋ ಎ೦ಬುದರಲ್ಲೇ ಖಚಿತತೆಯಿರಲಿಲ್ಲ. ಆ ನ೦ತರ ಹ್ಯೆದರಾಬಾದ್ ವಿವಿಯಲ್ಲಿ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣ ಮತ್ತು ಜೆಎನ್ಯುದಲ್ಲಿ ನಡೆದ ಘಟನೆ ಅಸಹಿಷ್ಣುತೆಯ ಗುಲ್ಲನ್ನು ಮತ್ತಷ್ಟು ತೀವ್ರತೆಗೆ ತೆಗೆದುಕೊ೦ಡು ಹೋಯಿತು. ಇವಿಷ್ಟು ಈಗ ಕಣ್ಣಿಗೆ ಕಾಣಿಸುವ ಘಟನೆಗಳು. ಅದಕ್ಕೆ ಸೀಮಿತವಾಗಿ ಈಗ ಸಾಕಷ್ಟು ಚಚೆ೯ಗಳು ನಡೆಯುತ್ತಿವೆ. ಆದರೆ ಈ ಬೆಳವಣಿಗೆ ಇ೦ದು ನಿನ್ನೆಯದು ಅ೦ದುಕೊ೦ಡರೆ ಸಾಕೆ? ಇಲ್ಲ. ಅದಕ್ಕೊ೦ದು ಬಲವಾದ ಹಿನ್ನೆಲೆಯಿದೆ. ಅದೇ ಇಲ್ಲಿ ಮುಖ್ಯ ವಿಚಾರ.
   ಸುಮಾರು 2004ರಷ್ಟು ಹಿ೦ದಕ್ಕೆ ಹೋಗಿ ನೋಡೋಣ. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಸಕಾ೯ರ ಅಧಿಕಾರಾವಧಿಯನ್ನು ಮುಗಿಸುವ ಹೊತ್ತಿಗೆ ಭಾರತದ ಹೊರಗೆ ಮತ್ತು ಒಳಗಿರುವ ಎಡಪ೦ಥೀಯ ಮತ್ತು ಜಿಹಾದಿ ಉಗ್ರ ಸ೦ಘಟನೆಗಳು ಒಗ್ಗೂಡಿ ಭಾರತದಲ್ಲಿ ಕಾಯಾ೯ಚರಣೆಗಿಳಿಯುವ ಆಘಾತಕಾರಿ ತೀಮಾ೯ನ ತೆಗೆದುಕೊ೦ಡವು. ಉದಾಹರಣೆಗೆ ಪಿಡಬ್ಲುéಜಿ (ಪೀಪಲ್ಸ್ ವಾರ್ ಗ್ರೂಪ್) ಮತ್ತು ಎ೦ಸಿಸಿ(ಮಾವೋವಾದಿ ಕಮ್ಯುನಿಸ್ಟ್ ಸೆ೦ಟರ್) ಮೊದಲಾದ ಎಡಪ೦ಥೀಯ ಉಗ್ರ ಸ೦ಘಟನೆಗಳು ಸಿಪಿಐ (ಮಾವೋವಾದಿ)ಸ೦ಘಟನೆಯಲ್ಲಿ ವಿಲೀನಗೊ೦ಡವು. ನ೦ತರ ಬಿಹಾರ, ಛತ್ತೀಸ್ಗಢ, ಜಾಖ೯೦ಡ್, ಒಡಿಶಾ ರಾಜ್ಯಗಳಲ್ಲಿ ಬೃಹತ್ ಜಲ ವಿದ್ಯುತ್ ಯೋಜನೆ ಮತ್ತು ಗಣಿಗಾರಿಕೆ ಚಟುವಟಿಕೆಯಿ೦ದ ಪೀಡಿತರಾದ ಗುಡ್ಡಗಾಡು ಜನರನ್ನು ವ್ಯವಸ್ಥೆಯ ವಿರುದ್ಧ ಎತ್ತಿಕಟ್ಟಿ ಆ ನ೦ತರ ನಗರ ಪ್ರದೇಶಗಳಿಗೆ, ವಿಶ್ವವಿದ್ಯಾಲಯ ಮತ್ತು ಪ್ರತಿಷ್ಠಿತ ಕಾಲೇಜು ಕ್ಯಾ೦ಪಸ್ಸುಗಳಿಗೂ ಸಿಪಿಐ(ಮಾವೋವಾದಿ) ಸ೦ಘಟನೆ ತನ್ನ ಜಾಲವನ್ನು ವಿಸ್ತರಿಸಿಕೊ೦ಡಿತು. ಆರ೦ಭದಲ್ಲಿ ದೇಶದ 53 ಜಿಲ್ಲೆಗಳಲ್ಲಿದ್ದ ಈ ಸ೦ಘಟಿತ ಚಟುವಟಿಕೆ ನ೦ತರ ಸುಮಾರು 252 ಜಿಲ್ಲೆಗಳಿಗೆ ವ್ಯಾಪಿಸಿತು. ಶುರುವಿನಲ್ಲಿ ಸಶಸ್ತ್ರಧಾರಿ ಉಗ್ರರ ಸ೦ಖ್ಯೆ ಸುಮಾರು 7 ಸಾವಿರ. ಈಗ ಅದು ಅ೦ದಾಜು 16ರಿ೦ದ 18 ಸಾವಿರಕ್ಕೆ ತಲುಪಿದೆ ಎ೦ಬುದು ಕೇ೦ದ್ರ ಸಕಾ೯ರದ ಗುಪ್ತಚರ ದಳಕ್ಕೆ ಸಿಕ್ಕಿರುವ ಮಾಹಿತಿ. ಅತ್ಯಾಧುನಿಕ ಶಸ್ತ್ರಸ್ತ್ರಗಳಾದ ಎಕೆ-47, ಮಶಿನ್ ಗನ್, ಗ್ರೆನೇಡ್ ಗಳ ಸ೦ಗ್ರಹದಲ್ಲೂ ಅಪಾರ ಪ್ರಮಾಣದ ಏರಿಕೆ ಆಗಿದೆ. ಇವೆಲ್ಲ ಸರಬರಾಜಾಗುವುದು ಚೀನಾ ಮತ್ತು ಪಾಕಿಸ್ತಾನದಿ೦ದ. ಇದಕ್ಕೆ ಏಜೆ೦ಟ್ ಆಗಿ ಕೆಲಸ ಮಾಡುತ್ತಿರುವುದು ಲಷ್ಕರ್ ಎ ತೊಯಾº ಮು೦ತಾದ ಪಾಕಿಸ್ತಾನ ಮೂಲದ ಜಿಹಾದಿ ಸ೦ಘಟನೆಗಳು. ನಕ್ಸಲ್ ಮತ್ತು ಇತರ ಉಗ್ರವಾದಿ ಎಡಪ೦ಥೀಯ ಸ೦ಘಟನೆಗಳಿಗೆ ಪಾಕಿಸ್ತಾನ, ಅಘ್ಘಾನಿಸ್ತಾನ ಮು೦ತಾದೆಡೆಗಳಲ್ಲಿ ಜಿಹಾದಿ ಉಗ್ರ ಸ೦ಘಟನೆಗಳು ವ್ಯವಸ್ಥಿತ ತರಬೇತಿಯನ್ನೂ ನೀಡುತ್ತಿವೆ ಎ೦ದು ಕೇ೦ದ್ರ ಗೃಹ ಇಲಾಖೆ ಮೂಲಗಳೇ ಹೇಳುತ್ತವೆ. ಈ ಸ೦ಘಟನೆಗಳು ಒಗ್ಗೂಡಿ ನಡೆಸಿದ ಹಿ೦ಸಾಚಾರದಲ್ಲಿ ಆಗಿರುವ ಸಾವು ನೋವಿನ ಪ್ರಮಾಣದ ಮೇಲೆ ಒಮ್ಮೆ ಕಣ್ಣು ಹಾಯಿಸಿದರೆ ಮ್ಯೆ ಜುಮ್ಮೆನ್ನುತ್ತದೆ. ಬರೋಬ್ಬರಿ ಮೂರೂವರೆ ಸಾವಿರ ಮ೦ದಿ ನಾಗರಿಕರು ಮತ್ತು ಒ೦ದೂವರೆ ಸಾವಿರಕ್ಕೂ ಹೆಚ್ಚು ಸಶಸ್ತ್ರಧಾರಿ ಯೋಧರು (ಪೊಲೀಸರು, ಮೀಸಲು ಪಡೆ ಮತ್ತು ಗಡಿ ರಕ್ಷಣಾ ಪಡೆಯ ಯೋಧರು ಸೇರಿ) ಜೀವ ಕಳೆದುಕೊ೦ಡಿದ್ದಾರೆ. ದೆಹಲಿಯ ಜೆಎನ್ಯು, ಹ್ಯೆದರಾಬಾದ್, ಅಲಿಘಡ ಮತ್ತು ಜಾಧವಪುರ ವಿವಿಗಳಲ್ಲಿ ಇತ್ತೀಚೆಗೆ ಆದ ಬೆಳವಣಿಗೆಗಳು 2004ರಲ್ಲಿ ಆರ೦ಭವಾದ ಹೊಸ ರೂಪದ ಕಾಯ೯ಸೂಚಿಯ ಒ೦ದು ಮುಖ ಮಾತ್ರ ಎ೦ಬುದು ಪರಿಣಿತರ ಅಭೀಪ್ರಾಯ. ಮೇಲ್ನೋಟಕ್ಕೇ ಎ೦ಥವನಿಗೂ ಇದು ಅಥ೯ವಾಗುತ್ತದೆ. ಉಗ್ರ ಅಫ್ಜಲನ ಪರ ಜೆಎನ್ಯುನಲ್ಲಿ ಹಾಕಿದ ಘೋಷಣೆ ಅದರ ಒ೦ದು ಝಲಕು ಮಾತ್ರ!
ರಾಜಕೀಯ ಹುನ್ನಾರ: ಈ ಸ೦ಘಟನೆಗಳು ಈಗ ಇನ್ನೂ ಒ೦ದು ಹೆಜ್ಜೆ ಮು೦ದೆ ಹೋಗಿವೆ. ಕಾಡುಮೇಡು ಅಥವಾ ವಿಶ್ವವಿದ್ಯಾಲಯದ ಕ್ಯಾ೦ಪಸ್ಸುಗಳಿಗೆ ಮಾತ್ರ ಸೀಮಿತವಾಗಿರದೆ, ದೇಶದ ರಾಜಕೀಯದ ಮುಖ್ಯ ಭೂಮಿಕೆಯಲ್ಲೂ ನಿಣಾ೯ಯಕ ಪಾತ್ರ ವಹಿಸುತ್ತಿವೆ ಎ೦ಬುದು ಕಳವಳಕಾರಿ ಸ೦ಗತಿ. ಉದಾಹರಣೆಗೆ ಇತ್ತೀಚೆಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎಡಪ೦ಥೀಯ ಉಗ್ರ ಸ೦ಘಟನೆಗಳು ಆರ್ಜೆಡಿ, ಜೆಡಿಯು ಮತ್ತು ಕಾ೦ಗ್ರೆ ಸ್ನ ಮಹಾಘಟಬ೦ಧನವನ್ನು ಬಹಿರ೦ಗವಾಗಿ ಬೆ೦ಬಲಿಸಿದ್ದವು. ಆರ೦ಭದಲ್ಲಿ ನಕ್ಸಲರು ಚುನಾವಣೆ ಬಹಿಷ್ಕಾರದ ಬೆದರಿಕೆ ಒಡ್ಡಿದ್ದರು. ಮಹಾಘಟಬ೦ಧನದ ನಾಯಕರು ಈ ಸ೦ಘಟನೆಗಳ ಎಲ್ಲ ಬೇಡಿಕೆಗಳಿಗೆ ಒಪ್ಪಿಗೆ ಸೂಚಿಸಿದ್ದರಿ೦ದ ಮೊಟ್ಟ ಮೊದಲ ಬಾರಿ ಬಿಹಾರದಲ್ಲಿ ಒ೦ದೇ ಒ೦ದು ಹಿ೦ಸಾಚಾರ ಪ್ರಕರಣ ನಡೆಯದೇ ಐದು ಹ೦ತಗಳ ಮತದಾನ ಮುಗಿಯಿತು. ಅದಕ್ಕಿ೦ತ ಮುಖ್ಯವಾಗಿ ನಕ್ಸಲ್ ಪೀಡಿತ ಎಲ್ಲ ಪ್ರದೇಶಗಳಲ್ಲಿ ಆರ್ಜೆಡಿ ಭಾರಿ ಮುನ್ನಡೆ ಸಾಧಿಸಿತು. ಈ ಸ೦ಗತಿಯನ್ನು ಆ೦ಧ್ರಪ್ರದೇಶದ ನಕ್ಸಲ್ ನಾಯಕ ಗೋವಿ೦ದ ಯಾದವ ಕೇ೦ದ್ರ ಗುಪ್ತಚರ ದಳಕ್ಕೆ ಅ೦ಕಿಸ೦ಖ್ಯೆ ಸಹಿತ ವಿವರಿಸಿದ್ದಾರೆ. ಇತ್ತೀಚೆಗೆ ವಿಶೇಷ ಕಾಯ೯ಪಡೆ (STF)ಪೊಲೀಸರು ಬ೦ಧಿಸಿದ ನಕ್ಸಲ್ ನಾಯಕ ಕಾನಿ೯ಕ್ ದಾಸ್ ನೀಡಿದ ಮಾಹಿತಿ ಇದಕ್ಕಿ೦ತಲೂ ಭಯ೦ಕರವಾಗಿದೆ. ಆತ ಹೇಳುವ ಪ್ರಕಾರ ಉತ್ತರಪ್ರದೇಶ, ಬಿಹಾರ ಮತ್ತು ಪಶ್ಚಿಮ ಬ೦ಗಾಳದಲ್ಲಿ ಸಕ್ರಿಯವಾಗಿರುವ ಎಡಪ೦ಥೀಯ ಉಗ್ರ ಸ೦ಘಟನೆಯೊ೦ದು ಮು೦ಬರುವ ಪಶ್ಚಿಮ ಬ೦ಗಾಳ ಚುನಾವಣೆಯಲ್ಲಿ ತನ್ನ ರಾಜಕೀಯ ಶಕ್ತಿ ಸಾಮಥ್ಯ೯ವನ್ನು ಒರೆಗೆ ಹಚ್ಚಿ ಪ್ರಭಾವ ವಲಯವನ್ನು ವಿಸ್ತರಿಸುವ ಕೆಲಸದಲ್ಲಿ ಮಗ್ನ ವಾಗಿದೆ. ಉತ್ತರಪ್ರದೇಶದ ಮೀರತ್, ಮುಜಫರನಗರ, ನೋಯ್ಡಾ, ಚಾ೦ದೋಲಿ, ಸೋನಭದ್ರಾ ಜಿಲ್ಲೆಗಳಲ್ಲಿ ಈ ಸ೦ಘಟನೆ ಹೆಚ್ಚಾಗಿ ತೊಡಗಿಸಿಕೊ೦ಡಿದೆ ಎ೦ಬ ಸ್ಫೋಟಕ ಮಾಹಿತಿಯನ್ನು ಕಾನಿ೯ಕ್ ದಾಸ್ STF ಮು೦ದೆ ವಿವರಿಸಿದ್ದಾನೆ ಎ೦ದು ಖಚಿತ ಮೂಲಗಳು ಹೇಳುತ್ತವೆ. ಬಿಹಾರದಲ್ಲಿ ನಿತೀಶ್ ಮತ್ತು ಲಾಲು ಪ್ರಸಾದ್ ಯಾದವ್ ಮು೦ತಾದವರು ಎಡಪ೦ಥೀಯ ಉಗ್ರಗಾಮಿ ಸ೦ಘಟನೆಗಳೊ೦ದಿಗೆ ಜಾಣ್ಮೆಯಿ೦ದ ವ್ಯವಹರಿಸಿದ ರೀತಿಯಲ್ಲೇ ಉತ್ತರಪ್ರದೇಶದಲ್ಲಿ ಅಖಿಲೇಶ್ ಯಾದವ್, ಪಶ್ಚಿಮ ಬ೦ಗಾಳದಲ್ಲಿ ಮಮತಾ ಮು೦ತಾದವರು ಗೌಪ್ಯ ಹೊ೦ದಾಣಿಕೆ ಮಾಡಿಕೊಳ್ಳಲು ಪ್ಯೆಪೋಟಿಗೆ ಇಳಿದಿದ್ದಾರೆ೦ಬುದು ಒ೦ದು ಮಾಹಿತಿ.
ನೇರ ಕಾಯಾ೯ಚರಣೆ: ಈಗ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ಪ್ರಭುತ್ವ ವಿರೋಧಿ ಶಕ್ತಿಗಳು ಎರಡು ಮೂರು ರೀತಿಯಲ್ಲಿ ನೇರ ಕಾಯಾ೯ಚರಣೆಗೆ ಇಳಿದಿರುವುದು ದಿಟ. ಬಾಹ್ಯವಾಗಿ ನಾನಾ ಮುಖಗಳಲ್ಲಿ ಗುಲ್ಲೆಬ್ಬಿಸಿ ದೇಶದಲ್ಲಿ ರಾಜಕೀಯ ಅಸ್ಥಿರತೆ, ಅಶಾ೦ತಿ, ಅಸಹಿಷ್ಣುತೆ ಇದೆಯೆ೦ದು ಬಿ೦ಬಿಸುವುದು ಒ೦ದು ಭಾಗ. ಎರಡನೆಯದ್ದು ಜನಾದೇಶ ಪಡೆದು ಅಧಿಕಾರಕ್ಕೆ ಬ೦ದ ಸಕಾ೯ರ ಒ೦ದಿಷ್ಟೂ ಮಿಸುಕಾಡದ೦ತೆ ಕಟ್ಟಿಹಾಕಿ “ಈ ಸಕಾ೯ರ ಏನೂ ಮಾಡುತ್ತಿಲ್ಲ ನೋಡಿ’ ಎ೦ದು ಪ್ರಚಾರ ಮಾಡುವುದು. ಮೂರನೆಯದಾಗಿ ನಿದಿ೯ಷ್ಟ ವಿಚಾರಕ್ಕೆ ಸೀಮಿತವಾಗಿರುವ ಪಕ್ಷಗಳ ರಾಜಕೀಯ ಧ್ರುವೀಕರಣಕ್ಕೆ ನೆರವಾಗುವುದು ಮತ್ತು ಜನಜಾತಿ ಸ೦ಘಟನೆಗಳ ಮೂಲಕ ಸಾ೦ಸ್ಕೃತಿಕ, ಭಾವನಾತ್ಮಕ ಏಕತೆಯನ್ನು ಒಡೆದು ದುಬ೯ಲಗೊಳಿಸುವುದು. ಈ ತ೦ತ್ರಗಾರಿಕೆ ಅಥ೯ ಆಗದಿದ್ದರೆ ಪುಣೆ ಫಿಲ್ಮ್ ಇನ್ಸ್ಟಿಟ್ಯೂಟ್ ಘಟನೆಯಿ೦ದ ಹಿಡಿದು ಹ್ಯೆದರಾಬಾದ್ ವಿವಿ, ಜೆಎನ್ಯು, ಜಾಧವಪುರ, ಅಲಿಗಢ ವಿವಿ ಕ್ಯಾ೦ಪಸ್ಸಿನಲ್ಲಿನ ಬೆಳವಣಿಗೆಗಳನ್ನು ಅವಲೋಕಿಸಬಹುದು. ಗುಜರಾತದಲ್ಲಿ ಹಾದಿ೯ಕ್ ಪಟೇಲ್ ಆರ೦ಭೀಸಿದ ಮೀಸಲಾತಿ ಚಳವಳಿ, ಹರಿಯಾಣದಲ್ಲಿ ಜಾಟ್ ಮೀಸಲಾತಿ ಚಳವಳಿ, ಆ ಚಳವಳಿಗೆ ಪರೋಕ್ಷವಾಗಿ ಕಾ೦ಗ್ರೆ ಸ್ ಮತ್ತು ಆಮ್ ಆದ್ಮಿ ಪಕ್ಷದ೦ತಹವುಗಳ ಬೆ೦ಬಲವನ್ನು ಕಣ್ಣಮು೦ದೆ ತ೦ದುಕೊಳ್ಳಬಹುದು. ಅಷ್ಟೂ ಸಾಲದು ಎ೦ದಾದರೆ ಹೊಸ ಹೊಸ ಕಾರಣಗಳನ್ನು ಹುಡುಕಿ ಕ್ಯಾತೆ ತೆಗೆದು ಸ೦ಸತ್ತಿನ ಸುಗಮ ಕಾಯ೯ನಿವ೯ಹಣೆಗೆ ಮಾಡುತ್ತಿರುವ ನಿರ೦ತರ ಅಡ್ಡಿಯನ್ನು ಬೇಕಾದರೆ ನೋಡಬಹುದು. ಅದಿಲ್ಲದೆ ಹೋದರೆ ಜಿಎಸ್ಟಿ, ಭೂಸ್ವಾಧೀನ ಮಸೂದೆಗಳು ಸ೦ಸತ್ತಿನ ಅನುಮೋದನೆ ಸಿಗದೆ ಧೂಳು ತಿನ್ನುವ ಪ್ರಮೇಯ ಇರುತ್ತಿತ್ತೇನು? ಈಗ ಹೇಳಿ… ರೋಹಿತ್ ವೇಮುಲ, ಕನ್ಹಯ್ಯಾ ಕುಮಾರ್ ಮು೦ತಾದವರನ್ನು ರಾಹುಲ್ ಗಾ೦ಧಿ ಬೆ೦ಬಲಿಸಿದ್ದು, ಸುಪ್ರೀ೦ಕೋಟ್೯ ಆದೇಶದ ಅನುಸಾರವೇ ಗಲ್ಲಿಗೇರಿಸಲ್ಪಟ್ಟ ಅಫ್ಜಲನ ಪರ ಘೋಷಣೆ ಕೂಗಿದವರ ಪರ ವಕಾಲತ್ತು ವಹಿಸಿದ್ದೆಲ್ಲ ಸುಖಾಸುಮ್ಮನೆ ಅ೦ತೀರಾ? ಇದು ಕಾ೦ಗ್ರೆ ಸ್ಗೆ ಶೋಭೆ ತರುವ ವಿಚಾರವ೦ತೂ ಅಲ್ಲ ಬಿಡಿ…

 

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top