ರಾಜ್ಯದಲ್ಲಿ ಕೊರೊನಾ ತೀವ್ರಗತಿಯಲ್ಲಿ ಏರಿಕೆ | ಆ.15ರ ಹೊತ್ತಿಗೆ 1.5 ಲಕ್ಷ ಸೋಂಕು?
ಬೆಂಗಳೂರಿನ ಆಸ್ಪತ್ರೆಗಳಲ್ಲಿ ಬೆಡ್ ಸಿಗುತ್ತಿಲ್ಲ , ಪಾಸಿಟಿವ್ ಬಂದರೂ ಮನೆಯಲ್ಲೇ ಇರುವ ದುಸ್ಥಿತಿ
ವಿಕ ಸುದ್ದಿಲೋಕ ಬೆಂಗಳೂರು.
ಮಹಾರಾಷ್ಟ್ರ, ದಿಲ್ಲಿಗಳಲ್ಲಿ ಕೊರೊನಾ ನಿಯಂತ್ರಣ ತಪ್ಪಿದೆ ಎಂಬ ಆತಂಕದಲ್ಲಿರುವಾಗಲೇ ರಾಜ್ಯವೂ ಅದೇ ದಾರಿಯಲ್ಲಿ ಸಾಗುವ ಆಪಾಯ ಎದುರಾಗಿದೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಸೋಂಕು ಮತ್ತು ಸಾವು ಬೆಚ್ಚಿ-ಬೀಳಿಸಿದೆ. ಸಾರ್ವಜನಿಕರು ಮತ್ತು ಸರಕಾರ ಕೂಡಲೇ ಎಚ್ಚೆತ್ತು-ಕೊಳ್ಳ-ದಿದ್ದರೆ ದೊಡ್ಡ ಮಟ್ಟದ ಉತ್ಪಾತ ಕಾದಿದೆ. ಇದೇ ಪ್ರಮಾಣ-ದಲ್ಲಿ ಸೋಂಕು ಮುಂದುವರಿದರೆ ಆಗಸ್ಟ್ 15ರ ಹೊತ್ತಿಗೆ ರಾಜ್ಯದಲ್ಲಿ 1.5 ಲಕ್ಷ ಮಂದಿಗೆ ಸೋಂಕು ತಗಲ-ಬಹುದೆಂಬ ಎಚ್ಚರಿಕೆಯನ್ನು ರಾಜ್ಯದ ಆರೋಗ್ಯ ಇಲಾಖೆಯೇ ನೀಡಿದೆ.
ಬೆಂಗಳೂರಿನಲ್ಲಿ ಕೊರೊನಾ ಪೀಡಿತರಿಗೆ ಆಸ್ಪತ್ರೆಗಳಲ್ಲಿ ಬೆಡ್ ಸಿಗುತ್ತಿಲ್ಲ . ಪಾಸಿಟಿವ್ ಖಚಿತವಾದ ಬಳಿಕವೂ ಎರಡು ದಿನ ಮನೆಯಲ್ಲೇ ಕಾಯಲು ತಿಳಿಸಲಾಗುತ್ತಿದೆ. ತುರ್ತು ಚಿಕಿತ್ಸೆ ನೀಡುವ ಐಸಿಯುಗಳೂ ಫುಲ್ ಆಗಿವೆ. ಇದರಿಂದಾಗಿ ಸಾವಿನ ಪ್ರಮಾಣ ಮತ್ತಷ್ಟು ಏರುವ ಅಪಾಯವಿದೆ.
ರಾಜ್ಯದಲ್ಲಿ ಮೇ 21ರಂದು ಕೇವಲ 1605 ಪ್ರಕರಣಗಳಿ-ದ್ದವು. ಜೂನ್ 21ಕ್ಕೆ ಅದು 9150ಕ್ಕೇರಿದೆ. ಅಂದರೆ ಒಂದೇ ತಿಂಗಳಲ್ಲಿ ಆರು ಪಟ್ಟು ಹೆಚ್ಚಳ. ರಾಜಧಾನಿಯಲ್ಲಿ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದ್ದು , ಮೇ 21ರಿಂದ ಜೂನ್ 21ರ ವರೆಗೆ 55 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಬೆಂಗಳೂರಿನ ಸಾವಿನ ಪ್ರಮಾಣ 5.1% ಇದ್ದು, ದಿಲ್ಲಿ (3.7%)ಗಿಂತಲೂ ಹೆಚ್ಚು. ಬಹುತೇಕ ಮುಂಬಯಿಗೆ (5.4%) ಹತ್ತಿರವಿದೆ. ಮಾತ್ರವಲ್ಲ , ಜಗತ್ತಿನಲ್ಲೇ ಅತಿ ಹೆಚ್ಚು ಸಾವು ಸಂಭವಿಸಿದ ಅಮೆರಿಕದಲ್ಲೂ ಮರಣ ಪ್ರಮಾಣ ಶೇ. 5.2 ಮಾತ್ರ ಇದೆ.
+++++++++-+
ರಾಜ್ಯದಲ್ಲಿ ಹೈ ಜಂಪ್
ರಾಜ್ಯದಲ್ಲಿ ಮೊದಲ ಒಂದು ಸಾವಿರ ಕೇಸು ದಾಖಲಾಗಲು 113 ದಿನಗಳು ಬೇಕಾಗಿದ್ದವು. ಆದರೆ, ಮೇ 15ರಿಂದ ಜೂನ್ 21ರವರೆಗಿನ ಕೇವಲ 36 ದಿನಗಳಲ್ಲಿ 8106 ಪ್ರಕರಣಗಳು ದಾಖಲಾಗಿವೆ. ಅದರಲ್ಲೂ ಕಳೆದ ಒಂದೇ ವಾರದಲ್ಲಿ 2150 ಪಾಸಿಟಿವ್ ಬಂದಿದೆ.
+++++++++++
ಹೌದು. ಸೋಂಕಿನ ಪ್ರಮಾಣ ಏರುತ್ತಿದೆ. ಸರಕಾರ ನಿಗಾ ಇಟ್ಟಿದೆ. ಹೊರ ರಾಜ್ಯ, ವಿದೇಶಗಳಿಂದ ಆಗಮಿಸಿದವರಿಂದ ಸ್ಥಳೀಯರಿಗೆ ಸೋಂಕು ಹರಡಿದೆ. ಸೋಂಕು ತಡೆಗೆ ಆರೋಗ್ಯ ಕಾರ್ಯಪಡೆ ರಚಿಸಲಾಗಿದೆ. ಇದೀಗ ಖಾಸಗಿ ಆಸ್ಪತ್ರೆಗಳಲ್ಲೂ ಕೊರೊನಾ ಪರೀಕ್ಷೆ, ಚಿಕಿತ್ಸೆಗೆ ಅನುಮತಿ ನೀಡಲಾಗಿದೆ.
-ಡಾ ಸುಧಾಕರ್ ವೈದ್ಯಕೀಯ ಖಾತೆ ಸಚಿವ
+++++++++
ರಾಜಧಾನಿಯಲ್ಲೇ ಯಾಕೆ ಹೆಚ್ಚಳ?
*ತೀವ್ರಗತಿಯಲ್ಲಿ ಏರುತ್ತಿರುವ ಸೋಂಕು ಸಮುದಾಯದಲ್ಲಿ ಪ್ರಸರಣದ ಭೀತಿ
ರೋಗ ಲಕ್ಷಣ ಕಂಡುಬಂದರೂ ಪರೀಕ್ಷಿಸಿಕೊಳ್ಳಲು ವಿಳಂಬ
ವೊದಲು ಅನ್ಯ ಆಸ್ಪತ್ರೆಗೆ ಹೋಗಿ ಕೊನೆ ಕ್ಷಣದಲ್ಲಿ ವಿಕ್ಟೋರಿಯಾಗೆ ದಾಖಲು
ಸ್ನೇಹಿತರು, ಮನೆಯವರ ರಕ್ಷಣೆ ಹೆಸರಲ್ಲಿ ಟ್ರಾವೆಲ್ ಹಿಸ್ಟರಿ ಮುಚ್ಚಿಡುವುದು
ಅನ್ಯ ರೋಗಗಳಿರುವವರು ಸೂಕ್ತ ರಕ್ಷಣಾ ವ್ಯವಸ್ಥೆ ಹೊಂದಿಲ್ಲದಿರುವುದು.
++++++++++++++++
ಇಳಿಯುವ ಲಕ್ಷಣವಿಲ್ಲ
ಫೆ. 24 – 01
ಮೇ 15 – 1056
ಜೂನ್ 1 – 3,221
ಜೂನ್ 7 – 5,452
ಜೂನ್ 14 – 7,000
ಜೂನ್ 21 – 9,150