ಇದ್ದರೇನು ಕೊರೊನಾ, ಬರೆದೇ ಬಿಡುವೆವು ಪರೀಕ್ಷೆನಾ!

ಕೊರೊನಾ ಭೀತಿಯ ನಡುವೆಯೇ ರಾಜ್ಯ ಸರಕಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಜೂನ್ 25ರಿಂದ ಆರಂಭವಾಗಲಿರುವ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲಾಗಿದೆ. ಪರೀಕ್ಷೆ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡುವುದು ಸೇರಿದಂತೆ ಕೊರೊನಾ ಸೋಂಕು ತಡೆಯಲು ಬೇಕಾಗುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರ ಹೊರತಾಗಿಯೂ ವಿದ್ಯಾರ್ಥಿಗಳಿಗೆ ಸಾರಿಗೆ, ಹಾಸ್ಟೆಲ್, ಆರೋಗ್ಯ ತಪಾಸಣೆ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಕೂಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಗಳಲ್ಲಿ ಪರಿಸ್ಥಿತಿ ಹೇಗಿದೆ ಕೊರೊನಾ ಭೀತಿಯ ನಡುವೆಯೇ ರಾಜ್ಯ ಸರಕಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಜೂನ್ 25ರಿಂದ ಆರಂಭವಾಗಲಿರುವ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲಾಗಿದೆ. ಪರೀಕ್ಷೆ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡುವುದು ಸೇರಿದಂತೆ ಕೊರೊನಾ ಸೋಂಕು ತಡೆಯಲು ಬೇಕಾಗುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರ ಹೊರತಾಗಿಯೂ ವಿದ್ಯಾರ್ಥಿಗಳಿಗೆ ಸಾರಿಗೆ, ಹಾಸ್ಟೆಲ್, ಆರೋಗ್ಯ ತಪಾಸಣೆ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಕೂಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಗಳಲ್ಲಿ ಪರಿಸ್ಥಿತಿ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
– ಬಟ್ಟೆ ಬದಲಿಸಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಪರೀಕ್ಷೆ ಸಂದರ್ಭ ಭಾರಿ ಮಳೆಯಾದರೆ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಪರೀಕ್ಷಾ ಕೇಂದ್ರದ ಸಮೀಪದ ಹಾಸ್ಟೆಲ್‌ನಲ್ಲಿ ವಸತಿ ವ್ಯವಸ್ಥೆಯನ್ನು ಗದಗ ಜಿಲ್ಲೆಯಲ್ಲಿ ಮಾಡಲಾಗಿದೆ. ಕಾರವಾರ ಮತ್ತು ಶಿರಸಿ ಶೈಕ್ಷಣಿಕ ಜಿಲ್ಲೆಗಳಲ್ಲಿ ಮಳೆ ಸುರಿಯುತ್ತಿದೆ. ಪಾಲಕರ ಜೊತೆ ಬೈಕ್‌ನಲ್ಲಿ ಬರುವ ವಿದ್ಯಾರ್ಥಿಗಳಿಗೆ ಬದಲಿ ಬಟ್ಟೆ ತರುವಂತೆ ತಿಳಿಸಲಾಗಿದೆ. ಒದ್ದೆಯಾದ ಬಟ್ಟೆ ಬದಲಿಸಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಧಾರವಾಡ ಜಿಲ್ಲೆಯಲ್ಲಿ ಪರೀಕ್ಷಾ ಕೇಂದ್ರ ವಿಳಾಸದ ಮಾಹಿತಿ ನೀಡಲು ಆ್ಯಪ್ ಸಿದ್ಧಪಡಿಸಲಾಗಿದೆ.
– ಕೊಡುಗು ಜಿಲ್ಲೆಯಲ್ಲಿ ಸಹಾಯವಾಣಿ ಆರಂಭ: ಮೈಸೂರು ಜಿಲ್ಲೆಯಲ್ಲಿ ವಿಶೇಷ ಕಾರಣಕ್ಕೆ ವಾಹನದ ಕೊರತೆಯಿಂದ ಪರೀಕ್ಷೆ ಕೇಂದ್ರಕ್ಕೆ ಬರಲು ಸಾಧ್ಯವಾಗದ ವಿದ್ಯಾರ್ಥಿಗಳನ್ನು ಕರೆತರಲು ಪ್ರತಿ ತಾಲೂಕಿಗೆ ಎರಡು ವಾಹನ ವ್ಯವಸ್ಥೆ ಮಾಡಲಾಗಿದೆ. ಹಾಸನ ಜಿಲ್ಲೆಯಲ್ಲಿ 89 ಕೇಂದ್ರದಲ್ಲಿ 150 ಥರ್ಮಲ್ ಸ್ಕ್ಯಾನರ್‌ಗಳನ್ನು ಒದಗಿಲಾಗಿದೆ. ಕೊಡಗು ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಆಸನದ ಕೊಠಡಿ ಸಂಖ್ಯೆಯನ್ನು ಪ್ರವೇಶ ಪತ್ರದೊಟ್ಟಿಗೆ ನೀಡಲಾಗಿದೆ. ಸಹಾಯವಾಣಿ ಆರಂಭಿಸಲಾಗಿದೆ.
 – 272 ವಿಶ್ರಾಂತಿ ಕೋಣೆ : ಕಲಬುರಗಿ ಜಿಲ್ಲೆಯ ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಹೆಚ್ಚುವರಿಯಾಗಿ 2 ವಿಶ್ರಾಂತಿ ಕೋಣೆಗಳನ್ನಾಗಿ ಗುರುತಿಸಲಾಗಿದೆ. ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರು ಪೇರು ಹಾಗೂ ಕೊರೊನಾ ಶಂಕೆ ಕಂಡು ಬಂದಲ್ಲಿ ಇಂಥವರಿಗೆ ವಿಶೇಷ ಕೋಣೆಯಲ್ಲಿ ಕೂಡಿಸಿ ಪರೀಕ್ಷೆ ಬರೆಯಲು ಕ್ರಮ ಕೈಗೊಳ್ಳಲಾಗಿದೆ. ಬೆಳಗಾವಿಯಲ್ಲಿ ಸಂಚಾರ, ವಸತಿ ಸೌಲಭ್ಯ ಬೆಳಗಾವಿ ಜಿಲ್ಲೆಯ ಬೆಳಗಾವಿ ಮತ್ತು ಚಿಕ್ಕೋಡಿ ಎರಡೂ ಶೈಕ್ಷಣಿಕ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳನ್ನು  ಕರೆತರಲು ಸರಕಾರಿ ಮತ್ತು ಖಾಸಗಿ ಬಸ್‌ಗಳನ್ನು ಬಳಸಲಾಗುತ್ತಿದೆ. ಸಂಚಾರ ಕಷ್ಟ ಸಾಧ್ಯವಾಗುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗಿದೆ.
ಸೋಂಕಿತರಿಗೆ ಮರು ಪರೀಕ್ಷೆ ಬರೆಯಲು ಅವಕಾಶ ಬಳ್ಳಾರಿ ಜಿಲ್ಲೆಯಲ್ಲಿ ಕ್ವಾರಂಟೈನ್ ಕೇಂದ್ರದಿಂದ ಪರೀಕ್ಷೆಗೆ ಹಾಜರಾಗುವ 116ಮಕ್ಕಳಿಗೆ ವಿಶೇಷ ಕೊಠಡಿ ಒದಗಿಸಲಾಗಿದೆ. ಪಾಸಿಟಿವ್ ಹೊಂದಿರುವ ಇಬ್ಬರು ವಿದ್ಯಾರ್ಥಿಗಳಿಗೆ ಮರುಪರೀಕ್ಷೆಗೆ ಅವಕಾಶ ನೀಡಲಾಗಿದೆ.  
ಗ್ರಾಪಂನಿಂದಲೇ ವಾಹನ:  ತುಮಕೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಸಂಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳನ್ನು ಬಗೆಹರಿಸಲು ತಾಲೂಕು ಮಟ್ಟದ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸಂಪರ್ಕಿಸಲು ಮೊಬೈಲ್ ನಂಬರ್‌ಗಳನ್ನು ನೀಡಲಾಗಿದೆ. ಇನ್ನು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪರೀಕ್ಷಾ ಕೇಂದ್ರಕ್ಕೆ ಬರಲು ವಿದ್ಯಾರ್ಥಿ ಬಸ್ ತಪ್ಪಿಸಿಕೊಂಡರೆ ಅಂತಹವರನ್ನು ಕರೆತರಲೆಂದೇ ಸ್ಥಳೀಯ ಗ್ರಾಪಂ ವತಿಯಿಂದ ಒಂದು ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಲಾಗಿದೆ.
ಅಣಕು ಪರೀಕ್ಷೆ : ವಿಜಯಪುರ ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಗೆ 247 ಕೌಂಟರ್ ತೆರೆಯಲಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಜೂ.24ರಂದು ಅಣಕು ಪರೀಕ್ಷೆ ಆಯೋಜಿಸಲಾಗುತ್ತಿದೆ.

(ಕಿವಿಮಾತು)

– ಹೆತ್ತವರೇ,  ಧೈರ್ಯ ತುಂಬಿ

– ಮಕ್ಕಳು ಮಾನಸಿಕ ಒತ್ತಡ, ಗೊಂದಲಕ್ಕೆ ಒಳಗಾಗುವಂತೆ ವರ್ತಿಸಬೇಡಿ, ಧೈರ್ಯ ತುಂಬಿ.

– ಬಸ್‌ನಲ್ಲಿ ಹೋಗುವಾಗ ಅಂತರ ಕಾಪಾಡಲು ಹೇಳಿ. ಸಾಧ್ಯವಿದ್ದವರು ಕರೆದುಕೊಂಡು ಹೋಗಿ, ಕರೆ ತನ್ನಿ.

– ಸಾಧ್ಯವಿದ್ದರೆ ಮಾಸ್ಕ್ ಜತೆಗೆ ಒಂದು ಪುಟ್ಟ ಸ್ಯಾನಿಟೈಸರ್ ಬಾಟಲಿ ಕೊಡಿಸಿ. ಇದು ಶುಚಿಗೆ ಸಹಕಾರಿ.

– ಪರೀಕ್ಷೆ ಮುಗಿಸಿ ನೇರವಾಗಿ ಮನೆಗೆ ಬರಲು ತಿಳಿಸಿ. ಬಂದ ಕೂಡಲೇ ಬಿಸಿ ನೀರಲ್ಲಿಸ್ನಾನ ಮಾಡಲಿ.

ಮೇಲ್ವಿಚಾರಕರಿಗೆ

– ಮಕ್ಕಳ ಪರೀಕ್ಷಾ ಕೊಠಡಿ ಯಾವುದೆಂದು ಒಂದು ದಿನ ಮೊದಲೇ ತಿಳಿಸಿ. 

– ಪಿಯುಸಿ ಪರೀಕ್ಷೆಯಂತೆ ಗುಂಪುಗೂಡಲು ಬಿಡಬೇಡಿ.

– ಯಾರಿಗೋ ಸಣ್ಣ ಜ್ವರವಿದ್ದರೆ ಗಾಬರಿ ಹುಟ್ಟಿಸಬೇಡಿ. ಪ್ರತ್ಯೇಕ ಕೋಣೆಗೆ ಸಾವಧಾನದಿಂದ ಕಳುಹಿಸಿ.

– ಪರೀಕ್ಷೆಗೆ ಬರುವುದು ಸ್ವಲ್ಪ ತಡವಾದರೆ ನಿಯಮಗಳಿಗೆ ಕಟ್ಟು ಬೀಳಬೇಡಿ.

– ಎಲ್ಲ ಮಕ್ಕಳನ್ನು ನಗು ಮುಖ, ಧೈರ್ಯದ ಮಾತಿನೊಂದಿಗೆ ಬರ ಮಾಡಿಕೊಳ್ಳಿ.

– ಯಾವ ಜಿಲ್ಲೆಗಳಲ್ಲಿ ಬಸ್ ವ್ಯವಸ್ಥೆ?

-ಶಿವಮೊಗ್ಗ (142 ಖಾಸಗಿ, 56 ಸರಕಾರಿ ಬಸ್),

ಮೈಸೂರು(54 ಬಸ್),

ಕಲಬುರಗಿ(169 ಖಾಸಗಿ),

ವಿಜಯಪುರ(241 ಸರಕಾರಿ ಮತ್ತು 197 ಖಾಸಗಿ ಬಸ್) ಜಿಲ್ಲೆಗಳಲ್ಲಿವ್ಯವಸ್ಥೆ ಮಾಡಲಾಗಿದೆ. ಇದೇ ರೀತಿಯ ವ್ಯವಸ್ಥೆ ಬೇರೆ ಜಿಲ್ಲೆಗಳಲ್ಲೂ ಅಗತ್ಯಕ್ಕೆ ಅನುಗುಣವಾಗಿ ಕೈಗೊಳ್ಳಲಾಗಿದೆ.

– ವಿದ್ಯಾರ್ಥಿಗಳಿಗೆ ಎಲ್ಲೆಲ್ಲಿ ಹಾಸ್ಟೆಲ್ ಸೌಲಭ್ಯ?

– ಶಿವಮೊಗ್ಗ(773 ವಿದ್ಯಾರ್ಥಿಗಳಿಗೆ 62 ಹಾಸ್ಟೆಲ್), ಹಾಸನ, ಕೊಡಗು, ಬೆಳಗಾವಿ ಮತ್ತು ಕಲಬುರಗಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹಾಸ್ಟೆಲ್ ವ್ಯಸವ್ಥೆ ಕಲ್ಪಿಸಲಾಗಿದೆ.

73 ವಿದ್ಯಾರ್ಥಿಗಳಿಗೆ ಸಿಕ್ಕಿಲ್ಲ ಹಾಲ್ ಟಿಕೆಟ್‌ ಕಲಬುರಗಿ: ಶಾಲೆ ಮಾನ್ಯತೆ ನವೀಕರಣದ ಬಗ್ಗೆ ಶಿಕ್ಷಣ ಇಲಾಖೆ ಹಾಗೂ ಶಾಲಾ ಆಡಳಿತ ಮಂಡಳಿ ನಡುವಿನ ಜಗ್ಗಾಟದಿಂದ ಕಲಬುರಗಿ ನಗರದ 4 ಶಾಲೆಗಳ 73 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ಸಿಕ್ಕಿಲ್ಲ  ಎಂದು ಮಾಜಿ ಸಚಿವ ಬಾಬುರಾವ್ ಚವ್ಹಾಣ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘‘ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಇನ್ನೂ ಎರಡು ದಿನ ಬಾಕಿ ಇದೆ. ಆದರೂ ವಿದ್ಯಾರ್ಥಿಳಿಗೆ ಇಲ್ಲಿಯವರೆಗೆ ಹಾಲ್ ಟಿಕೆಟ್ ನೀಡಿಲ್ಲ. ಬಿಜೆಪಿ ಸರಕಾರ ಅವಧಿಯಲ್ಲಿ ಈ ರೀತಿಯ ಅನ್ಯಾಯ ಆಗುತ್ತಿದೆ. ಈ ಬಗ್ಗೆ ಶಿಕ್ಷ ಣ ಸಚಿವ ಸುರೇಶ ಕುಮಾರ್ ಅವರ ಗಮನಕ್ಕೆ ತರುತ್ತೇವೆ,’’ ಎಂದರು.

ಪರೀಕ್ಷೆ ಬರೆಯಲಿರುವವರು

ಹೊಸ ಅಭ್ಯರ್ಥಿಗಳು – 7,64,226

ಪುನರಾವರ್ತಿತ ಅಭ್ಯರ್ಥಿಗಳು- 54,002

ಖಾಸಗಿ ಅಭ್ಯರ್ಥಿಗಳು – 20,893

ಖಾಸಗಿ ಪುನಾರವರ್ತಿತ ಅಭ್ಯರ್ಥಿಗಳು – 8,605

ಇತರೆ ಅಭ್ಯರ್ಥಿಗಳು – 477

ಒಟ್ಟು ಅಭ್ಯರ್ಥಿಗಳು – 8,48,203

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top